ಬೆಂಗಳೂರು : ಗೋವಾ ಬೀಚ್‌ನಲ್ಲಿ ಸೊಮರ್‌ಸಾಲ್ಟ್(Somersault) ಕಸರತ್ತು ನಡೆಸುವಾಗ ಗಾಯಗೊಂಡಿದ್ದ ಚಿತ್ರನಟ ದಿಗಂತ್ (Actor Diganth) ಚೇತರಿಸಿಕೊಂಡಿದ್ದು, ಬುಧವಾರ ಸಂಜೆ ನಗರದ ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.
ಗೋವಾ ಬೀಚ್‌ನಲ್ಲಿ ಸೊಮರ್‌ಸಾಲ್ಟ್ ಮಾಡುವಾಗ ದಿಗಂತ್ ಬೆನ್ನುಮೂಳೆ, ಕುತ್ತಿಗೆಗೆ ತೀವ್ರ ಪೆಟ್ಟು ಬಿದ್ದಿತ್ತು. ತಕ್ಷಣ ಅವರನ್ನು ಗೋವಾದಲ್ಲಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಏರ್‌ಲಿಫ್ಟ್ ಮೂಲಕ ಬೆಂಗಳೂರಿನ ಹಳೇ ವಿಮಾನ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಕರೆತರಲಾಗಿತ್ತು. ಇದೀಗ ಶಸ್ತ್ರ ಚಿಕಿತ್ಸೆ ಬಳಿಕ ಚೇತರಿಸಿಕೊಂಡ ಅವರು ಮನೆಗೆ ತೆರಳಿದ್ದಾರೆ. ಮೂರು ತಿಂಗಳು ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ.
ಡಿಶ್ಚಾರ್ಜ್ ಆಗುವ ಮೊದಲು ಮಾತನಾಡಿದ್ದ ನಟಿ ಐಂದ್ರಿತಾ ರೇ, ದಿಗಂತ್ ಮತ್ತು ನಾವು ವೆಕೇಶನ್ ಹೋಗಿದ್ವಿ. ಅಲ್ಲಿ ಸೊಮರ್‌ಸಾಲ್ಟ್ ಸ್ವಲ್ಪ ರಾಂಗ್ ಆಗಿ ಪೆಟ್ಟಾಗಿದೆ. ಕೂಡಲೇ ಗೋವಾ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಡ್ಯಾಮೇಜ್ ಜಾಸ್ತಿ ಆಗಿಲ್ಲ. ನಂತರ ಏರ್ ಲಿಫ್ಟ್ ಮಾಡಿದ್ವಿ. ಸದ್ಯ ಸರ್ಜರಿ ಆಗಿದೆ. ದಿಗಂತ್ ಅವರಲ್ಲಿ ಚೇತರಿಕೆ ಕಾಣುತ್ತಿದೆ. ಬೋನ್ ಇಂಜ್ಯೂರಿ ಅಗಿದೆ ಎಂದವರು ವಿವರಿಸಿದ್ದರು.
ಆಪರೇಷನ್ ಆದ ಮೇಲೆ ದಿಗಂತ್ ನಗುತ್ತಿದ್ದಾನೆ. ತುಂಬಾ ತಮಾಷೆ ಮಾಡುತ್ತಿದ್ದಾನೆ. ನಾನು ಇನ್ನು ಮುಂದೆ ದಿಗಂತ್‌ನನ್ನು ಹುಷಾರಾಗಿ ನೋಡಿಕೋಳ್ತೇನೆ! ಡಿಸ್ಚಾರ್ಜ್ ಬೇಗ ಮಾಡುವುದಾಗಿ ವೈದ್ಯರು ಹೇಳಿದ್ದಾರೆ ಎಂದು ಐಂದ್ರಿತಾ ಹೇಳಿದ್ದಾರೆ.
ಇದನ್ನೂ ಓದಿ | Actor Diganth | ಶಸ್ತ್ರ ಚಿಕಿತ್ಸೆ ನಂತರ ದಿಗಂತ್ ಹೇಗಿದ್ದಾರೆ?
ಈ ಕುರಿತಂತೆ ವೈದ್ಯ ವಿದ್ಯಾಧರ್ ಮಾತನಾಡಿ “”ದಿಗಂತ್ ಕುತ್ತಿಗೆಗೆ ಫ್ಯಾಕ್ಚರ್ ಆಗಿತ್ತು. ಅದನ್ನು ಆಪರೇಷನ್ ಮಾಡಿದ್ದೇವೆ. ನಿನ್ನೆಗಿಂತ ಇವತ್ತು ಆಕ್ಟಿವ್ ಆಗಿದ್ದಾರೆ. ಊಟ ಅವರೇ ಮಾಡುತ್ತಿದ್ದಾರೆ. ಮುಂದೆ ಅವರು ಯಾವುದೇ ಸ್ಪೋರ್ಟ್ಸ್ ನಲ್ಲಿ ಭಾಗಿಯಾಗಬಹುದು. ಫಿಸಿಷಿಯನ್ ಹಾಗೂ ನ್ಯೂರಾಲಾಜಿಸ್ಟ್ ಗಳ ಅಭಿಪ್ರಾಯ ಕೇಳಿಕೊಂಡು ಡಿಸ್ಚಾರ್ಜ್ ಮಾಡಲಾಗುವುದುʼʼ ಎಂದಿದ್ದಾರೆ.
ಇದನ್ನೂ ಓದಿ | Actor Diganth | ದಿಗಂತ್ ಗಾಯಗೊಂಡಿರುವ ಸೊಮರ್‌ಸಾಲ್ಟ್ ಎಂದರೆ ಏನು? ಅಪಾಯವೇನು?