ದೊಡ್ಡಬಳ್ಳಾಪುರ: ಮಹಿಳೆಯ ಐಫೋನ್ ಹೊತ್ತೊಯ್ದ ಕೋತಿಯೊಂದು ಟವರ್ ಏರಿದ ಘಟನೆ ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ (Viral News) ನಡೆದಿದೆ. ತುಳಸಿ ಎಂಬುವವರ ಮನೆಗೆ ನುಗ್ಗಿದ ಮಂಗವೊಂದು ತಿಂಡಿಗಾಗಿ ಹುಡುಕಾಡಿದೆ. ತಿಂಡಿ ಸಿಗದೆ ಇದ್ದಾಗ, ಚಾರ್ಜಿಂಗ್ ಹಾಕಿದ್ದ ಐಫೋನ್ ಕಂಡಿದೆ. ಕ್ಷಣಾರ್ಧದಲ್ಲೆ ಐಫೋನ್ ಹೊತ್ತೊಯ್ದು ಟವರ್ ಏರಿದಿದೆ. ಹೀಗಾಗಿ ಮೊಬೈಲ್ ವಾಪಸ್ ಪಡೆಯಲು ಮಹಿಳೆ ಹಾಗೂ ಸ್ಥಳೀಯರು ಹರಸಾಹಸ ಪಟ್ಟರು. ತಿಂಡಿ ಕೊಡುತ್ತೇವೆ ಎಂದರು ಮೊಬೈಲ್ ಕೊಡದೆ ಮಂಗನಾಟಕ್ಕೆ ಜನರು ಸುಸ್ತ್ ಆದರು.
ಜಿಂಕೆ ಬೇಟೆಯಾಡಿದ ಕಿಡಿಗೇಡಿಗಳು, ಕರೆಂಟ್ ಶಾಕ್‌ಗೆ ಕೋತಿ ಸಾವು
ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದ ಹೆದ್ದಾರಿ ಬದಿಯಲ್ಲಿ ಜಿಂಕೆಯ ಶವ ಪತ್ತೆಯಾಗಿದೆ. ಕಿಡಿಗೇಡಿಗಳು ಮುಂಜಾನೆ ಜಿಂಕೆಯನ್ನು ಕೊಂದು ಹೆದ್ದಾರಿ ಬದಿಯಲ್ಲಿ ಬಿಸಾಡಿದ್ದಾರೆ. ಬೆಳಗ್ಗೆ ಕೆಲವರು ವಾಕಿಂಗ್ ಹೋದಾಗ ಜಿಂಕೆ ಮೃತದೇಹ ಪತ್ತೆಯಾಗಿದೆ. ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪತ್ತೆಯಾಗಿದ್ದು, ಜಿಂಕೆಯನ್ನು ಬೇಟೆಯಾಡಿ ತಂದು ಬಿಸಾಕಿ ಹೋಗಿರುವ ಶಂಕೆ ಇದೆ. ಜಿಂಕೆ ಮೃತದೇಹ ಕಂಡು ಅರಣ್ಯ ಇಲಾಖೆ ಸಿಬ್ಬಂದಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ವಿದ್ಯುತ್ ತಗುಲಿ ಮಂಗ ಸಾವು
ವಿದ್ಯುತ್ ತಗುಲಿ ಮಂಗವೊಂದು ಮೃತಪಟ್ಟಿದೆ. ಹೀಗಾಗಿ ಗ್ರಾಮಸ್ಥರು ಹಿಂದೂ ವಿಧಿವಿಧಾನದಂತೆ ಅಂತ್ಯಕ್ರಿಯೆ ನೇರವೆರಿಸಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಘಟನೆ ನಡೆದಿದೆ. ಮನುಷ್ಯರಿಗೆ ಅಂತ್ಯಕ್ರಿಯೆ ಮಾಡುವ ರೀತಿಯಲ್ಲಿ ಮಂಗನಿಗೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಊರು ತುಂಬಾ ಮೆರವಣಿಗೆ ಮಾಡಿ ಶವಸಂಸ್ಕಾರ ನೆರವೇರಿಸಿದ್ದಾರೆ.
ಇದನ್ನೂ ಓದಿ: Acid attack: ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಯುವಕನ ಮೇಲೆ ಆ್ಯಸಿಡ್ ದಾಳಿ!
ಚಾಮುಂಡಿ ಬೆಟ್ಟದಲ್ಲಿ ಹೆಬ್ಬಾವು ಪ್ರತ್ಯಕ್ಷ
ಚಾಮುಂಡಿ ಬೆಟ್ಟದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷಗೊಂಡಿದೆ. ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ತಡರಾತ್ರಿ ಬೃಹತ್ ಗಾತ್ರದ ಹೆಬ್ಬಾವು ರಸ್ತೆ ದಾಟುತ್ತಿರುವುದನ್ನು ಕಂಡು ವಾಹನ ಸವಾರರು ಗಾಬರಿಗೊಂಡಿದ್ದಾರೆ. ಹೆಬ್ಬಾವು ಅರಣ್ಯ ಪ್ರದೇಶದೊಳಗೆ ತೆರಳುವವರೆಗೆ ಕೆಲಕಾಲ ಅಲ್ಲೇ ನಿಂತು ವೀಕ್ಷಣೆ ಮಾಡಿದ ವಾಹನ ಸವಾರರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.
ಮಲೆನಾಡಿನಲ್ಲಿ ಕಾಡಾನೆ ಹಾವಳಿ
ಮಲೆನಾಡಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ಕಾಡಾನೆ ದಾಳಿಯಿಂದ ರೈತರ ಬೆಳೆ ಸಂಪೂರ್ಣ ನಾಶವಾಗಿದೆ. ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ತಡರಾತ್ರಿ ಎರಡು ಕಾಡಾನೆಗಳು ದಾಳಿ ಮಾಡಿದೆ. ಪುರದಾಳು ಗ್ರಾಮದ ರಾಜೇಶ್ ಹಾಗೂ ಬೀರಪ್ಪ, ನಾಗರಾಜ್ ಎಂಬುವರ ತೋಟ-ಹೊಲದಲ್ಲಿರುವ ಬೆಳೆ ನಾಶವಾಗಿದೆ. ಅಡಿಕೆ ಹಾಗೂ ತೆಂಗಿನ ಮರಗಳನ್ನು ಬುಡಮೇಲು ಮಾಡಿದೆ. ಜೋಳ ಹಾಗೂ ಕಬ್ಬನ್ನು ನಾಶ ಮಾಡಿರುವುದರಿಂದ ಅರಣ್ಯ ಇಲಾಖೆಯ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ. ಆನೆಗಳ ಬಗ್ಗೆ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳದ ಇಲಾಖೆ ವಿರುದ್ಧ ರೈತರ ಆಕ್ರೋಶಿಸಿದ್ದಾರೆ.
ಹಾಸನದಲ್ಲಿ ಬೀಟಮ್ಮ ಗ್ಯಾಂಗ್ ಹಾವಳಿ
ಹಾಸನ ಜಿಲ್ಲೆಯಲ್ಲಿ ಬೀಟಮ್ಮ ಗ್ಯಾಂಗ್ ಹಾವಳಿ ಮುಂದುವರಿದಿದೆ. ಕಾಡಾನೆಗಳ ಹಿಂಡು ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಹಾಸನದ ಬೇಲೂರು ತಾಲೂಕಿನ, ತಾವರೆಕೆರೆ ಗ್ರಾಮದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡು ದಾಳಿ ಮಾಡಿದೆ. ಭತ್ತ, ಕಾಫಿ, ಬಾಳೆ, ನಾಟಿ ಮಾಡಿದ ಭತ್ತ ಸೇರಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿದೆ. ಬೀಟಮ್ಮ ಗ್ಯಾಂಗ್‌ನ ಹಾವಳಿಯಿಂದ ಗ್ರಾಮಸ್ಥರು ಬೇಸತ್ತಿದ್ದಾರೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯದ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ