Site icon Vistara News

Air Pollution | ದೇಶದ ಮಾಲಿನ್ಯಯುಕ್ತ ನಗರಗಳ ಪೈಕಿ ಬೆಂಗಳೂರಿಗೆ ಆರನೇ ಸ್ಥಾನ!

Air Pollution

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರು ಈಗ ಮಾಲಿನ್ಯ ನಗರಿಯಾಗುತ್ತಿದೆ. ಕೊರೊನಾ ನಂತರ ಮತ್ತೆ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ದೇಶದ ಅತಿ ಹೆಚ್ಚಿನ ಮಾಲಿನ್ಯಯುಕ್ತ ನಗರಗಳಲ್ಲಿ ಅಗ್ರಸ್ಥಾನ ಪಡೆಯುವತ್ತ ಹೆಜ್ಜೆ ಇಟ್ಟಿದೆ. ಇದಕ್ಕೆ ಸಾಕ್ಷಿಯೆಂಬಂತೆ ಸೋಮವಾರ ಬೆಳಗ್ಗೆ ನಗರದಲ್ಲಿ ವಾಯು ಮಾಲಿನ್ಯವು (Air Pollution) ಅತೀ ಹೆಚ್ಚಾಗಿರುವುದನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯು ಬೊಟ್ಟು ಮಾಡಿದೆ.

ಸೋಮವಾರ ಬೆಳಗ್ಗೆ ೭.೩೦ರ ವೇಳೆಯಲ್ಲಿ ಬೆಂಗಳೂರಿನ ವಾಯು ಮಾಲಿನ್ಯವು ವಾಯು ಗುಣಮಟ್ಟ ಇಂಡೆಕ್ಸ್‌ನಲ್ಲಿ (air quality index (AQI)) ನಲ್ಲಿ 101 ಎಂದು ದಾಖಲಾಗಿತ್ತು. ಇದರಿಂದಾಗಿ ಸಿಲಿಕಾನ್‌ ಸಿಟಿಯು ದೇಶದಲ್ಲಿ ವಾಯುಮಾಲಿನ್ಯಕ್ಕೆ ಹೆಸರಾದ ಆರು ನಗರಗಳ ಪೈಕಿ ಒಂದಾಗಿ ಗುರುತಿಸಿಕೊಂಡಿತು.

ಈ ಪಟ್ಟಿಯಲ್ಲಿ ಪಂಚಾಬ್‌ನ ರುಪ್ನಾಗರ್‌ 141 ಎಕ್ಯೂಐ ನೊಂದಿಗೆ ಮೊದಲ ಸ್ಥಾನ ಪಡೆದಿದ್ದರೆ, ಪಟನಾ, ಧಾರುಹೆರಾ, ದೆಹಲಿ, ಚಂದ್ರಾಪುರ ನಗರಗಳು ಕ್ರಮವಾಗಿ 113,114,106 ಮತ್ತು 104 ಎಕ್ಯೂಐನೊಂದಿಗೆ ಮೊದಲ ಐದು ಸ್ಥಾನ ಪಡೆದಿದ್ದವು. ಬೆಂಗಳೂರು ಆರನೇ ಸ್ಥಾನ ಪಡೆದುಕೊಂಡಿತು.

ಬಿಟಿಎಂ ಲೇಔಟ್ ಅತಿ ಮಾಲಿನ್ಯಯುಕ್ತ ಪ್ರದೇಶ

ನಗರದ ಬಿಟಿಎಂ ಲೇಔಟ್‌ ನಗರದಲ್ಲಿ ಅತೀ ಹೆಚ್ಚಿನ ವಾಯು ಮಾಲಿನ್ಯವನ್ನು ಹೊಂದಿರುವ ಪ್ರದೇಶವಾಗಿದೆ. ಈ ಪ್ರದೇಶವು ೧೦೧ ಎಕ್ಯೂಐ ಹೊಂದಿತ್ತು ಎಂದು ವರದಿ ಹೇಳಿದೆ. ನಗರದಲ್ಲಿ ವಾಯು ಮಾಲಿನ್ಯ ಹೆಚ್ಚಲು ಸಾರಿಗೆ ವ್ಯವಸ್ಥೆ, ಸಿಟಿಯ ಟ್ರಾಫಿಕ್ ಜಾಮ್, ಟ್ರಾಫಿಕ್ ಸಿಗ್ನಲ್, ರಸ್ತೆ ಕಾಮಗಾರಿ ವಿಳಂಬ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನಲ್ಲಿ ಯಾವುದರಿಂದ ಎಷ್ಟು ಮಾಲಿನ್ಯ?
ಸಾರಿಗೆ       63.5%
ರೋಡ್ ಡಸ್ಟ್   6.8%
ವೇಸ್ಟ್ ಬರ್ನಿಂಗ್    9.6%
ಹೋಟೆಲ್     3.7%
ಇಂಡಸ್ಟ್ರಿ             0.1%

ಸಮಾಧಾನದ ವಿಷಯವೆಂದರೆ ಸೋಮವಾರ ಬೆಳಗ್ಗೆ ಅತಿ ಹೆಚ್ಚಿನ ಮಾಲಿನ್ಯದಿಂದ ಗಮನ ಸೆಳೆದಿದ್ದ ನಗರವು ಮಧ್ಯಾಹ್ನದ ವೇಳೆಗೆ ನಿಯಂತ್ರಣಕ್ಕೆ ಬಂದಿತ್ತು ಮಧ್ಯಾಹ್ನ ೧ ಗಂಟೆಯ ವೇಳೆಗೆ ನಗರದಲ್ಲಿನ ಮಾಲಿನ್ಯದ ಪ್ರಮಾಣವು ೬೭ಐಕ್ಯೂಐಗೆ ಇಳಿದಿತ್ತು ಎಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ತಿಳಿಸಿದೆ. ಮಂಡಳಿಯ ಪ್ರಕಾರ ಎಕ್ಯೂಐ ೧೦೦ ಇದ್ದರೂ ಪರ್ವಾಗಿಲ್ಲ. ಆದರೆ ಅದನ್ನು ಮೀರಿ ಹೋದಾಗ ಅತಿ ಹೆಚ್ಚಿನ ಮಾಲಿನ್ಯಯುಕ್ತ ನಗರವೆಂದು ಪರಿಗಣಿಸಲಾಗುತ್ತದೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದಲೂ ವರದಿ

ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಹೆಚ್ಚಾಗಿರುವ ಕುರಿತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೂ ಇತ್ತೀಚೆಗೆ ವರದಿ ನೀಡಿದೆ. ಈ ಕುರಿತು ಮಂಡಳಿ ಅಧ್ಯಯನ ನಡೆಸಿದ್ದು, ವರದಿಯ ಪ್ರಕಾರ ನಗರದ ಮಾಲಿನ್ಯಕ್ಕೆ ಸಾರಿಗೆ ವ್ಯವಸ್ಥೆಯೇ ಮೂಲ ಕಾರಣ.

ನಗರದ ಶೇ 63.5% ರಷ್ಟು ಮಾಲಿನ್ಯ ಬಿಎಂಟಿಸಿಯ ವಾಹನಗಳಿಂದ ಸೃಷ್ಟಿಯಾಗುತ್ತಿದೆ ಎಂದು ಅಧ್ಯಯನ ವರಿದ ಬೊಟ್ಟು ಮಾಡಿದೆ. ರಸ್ತೆ ಕಾಮಗಾರಿಯಿಂದ ರೋಡ್ ಡಸ್ಟ್, ಇಂಡಸ್ಟ್ರೀಸ್, ಹೋಟೆಲ್‌ಳಿಂದಲೂ ಮಾಲಿನ್ಯ ಹೆಚ್ಚಳವಾಗಿದೆ. ಟ್ರಾಫಿಕ್ ಸಿಗ್ನಲ್‌ನಿಂದ ಅಧಿಕ ವಾಯು ಮಾಲಿನ್ಯ ಸೃಷ್ಟಿಯೆಂದು ವರದಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಸಾರಿಗೆ ಇಲಾಖೆ ಜತೆ ಚರ್ಚಿಸಿ ಹೆಚ್ಚೆಚ್ಚು ಎಲೆಕ್ಟ್ರಿಕಲ್ ಬಸ್ ಸೇವೆಗೆ ಬಳಸುವಂತೆ ವರದಿಯಲ್ಲಿ ಸಲಹೆ ನೀಡಲಾಗಿದೆ.

ಇದನ್ನೂ ಓದಿ| ವಾಯು ಮಾಲಿನ್ಯ ಎಂಬ ಸೈಲೆಂಟ್‌ ಕಿಲ್ಲರ್ ವರ್ಷಕ್ಕೆ 23 ಲಕ್ಷ ಭಾರತೀಯರು ಬಲಿ

Exit mobile version