ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪ್ರಜೆಗಳ ಪುಂಡಾಟ ಮುಂದುವರಿದಿದೆ. ರಾತ್ರಿ ಗಸ್ತಿನಲ್ಲಿದ್ದ ಪೊಲೀಸರ ಮೇಲೆ ಆಫ್ರಿಕನ್ ಮಹಿಳೆಯರು ಹಲ್ಲೆ ನಡೆಸಿದ್ದಾರೆ.
ನೈಟ್ ರೌಂಡ್ಸ್‌ನಲ್ಲಿದ್ದ ಹೊಯ್ಸಳ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದೆ. ಮಧ್ಯರಾತ್ರಿ 1.30ರ ಸುಮಾರಿಗೆ ಬ್ರಿಗೇಡ್ ರಸ್ತೆಯಲ್ಲಿ ನೈಟ್ ರೌಂಡ್ಸ್ ತೆರಳಿದ್ದ ಕಬ್ಬನ್ ಪಾರ್ಕ್ ಪೊಲೀಸರು, ಸಮಯದ ಮೀತಿ ಮಿರಿದ ಹಿನ್ನೆಲೆಯಲ್ಲಿ ವಿದೇಶಿ ಮಹಿಳೆಯರನ್ನು ಮನೆಗೆ ತೆರಳುವಂತೆ ಸೂಚಿಸಿದ್ದರು. ಇದರಿಂದ ಕುಪಿತಗೊಂಡ ಮೂವರು ಆಫ್ರಿಕನ್ ಮಹಿಳೆಯರು ಮಾತಿಗೆ ಮಾತು ಬೆಳೆಸಿ ಖಾಕಿ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸ್ ಸಿಬ್ಬಂದಿ ಬಿಡಿಸಲು ಯತ್ನಿಸಿದರೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೊಡೆದು, ಕಾಲಿನಿಂದ ತುಳಿದು ಹಲ್ಲೆ ಮುಂದುವರಿಸಿದರು.
ನೈಜೀರಿಯನ್‌ಗಳು ಸೇರಿದಂತೆ ಸಾಕಷ್ಟು ವಿದೇಶೀಯರು ಬೆಂಗಳೂರಿನಲ್ಲಿ ನೆಲೆಸಿದ್ದು, ಇದರಲ್ಲಿ ವೇಶ್ಯಾವಟಿಕೆಯಲ್ಲಿ ತೊಡಗಿದವರೂ ಸಾಕಷ್ಟು ಮಂದಿ ಇದ್ದಾರೆ. ಇವರನ್ನು ಪ್ರಶ್ನಿಸಲು, ಎಚ್ಚರಿಸಲು ಹೋದರೆ ಪಾನಮತ್ತರಾದ ಇವರು ಪೊಲೀಸರ ಮೇಲೇ ಹಲ್ಲೆ ನಡೆಸಿದ ಹಲವಾರು ಘಟನೆಗಳಿ ಹಿಂದೆ ನಡೆದಿವೆ. ತಾವು ಬಾಡಿಗೆಗೆ ಇರುವ ಮನೆಗಳ ಸುತ್ತಮುತ್ತಲೂ ಪುಂಡಾಟ ನಡೆಸುವುದು, ಟ್ರಗ್ಸ್ ವ್ಯವಹಾರಕ್ಕೂ ಇವರು ಕುಖ್ಯಾತರಾಗಿದ್ದಾರೆ. ಇವರ ಹಾವಳಿಗೆ ಕಡಿವಾಣ ಹಾಕದೇ ಹೋದರೆ ಸಾರ್ವಜನಿಕರನ್ನೂ ನಡುದಾರಿಯಲ್ಲಿ ನಿಲ್ಲಿಸಿ ಸುಲಿಯುವ ಸಾಧ್ಯತೆಯೂ ಇದೆ ಎಂದು ನಾಗರಿಕರು ಆತಂಕಪಟ್ಟಿದ್ದಾರೆ.
ಇದನ್ನೂ ಓದಿ : Honey trap | ಕ್ರೈಂ ಪೊಲೀಸರೆಂದು ₹ 14 ಲಕ್ಷ ಸುಲಿಗೆ ಮಾಡಿದ ದುಷ್ಕರ್ಮಿಗಳು