Site icon Vistara News

ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಹರಿದ ಬೊಲೆರೋ ಪಿಕಪ್: 7 ವರ್ಷದ ಬಾಲಕಿ ಸ್ಥಳದಲ್ಲೇ ಸಾವು

ಬೆಂಗಳೂರು: ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಬೊಲೆರೋ ಪಿಕಪ್‌ ವಾಹನವೊಂದು ಹರಿದ ಪರಿಣಾಮ 7 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಸಿಟಿ ಮಾರ್ಕೆಟ್‌ನಲ್ಲಿ ನಡೆದಿದೆ.

ಜಾತ್ರೆಯಲ್ಲಿ ಪ್ಯಾನ್ಸಿ ಐಟಂ ಮಾರಾಟ ಮಾಡಲು ಬಂದಿದ್ದ 7 ವರ್ಷದ ಶಿವಣ್ಯ ಸಿಟಿ ಮಾರ್ಕೆಟ್ ಬಳಿಯ ಅಂಗಡಿಯೊಂದರ ಬಳಿ ಪೋಷಕರ ಜೊತೆ ಮಲಗಿದ್ದರು. ಜಾತ್ರೆ ಮುಗಿಸಿಕೊಂಡು ತಡರಾತ್ರಿ ಊರಿಗೆ ಹೋಗಲು ಬಸ್‌ ಇಲ್ಲದ ಕಾರಣ ಸಿಟಿ ಮಾರ್ಕೆಟ್‌ನ ಅಂಗಡಿಯೊಂದರ ಮುಂದೆ ಮಲಗಿದ್ದರು.

ಬೆಳಗ್ಗಿನ ಜಾವ ಮಾರ್ಕೆಟ್‌ಗೆ ಹೂ ತಂದಿದ್ದ ಬೊಲೆರೋ ಪಿಕಪ್‌ ವಾಹನ ಫುಟ್‌ಪಾತ್‌ ಮೇಲೆ ಮಲಗಿದ್ದವರ ಮೇಲೆ ಏಕಾಏಕಿ ಹರಿದಿದೆ. ಈ ವೇಳೆ 7 ವರ್ಷದ ಶಿವಣ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನೆ ಬಳಿಕ ಬೊಲೆರೋ ಪಿಕಪ್‌ ವಾಹನವನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಸಿಟಿ ಮಾರ್ಕೆಟ್‌ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version