Site icon Vistara News

Acid Attack | ಆ್ಯಸಿಡ್ ದಾಳಿಗೊಳಗಾದ ಯುವತಿ ಚೇತರಿಕೆ

ಆ್ಯಸಿಡ್ ಅಟ್ಯಾಕ್‌

ಬೆಂಗಳೂರು: ಕಾಮಾಕ್ಷಿಪಾಳ್ಯದಲ್ಲಿ ಆ್ಯಸಿಡ್ ದಾಳಿಗೆ ಒಳಗಾಗಿದ್ದ ಯುವತಿ ಚೇತರಿಸಿಕೊಳ್ಳುತ್ತಿದ್ದಾಳೆ. ನಲವತ್ತೈದು ದಿನಗಳಿಂದ ಬಳಲುತ್ತಿದ್ದ ಯುವತಿ ಇದೀಗ ನಿರೀಕ್ಷೆಗೂ ಮೀರಿ ಸುಧಾರಿಸಿಕೊಳ್ಳುತ್ತಿದ್ದಾಳೆ. ದಿನದಿಂದ ದಿನಕ್ಕೆ ಯುವತಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವುದು ಯುವತಿಯ ಪೋಷಕರ ಮುಖದಲ್ಲಿ ಸಂತಸ ಮೂಡಿದೆ.

ಸುಟ್ಟ ಗಾಯಗಳಿಂದ ಬಳಲುತ್ತಿರುವ ಯುವತಿಗೆ ಹೈಟೆಕ್ ಚಿಕಿತ್ಸೆ ನೀಡಲಾಗುತ್ತಿದೆ. ಬುಧವಾರ (ಜೂನ್‌ 15 ) ಎರಡೂ ಕೆನ್ನೆಗೆ ಸರ್ಜರಿ ಮಾಡಲಾಗುತ್ತದೆ. ನೇರ ಒಂದೇ ಮಗ್ಗುಲಲ್ಲಿ ಯುವತಿಗೆ ಫಿಸಿಯೋಥೆರಪಿಸ್ಟ್‌ನಿಂದ ಚಿಕಿತ್ಸೆ ನೀಡಲಾಗುತ್ತಿದೆ. ಹಾಸಿಗೆ ಮೇಲಿಂದ ವ್ಹೀಲ್‌ ಚೇರ್‌ನಲ್ಲಿ ಕೂರಿಸುವ ಪ್ರಯತ್ನಕ್ಕೂ ಯುವತಿ ಸ್ಪಂದಿಸುತ್ತಿದ್ದಾಳೆ.

ಇದನ್ನೂ ಓದಿ | Acid Attack | ಯುವತಿ ಆರೋಗ್ಯದಲ್ಲಿ ಚೇತರಿಕೆ: ಸರ್ಜರಿ ಜಾಗದಲ್ಲಿ ಇನ್‌ಫೆಕ್ಷನ್‌

ತಗ್ಗದ ಕೋಪ

ಆ್ಯಸಿಡ್ ಹಾಕಿದ ನಾಗೇಶ್‌ನ ನೆನಪಾದಾಗಲೆಲ್ಲ ಯುವತಿ ಆಕ್ರೋಶಗೊಳ್ಳುತ್ತಿದ್ದಾಳೆ. ʼನನ್ನ ಈ ಪರಿಸ್ಥಿತಿಗೆ ಕಾರಣನಾದ ಅವನು ಬದುಕಬಾರದುʼ ಎಂದು ಕಣ್ಣೀರು ಹಾಕುತ್ತಿದ್ದಾಳೆ ಎಂದು ಆಕೆಯ ಕುಟುಂಬದವರು ಹೇಳಿದ್ದಾರೆ.

ಕಾಮಾಕ್ಷಿಪಾಳ್ಯ ಪೊಲೀಸರು ವೈದ್ಯರಿಂದ ಚಿಕಿತ್ಸಾ ಮಾಹಿತಿ ಪಡೆಯುತ್ತಿದ್ದಾರೆ. ಇತ್ತ, ವಿಚಾರಣೆ ಮುಗಿಸಿ ಆರೋಪಿ ನಾಗೇಶ್‌ನನ್ನು ಪರಪ್ಪನ ಅಗ್ರಹಾರ ಜೈಲಿಗೆ ಪೊಲೀಸರು ಶಿಫ್ಟ್‌ ಮಾಡಲಿದ್ದಾರೆ. ಆ್ಯಸಿಡ್ ದಾಳಿಯಂಥ ಕ್ರೂರ ಕೃತ್ಯ ಮಾಡಿರುವ ಆತನ ಮೇಲೆ ಜೈಲಿನಲ್ಲಿ ದಾಳಿಯಾಗಬಹುದು ಎಂಬ ಕಾರಣಕ್ಕೆ ಆತನಿಗೆ ಪ್ರತ್ಯೇಕ ಕೊಠಡಿ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ |Acid Attack | 8 ಕೆಜಿ ಆ್ಯಸಿಡ್‌ ಇಟ್ಟುಕೊಂಡಿದ್ದ ನಾಗೇಶ್‌ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸ್ತಿರೋದು ಒಂದೇ ಶಬ್ದ

Exit mobile version