Site icon Vistara News

Abuse in Rapido : ರ‍್ಯಾಪಿಡೊ ಆಟೋದಲ್ಲಿ ಮಹಿಳೆಗೆ ಲೈಂಗಿಕ ದೌರ್ಜನ್ಯ, ಹೊರಗೆ ತಳ್ಳಿದ ಚಾಲಕ

Physical abuse in Rapido

ಬೆಂಗಳೂರು: ದೇಶದಲ್ಲಿ ಮಹಿಳಾ ಸುರಕ್ಷತೆಯ (Women security) ಬಗ್ಗೆ ದೊಡ್ಡ ಮಾತುಗಳನ್ನು ಹೇಳುತ್ತೇವೆ, ಕೆಲವೊಂದು ಸುರಕ್ಷತಾ ಕ್ರಮಗಳನ್ನು (Security Measures) ಕೈಗೊಂಡಿದ್ದೂ ನಿಜ. ಇಷ್ಟಿದ್ದರೂ, ಸುರಕ್ಷತೆಗೆ ಹಲವು ಎಚ್ಚರಿಕೆಗಳನ್ನು ತೆಗೆದುಕೊಂಡ ಹೊರತಾಗಿಯೂ ಸಾರ್ವಜನಿಕ ಜಾಗದಲ್ಲೇ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಬೆಂಗಳೂರಿನ ಮಹಿಳೆಯೊಬ್ಬರಿಗೆ ಸಾರ್ವಜನಿಕ ಸಾರಿಗೆಯಾಗಿರುವ ರ‍್ಯಾಪಿಡೋ ಆಟೋ ರಿಕ್ಷಾದಲ್ಲೇ (Rapido Autos) ಲೈಂಗಿಕ ದೌರ್ಜನ್ಯ (Physical Abuse) ನಡೆಸಿದ್ದು ವರದಿಯಾಗಿದೆ (Abuse in Rapido).

ಬೆಂಗಳೂರಿನಲ್ಲಿ ಮಹಿಳೆಯೊಬ್ಬರಿಗೆ ರ‍್ಯಾಪಿಡೊ ಆಟೊ ಚಾಲಕನೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದಾಗಿ ದೂರು ದಾಖಲಾಗಿದೆ. ದೌರ್ಜನ್ಯ ನಡೆಸಿದ್ದು ಮಾತ್ರವಲ್ಲದೆ ಮಹಿಳೆಯನ್ನು ಆಟೋ ರಿಕ್ಷಾದಿಂದ ಹೊರಗೆಳೆದು ಹಾಕಿದ್ದಾನೆ ಎನ್ನಲಾಗಿದೆ. ಕಳೆದ ಬುಧವಾರ ಈ ಘಟನೆ ನಡೆದಿದ್ದು, ಗುರುವಾರ ಈ ಬಗ್ಗೆ ಮಹಿಳೆಯ ಗೆಳೆಯ ಅಂಕುರ್‌ ಬಾಗ್ಚಿ ಅವರು ಎಕ್ಸ್‌ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಜತೆಗೆ ಇಂಥ ಅಗ್ರಿಗೇಟರ್‌ ಸೇವೆಗಳನ್ನು ಬಳಸಬಾರದು ಎಂದು ಕೂಡಾ ಕೇಳಿಕೊಂಡಿದ್ದಾರೆ.

ರ‍್ಯಾಪಿಡೊದಲ್ಲಿದ್ದಾರೆ ಪರಭಕ್ಷಕರು ಎಂದ ಬಾಗ್ಚಿ

ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅಂಕುರ್‌ ಬಾಗ್ಚಿ ಅವರು, ʻರ‍್ಯಾಪಿಡೊ ಪರಭಕ್ಷಕರನ್ನು ಪೋಷಣೆ ಮಾಡುತ್ತಿದೆ. ಹೀಗಾಗಿ ರ‍್ಯಾಪಿಡೋ ಬಳಸಬೇಡಿ. ನನ್ನ ಗೆಳೆಯರಲ್ಲಿ ಒಬ್ಬರಾಗಿರುವ ಮಹಿಳೆಗೆ ಕಳೆದ ರಾತ್ರಿ ಒಬ್ಬ ರ‍್ಯಾಪಿಡೊ ಆಟೋ ಚಾಲಕ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಆಟೋದಲ್ಲಿ ಸಾಗುತ್ತಿದ್ದ ವೇಳೆ ಚಾಲಕ ಮಹಿಳೆಯ ಮೈ ಮುಟ್ಟಿ ಅಹಸ್ಯಕರವಾಗಿ ವರ್ತಿಸಿದ್ದಾನೆ. ಆಕೆ ಆತನನ್ನು ಹಿಂದಕ್ಕೆ ತಳ್ಳಿದಾಗ ಆತ ಸಿಟ್ಟಿಗೆದ್ದು ಈ ಮಹಿಳೆಯನ್ನೇ ಹೊರತಳ್ಳಿದ್ದಾನೆʼʼ ಎಂದು ಹೇಳಿದ್ದಾರೆ.

ಆ ಮಹಿಳೆ ರ‍್ಯಾಪಿಡೋ ಕಂಪನಿಗೆ ಕರೆ ಮಾಡಿ ವಿಷಯ ತಿಳಿಸಿದಾಗ, ದಯವಿಟ್ಟು ಕ್ಷಮಿಸಿ, ನಾವು ಆಟೋ ಚಾಲಕರ ವಿವರಗಳನ್ನು ಇಟ್ಟುಕೊಂಡಿರುವುದಿಲ್ಲ. ಇದು ನಮ್ಮ ಸಮಸ್ಯೆಯಲ್ಲ ಎಂದು ಹೇಳಿದ್ದಾರೆ. ನಾವು ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ನನ್ನ ಗೆಳೆಯರಲ್ಲಿ ಒಬ್ಬರಾಗಿರುವ ಇವರಿಗೆ ವೈದ್ಯಕೀಯ ನೆರವು ಕೊಡಿಸಬೇಕಾಗಿದೆ. ಇದೇ ವೇಳೆ ಆ ನಿರ್ದಿಷ್ಟ ರ‍್ಯಾಪಿಡೋ ಚಾಲಕನನ್ನು ಪತ್ತೆ ಹಚ್ಚುವುದು ಹೇಗೆ? ಎಂಬುದರ ಬಗ್ಗೆ ನಿಮಗೆ ಕ್ಲೂ ಇದ್ದರೆ ದಯವಿಟ್ಟು ತಿಳಿಸಿ. ಇನ್ನೊಂದು ವಿಷಯ, ನೀವು ಸೇಫಾಗಿರಿ. ನಿಮ್ಮ ಮಹಿಳಾ ಗೆಳತಿಯರಿಗೆ ಮತ್ತು ಕುಟುಂಬದವರಿಗೆ ರ‍್ಯಾಪಿಡೋ ಬಳಸದಂತೆ ತಿಳಿಸಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Physical Abuse : ನೀಚ ಕೃತ್ಯ; ನರ್ಸರಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸ್ಕೂಲ್ ವ್ಯಾನ್ ಡ್ರೈವರ್​

ಇನ್ನೂ ಹಲವರಿಂದ ರ‍್ಯಾಪಿಡೋ ಬಗ್ಗೆ ದೂರು

ಈ ನಡುವೆ ಬಾಗ್ಚಿ ಅವರ ಪೋಸ್ಟ್‌ ಗೆ ಪ್ರತಿಯಾಗಿ ಇನ್ನೂ ಹಲವರು ತಮಗಾದ ಅನುಭವ ಹಂಚಿಕೊಂಡಿದ್ದಾರೆ.
ʻʻಕೆಲವೊಮ್ಮೆ ನಾನು ರ‍್ಯಾಪಿಡೋ ಬುಕ್‌ ಮಾಡಿದಾಗ ಆಪ್‌ನಲ್ಲಿ ತೋರಿಸುವ ವಾಹನವೇ ಬೇರೆ ಬರುವ ವಾಹನವೇ ಬೇರೆ ಆಗಿರುತ್ತಿತ್ತು. ನಂಬರ್‌ಗಳೇ ಬೇರೆಯಾಗಿರುತ್ತಿದ್ದವು. ಕೆಲವೊಮ್ಮೆ ಬಾಡಿಗೆ ಮಾಡುವವರು ಯಾರದೋ ಆಪ್‌ ಬಳಸಿ ಸೇವೆ ನೀಡುತ್ತಿದ್ದರು. ಇದು ಅತ್ಯಂತ ಅಸುರಕ್ಷಿತ, ಇದಕ್ಕೆ ಅವಕಾಶ ನೀಡಬಾರದುʼʼ ಎಂದು ಒಬ್ಬರು ಹೇಳಿದ್ದಾರೆ.

ಇನ್ನೊಬ್ಬರಂತೂ ಓ ದೇವರೇ,, ಎಲ್ಲಿ ನಡೆದಿದ್ದು ಇದು, ಇದು ಕೇವಲ ರ‍್ಯಾಪಿಡೋ ಕಥೆ ಮಾತ್ರವಲ್ಲ, ಹೊಸದಾಗಿ ಆರಂಭವಾಗಿರುವ ಹಲವಾರು ಸ್ಟಾರ್ಟಪ್‌ಗಳಿಗೆ ಯಾವುದೇ ಹಿನ್ನೆಲೆ ಇರುವುದಿಲ್ಲ. ಅವುಗಳನ್ನು ಯಾರೂ ಗಮನಿಸುವುದೂ ಇಲ್ಲʼʼ ಎಂದು ಬರೆದಿದ್ದಾರೆ.

Physical abuse in Rapido

ಬೆಂಗಳೂರು ಪೊಲೀಸರು ಈ ಟ್ವೀಟ್‌ ನ್ನು ಗಮನಿಸಿ, ಈ ಬಗ್ಗೆ ಹೆಚ್ಚಿನ ಮಾಹಿತಿ ಕೊಡಿ ಎಂದು ಕೇಳಿದ್ದಾರೆ.

Exit mobile version