ಬೆಂಗಳೂರು: ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳ ಮಾರಾಟದ ದಿಗ್ಗಜ ಸಂಸ್ಥೆ ಗಿರಿಯಾಸ್‌ನ ತನ್ನ 109ನೇ ನೂತನ ಮಳಿಗೆಯನ್ನು (Girias Store) ಶ್ರೀ ವರಮಹಾಲಕ್ಷ್ಮೀ ಹಬ್ಬದ ಶುಭ ಸಂದರ್ಭದಲ್ಲಿ ನಗರದ ಅತ್ತಿಬೆಲೆಯಲ್ಲಿ ಶುಕ್ರವಾರ ಉದ್ಘಾಟನೆ ಮಾಡಲಾಗಿದೆ.
107ನೇ ನೂತನ ಮಳಿಗೆ ಸಂತಸದ ಸಮಯದಲ್ಲಿ ಗಿರಿಯಾಸ್ ಮೆಗಾಸ್ಟೋರ್‌ನಲ್ಲಿ ಆ.5ರಿಂದ ಆ.7ರವರೆಗೆ Mega Inaugural sale ಭಾಗವಾಗಿ ಗ್ರಾಹಕರಿಗೆ ಹಲವು ವಿಶೇಷ ಆಫರ್‌ಗಳನ್ನು ನೀಡಲಾಗಿದೆ. ಕ್ಯಾಷ್‌ಬ್ಯಾಕ್, ಬಹುಮಾನ, 1 ರೂ. ಡೌನ್‌ಪೇಮೆಂಟ್‌ನೊಂದಿಗೆ ಇಎಂಐ ಸೌಲಭ್ಯ, ನೋ ಕ್ರೆಡಿಟ್ ಕಾರ್ಡ್ ಚಾರ್ಜ್ ಸೇರಿದಂತೆ ಇನ್ನಿತರ ಹಲವು ಆಫರ್‌ಗಳನ್ನು ನೀಡಲಾಗಿದೆ.
ಗಿರಿಯಾಸ್ ಸಂಸ್ಥೆ 1971ರಲ್ಲಿ ಪ್ರಾರಂಭವಾಗಿ, ಪ್ರಸ್ತುತ 3 ರಾಜ್ಯ ಹಾಗೂ 55 ನಗರಗಳಲ್ಲಿ ಮಳಿಗೆಗಳನ್ನು ಹೊಂದಿದೆ. 51 ವರ್ಷಗಳಿಂದ ಕಡಿಮೆ ಬೆಲೆ, ನಂಬಿಕೆ ಮತ್ತು ಗುಣಮಟ್ಟದ ವಸ್ತುಗಳ ಮಾರಾಟದ ಮೂಲಕ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳ ಮಾರಾಟದಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಗ್ರಾಹಕರ ನೆಚ್ಚಿನ ಸಂಸ್ಥೆಯಾಗಿ ಬೆಳೆದಿದೆ.
ಉತ್ಕೃಷ್ಟ ಗುಣಮಟ್ಟದ ವಸ್ತುಗಳ ಮಾರಾಟ ಹಾಗೂ ಸರ್ವಿಸ್ ಒದಗಿಸುತ್ತಿರುವ ಗಿರಿಯಾಸ್, ಶೇ.98.3 ವಸ್ತುಗಳನ್ನು ಬುಕಿಂಗ್ ಮಾಡಿದ ದಿನವೇ ಮನೆ ಬಾಗಿಲಿಗೆ ತಲುಪಿಸಲಿದೆ. ಸಂಸ್ಥೆಯ ಪ್ರತಿ ಮಳಿಗೆ 5000 ಚದರ ಅಡಿಗಿಂತ ಹೆಚ್ಚು ವಿಸ್ತಾರವಾದ ಕಟ್ಟಡದಲ್ಲಿ ಇದ್ದು, ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ, ತರಬೇತಿ ಪಡೆದ ಸಿಬ್ಬಂದಿ ಇದ್ದು, ಗ್ರಾಹಕರಿಗೆ ಒಂದು ಉತ್ತಮ ಶಾಪಿಂಗ್ ಅನುಭವವನ್ನು ನೀಡುತ್ತದೆ.
ಗಿರಿಯಾಸ್ 109ನೇ ಮಳಿಗೆ ವಿಳಾಸ:
ಗಿರಿಯಾಸ್ ಮೆಗಾಸ್ಟೋರ್, ಹೊಸೂರು ರಸ್ತೆ, ಆರ್‌ಟಿಒ ಕಚೇರಿ ಎದುರು, ಎ2 ರೆಸ್ಟೋರೆಂಟ್ ಬಳಿಕ, ಅತ್ತಿಬೆಲೆ, ಬೆಂಗಳೂರು-562107, ಮೊ: 9900977747