Site icon Vistara News

Actor Darshan : ರೇಣುಕಾಸ್ವಾಮಿಯನ್ನು ಕೊಂದು ನಟ ದರ್ಶನ್‌ ಆ್ಯಂಡ್‌ ಗ್ಯಾಂಗ್‌ ಫೋನ್‌ ಮಾಡಿದ್ದು ಯಾರಿಗೆ?

Actor Darshan

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕಸ್ಟಡಿಯಲ್ಲಿರುವ ನಟ ದರ್ಶನ್‌ (Actor Darshan), ಪವಿತ್ರಾ ಗೌಡ (Pavitra Gowda) ಸೇರಿ ಇತರ ಆರೋಪಿಗಳ ತೀವ್ರ ವಿಚಾರಣೆಯು ನಡೆಯುತ್ತಿದೆ. ಈ ಮಧ್ಯೆ ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಭಾಗಿಯಾಗಿರುವ ಗುಮಾನಿಯು ಶುರುವಾಗಿದೆ.

ರೇಣುಕಾಸ್ವಾಮಿ ಕೊಲೆಯಾದ ಬಳಿಕ ಆರೋಪಿಗಳು ಒರ್ವ ಪೊಲೀಸ್ ಅಧಿಕಾರಿ ಜತೆಗೆ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಆರ್‌ಆರ್ ನಗರದಲ್ಲಿ ನಡೆದ ಕೊಲೆ ನಂತರ ಮೃತದೇಹವನ್ನು ಕಾಮಾಕ್ಷಿ ಪಾಳ್ಯಕ್ಕೆ ತಂದು ಹಾಕಿದ್ದು ಯಾಕೆ? ಎಲ್ಲಿಯೂ ಜಾಗ ಇಲ್ಲವೆಂದು ಕಾಮಾಕ್ಷಿ ಪಾಳ್ಯಕ್ಕೆ ತಂದು ಹಾಕಿದ್ದರಾ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ನಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡೆಡ್‌ಬಾಡಿ ಹಾಕಬೇಡಿ ಎಂದಿದ್ದರಾ? ಆರೋಪಿಗಳು ಪೊಲೀಸ್‌ ಅಧಿಕಾರಿ ಸೂಚನೆ ಮೇರೆಗೆ ಮೃತದೇಹ ಕಾಮಾಕ್ಷಿಪಾಳ್ಯಕ್ಕೆ ತಂದು ಎಸೆಯಲಾಗಿದೆ. ಮೃತ ದೇಹ ಎಸೆದ ಬಳಿಕ ಸಹ ಪೊಲೀಸ್ ಅಧಿಕಾರಿ ಜತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ದೊಡ್ಡ ಮೊತ್ತಕ್ಕೆ ಡೀಲ್?‌

ದರ್ಶನ್ ಹೆಸರು ಹೊರಬಾರದಂತೆ ದೊಡ್ಡ ಮೊತ್ತಕ್ಕೆ ಮಾತುಕತೆ ನಡೆದಿತ್ತಾ? ಎಂಬ ಶಂಕೆಯು ವ್ಯಕ್ತವಾಗಿದೆ. ಜತೆಗೆ A13 ದೀಪಕ್ ಎಂಬಾತ ಪ್ರಭಾವಿ ರಾಜಕಾರಣಿ ಸಂಬಂಧಿಕನಾಗಿದ್ದಾನೆ. ಹೀಗಾಗಿ ದೀಪಕ್ ಫೋಟೋ ರಿಲೀಸ್ ಮಾಡದೇ ಗೌಪ್ಯತೆ ಕಾಪಾಡೋದಕ್ಕೂ ದೊಡ್ಡ ಮೊತ್ತದ ಹಣ ಡೀಲ್ ನಡೆದಿದೆ ಎನ್ನಲಾಗಿದೆ. ಈತನನ್ನೂ ಕೇಸ್‌ನಿಂದ ಹೊರಗಿಡಲು ಪ್ರಯತ್ನ ನಡೆದಿದ್ದು, ಈತನ ಫೋಟೊ ಸಹ ಹೊರ ಬಾರದಂತೆ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿದೆ. ವ್ಯವಸ್ಥಿತವಾಗಿ ದೀಪಕ್‌ನನ್ನು ಅಪ್ರೂವರ್ ಮಾಡಿಕೊಂಡು ಕೇಸ್‌ನಿಂದ ಕೈ ಬಿಡುವ ಪ್ಲಾನ್ ನಡೆಯುತ್ತಿದೆ ಎಂದು ಪೊಲೀಸರ ತನಿಖೆ ಮೇಲೆ ಹಲವಾರು ಅನುಮಾನ ಮೂಡಿದೆ.

ಇದನ್ನೂ ಓದಿ: Actor Darshan: ಆರಾಧನೆ ಅತಿರೇಕವಾದರೆ ದುರಂತ ಖಚಿತ; ದರ್ಶನ್​ ಬಗ್ಗೆ ರಾಮ್​ಗೋಪಾಲ್ ವರ್ಮಾ ಹೇಳಿದ್ದು ಹೀಗೆ…

ರೇಣುಕಾಸ್ವಾಮಿ ಹತ್ಯೆ ಹೇಗೆ ನಡೆದಿತ್ತು?

ರೇಣುಕಾಸ್ವಾಮಿಯನ್ನ ಚಿತ್ರದುರ್ಗದಲ್ಲಿ ಜೂನ್‌ 8ರಂದು ಬೆಳಗ್ಗೆ 11 ಗಂಟೆಗೆ ರಾಘವೇಂದ್ರ, ನಂದೀಶ್ ಹಾಗೂ ಮತ್ತಿಬ್ಬರು ಕಿಡ್ನಾಪ್ ಮಾಡಿದ್ದರು. ನಂತರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದಿದ್ದರು. ಶೆಡ್‌ನಲ್ಲಿ ಪವನ್, ಕಾರ್ತಿಕ್, ಪ್ರದೋಶ್‌ ಸೇರಿ ಹಲ್ಲೆ ಮಾಡಿದ್ದರು.

ರೇಣುಕಾಸ್ವಾಮಿಯ ಕಾಲನ್ನು ಅಗಲಿಸಿ ಮರ್ಮಾಂಗದ ಮೇಲೆ ಹಲ್ಲೆ ಮಾಡಲಾಗಿತ್ತು. ಮೊದಲು ನಾಲ್ಕು ಜನ ಹಲ್ಲೆ ನಡೆಸಿದಾಗಲೇ ರೇಣುಕಾಸ್ವಾಮಿ 80 ಪರ್ಸೆಂಟ್ ಸಾವನ್ನಪ್ಪಿದ್ದ. ಬಳಿಕ ಉಳಿದ ಆರೋಪಿಗಳು ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಕೊನೆಗೆ ನಟ ದರ್ಶನ್‌ ಸಹ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿ ಸಂಜೆ 6.30ರ ಸುಮಾರಿಗೆ ರೇಣುಕಾಸ್ವಾಮಿ ಕೊನೆಯುಸಿರೆಳೆದಿದ್ದ. ಅದಾದ ಮೇಲೆ ರಾತ್ರಿ ಒಂದು ಗಂಟೆವರೆಗೆ ಮೃತದೇಹದೊಂದಿಗೆ ಹಂತಕರು ಇದ್ದರು. ಬಳಿಕ ದರ್ಶನ್‌ಗೆ ರಾಘವೇಂದ್ರ ಹಾಗೂ ವಿನಯ್ ಮಾಹಿತಿ ನೀಡಿದ್ದರು. ಬಳಿಕ ಶವ ಬಿಸಾಡುವುದರ ಬಗ್ಗೆ ಡೀಲ್ ನಡೆದಿದೆ. ನಂತರ ಜೂನ್‌ 9ರಂದು ಬೆಳಗ್ಗೆ ಸುಮನಹಳ್ಳಿ ರಾಜಕಾಲುವೆ ಬಳಿ ರೇಣುಕಾಸ್ವಾಮಿ ಶವ ಪತ್ತೆಯಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version