ಬೆಂಗಳೂರು: ವಿಧಾನಸೌಧ ಬಳಿ ಹತ್ತು ಲಕ್ಷ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಎದುರಿಸಿದ್ದ ಸಹಾಯಕ ಎಂಜಿನಿಯರ್ ಜಗದೀಶ್ ಅವರನ್ನು ಪೊಲೀಸರು ಅಕ್ರಮವಾಗಿ ಠಾಣೆಯಲ್ಲಿ ಕೂಡಿ ಹಾಕಿದ್ದಾರೆ ಎಂದು ಅವರ ಪರ ವಕೀಲರೊಬ್ಬರು ಟ್ವೀಟ್ (Illegal cash found) ಮಾಡಿದ್ದಾರೆ.
ವಕೀಲರ ಮನವಿಯನ್ನು ತಿರಸ್ಕರಿಸಿ ಡಿಸಿಪಿಯ ಅಣತಿಯಂತೆ ಜಗದೀಶ್ ಅವರನ್ನು ಕೂಡಿ ಹಾಕಿದ್ದಾರೆಂದು ಆರೋಪಿಸಲಾಗಿದೆ. ವಿಧಾನಸೌಧದಲ್ಲಿ ದಾಖಲೆ ಇಲ್ಲದೆ ೧೦.೫ ಲಕ್ಷ ರೂಪಾಯಿಯನ್ನು ತೆಗೆದುಕೊಂಡು ಹೋಗಿದ್ದ ಸಹಾಯಕ ಎಂಜಿನಿಯರ್ ಜಗದೀಶ್ ವಿಧಾನಸೌಧ ಪೊಲೀಸ್ ಠಾಣೆಗೆ ಗುರುವಾರ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ದಾಖಲೆಗಳ ಸಮೇತ ಠಾಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರಿಂದ ಹಾಜರಾಗಿದ್ದರು
ವಕೀಲ ರಾಜು ಗಡೇಕರ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ವಿಚಾರಣೆಗೆ ಸ್ಪಂದಿಸದಿದ್ದ ಹಿನ್ನಲೆಯಲ್ಲಿ ಜಗದೀಶ್ ಅವರನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದರು.