Site icon Vistara News

Self Harming : ಬೇಲ್‌ ಪಡೆದು ಜೈಲಿನಿಂದ ಹೊರಬಂದ ರೌಡಿಶೀಟರ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ

Self Harming Rowdy sheeter commits suicide in Anekal

ಆನೇಕಲ್: ನೇಣು ಬಿಗಿದುಕೊಂಡು (Self Harming) ರೌಡಿ ಶೀಟರ್ (Rowdy Sheeter) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ (Anekal News) ದಿನ್ನೂರಿನಲ್ಲಿ ನಡೆದಿದೆ. ಅರುಣ್ ಅಲಿಯಾಸ್ ಚಿನ್ನಿ (28) ಆತ್ಮಹತ್ಯೆಗೆ ಶರಣಾದವನು.

2019ರಲ್ಲಿ ಲೋಕನಾಥ್ ಎಂಬಾತನ ಕೊಲೆ ಪ್ರಕರಣದಲ್ಲಿ ಅರುಣ್‌ ಜೈಲುಪಾಲಾಗಿದ್ದ. ನಂತರ ಜಾಮೀನಿನ ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದ. ಇತ್ತೀಚಿಗೆ ಅರುಣ್ ಮಾನಸಿಕ ಖಿನ್ನತೆಗೊಳಗಾಗಿದ್ದ ಎನ್ನಲಾಗಿದೆ. ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅರುಣ್‌ ರೂಮಿನ ಬಾಗಿಲು ತೆರೆಯದೇ ಇದ್ದಾಗ, ಬಾಗಿಲು ಒಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆನೇಕಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: JP Nadda: ಕಳವಾಗಿದ್ದ ಜೆ.ಪಿ.ನಡ್ಡಾ ಕಾರು ಕೊನೆಗೂ ಸಿಕ್ತು; ಕದ್ದ ಶಾಹಿದ್‌ ಯಾರು?

ಸಿಎಂ ಸಲಹೆಗಾರ ಬಿ.ಆರ್.ಪಾಟೀಲ್‌ ಕಾಲೇಜಿನ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

ಕಲಬುರಗಿ: ಜಿಲ್ಲೆಯ ಆಳಂದ ಪಟ್ಟಣದ (Aland) ಸಮತಾ ಆಯುರ್ವೇದಿಕ್‌ ಮೆಡಿಕಲ್ ಕಾಲೇಜಿನ‌ (Samata Ayurvedic College) ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯೊಬ್ಬರು (Student Death) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಧುರಿ (20) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.

ಮಹಾರಾಷ್ಟ್ರದ ಸೋಲಾಪುರ ಜಿಲ್ಲೆ ಆಂದಳಾಗಾಂವ್‌ ಗ್ರಾಮದ ನಿವಾಸಿಯಾದ ಮಾಧುರಿಯು ಸಮತಾ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎಂಎಸ್‌ ಅಧ್ಯಯನ ಮಾಡುತ್ತಿದ್ದರು. ಈ ಕಾಲೇಜು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆಗಾರ, ಶಾಸಕ ಬಿ.ಆರ್‌.ಪಾಟೀಲ್‌ ಅವರಿಗೆ ಸೇರಿದೆ.

ಹಾಸ್ಟೆಲ್‌ ಕೋಣೆಯ ಫ್ಯಾನ್‌ಗೆ ವಿದ್ಯಾರ್ಥಿನಿಯು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಅಂಕಗಳಿಕೆಯ ಒತ್ತಡ, ಪರೀಕ್ಷೆಯ ಭೀತಿಯಿಂದಾಗಿ ಇವರು ನೇಣಿಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಆತ್ಮಹತ್ಯೆ; 8 ಜನರ ವಿರುದ್ಧ ಕೇಸ್

ವಿಜಯನಗರ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ನರೇಗಾ ಕಾಮಗಾರಿ ವಿರೋಧಿಸಿದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರಿಗೆ ಜಾತಿನಿಂದನೆ ಮಾಡಲಾಗಿದ್ದು, ಇದರಿಂದ ಮನನೊಂದ ಮಹಿಳೆಯು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆ ದೀದ್ಗಿ ಮೈಲವ್ವ ಅವರ ಪುತ್ರನು ಗ್ರಾಮ ಪಂಚಾಯಿತಿ ಪಿಡಿಒ ಸೇರಿ ಎಂಟು ಜನರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಜಾತಿನಿಂದನೆಯ ದೂರು ದಾಖಲಿಸಿದ್ದಾನೆ.

ಹಗರಿಬೊಮ್ಮನಹಳ್ಳಿ ತಾಲೂಕಿನ ಮೋರಿಗೇರಿ ಗ್ರಾಮದಲ್ಲಿ ದೀದ್ಗಿ ಮೈಲವ್ವ ಅವರು ಸಾಗುವಳಿ ಮಾಡಿದ್ದರು. ಐದು ಎಕರೆ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡಿದ್ದರು. ಕಳೆದ 15-20 ವರ್ಷದಿಂದ ಅವರು ಸಾಗುವಳಿ ಮಾಡುತ್ತಿದ್ದರು. ಆದರೆ, ಪಂಚಾಯಿತಿಯಿಂದ ನರೇಗಾ ಕಾಮಗಾರಿ ಕೈಗೊಳ್ಳಲಾಗಿದ್ದು, ಇದನ್ನು ದೀದ್ಗಿ ಮೈಲವ್ವ ಅವರು ವಿರೋಧಿಸಿದ್ದರು. ಜಮೀನಿನಲ್ಲಿ ಗೋಕಟ್ಟೆ ನಿರ್ಮಿಸಲು ಏಪ್ರಿಲ್‌ 5ರಂದು ಕಾಮಗಾರಿ ಆರಂಭಿಸಿದ್ದನ್ನು ಇವರು ವಿರೋಧಿಸಿದ್ದರು. ಕಾಮಗಾರಿ ಮುಂದುವರಿಸಿದ ಕಾರಣ ನೊಂದ ಮಹಿಳೆಯು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version