ಬೆಂಗಳೂರು: ತಾವು ಬಿಜೆಪಿಯಿಂದ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಕೇಳುತ್ತಿರುವುದಕ್ಕೂ ಇದೀಗ ಲೋಕಾಯುಕ್ತ ದಾಳಿ (Lokayukta Raid) ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷಪ್ಪಗೆ ಶೀಘ್ರವಾಗಿ ಜಾಮೀನು ನೀಡಿದ್ದರ ಕುರಿತು ಸಿಜೆಐಗೆ ಪತ್ರ ಬರೆದಿರುವುದಕ್ಕೂ ಸಂಬಂಧವಿಲ್ಲ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿವೇಕ್ ರೆಡ್ಡಿ, ಸಾಮಾನ್ಯ ಜನರ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಪ್ರಕ್ರಿಯೆ ತಡ ಆಗುತ್ತಿತ್ತು. ಜನಸಾಮಾನ್ಯರ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ವಾರಗಟ್ಟಲೆ ತಡ ಆಗುತ್ತಿದೆ. ವಕೀಲರ ಸಂಘದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದೆವು. ನ್ಯಾಯಾಲಯದಲ್ಲಿ ಪೋಸ್ಟಿಂಗ್ ಮೆಮೋಗಳಿಗೆ ಏಕೆ ವಿಳಂಬ ಆಗುತ್ತಿದೆ ಎಂಬ ಬಗ್ಗೆ ಚರ್ಚೆ ನಡೆದಿತ್ತು.
ಇದನ್ನೂ ಓದಿ: Lokayukta Raid: ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ನಿರೀಕ್ಷಣಾ ಜಾಮೀನು; ವಕೀಲರ ಸಂಘ ಆಕ್ಷೇಪ, ಸಿಜೆಐಗೆ ಪತ್ರ
ಸಾಮಾನ್ಯ ಜಾಮೀನು ಕೇಸ್ ಗಳಿಗೆ ಅನೇಕ ವಾರ ಸಮಯ ಹಿಡಿಯುತ್ತೆ, ಆದರೆ ಮಾಡಾಳ್ ಪ್ರಕರಣದಲ್ಲಿ ತ್ವರಿತವಾಗಿ ಜಾಮೀನು ಆಗಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದೇವೆ. ಇಂತಹ ವ್ಯವಸ್ಥೆಯನ್ನು ಸಾಮಾನ್ಯ ಜನರಿಗೆ ಕಲ್ಪಿಸಿಕೊಡಿ ಎಂದು ಮನವಿ ಮಾಡಿದ್ದೇವೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರತಿಕ್ರಿಯೆಯಾಗಿ ಕಾಯುತ್ತಿದ್ದೇವೆ ಎಂದರು.
ಆದರೆ ಜಯನಗರದಿಂದ ಬಿಜೆಪಿ ಟಿಕೆಟ್ ಆಕಾಖ್ಷಿಯಾಗಿರುವುದಕ್ಕೂ ಇದಕ್ಕೂ ಸಂಬಂಧವಿಲ್ಲ. ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ಈ ಪ್ರಶ್ನೆ ಎತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.