Air Pollution | ದೇಶದ ಮಾಲಿನ್ಯಯುಕ್ತ ನಗರಗಳ ಪೈಕಿ ಬೆಂಗಳೂರಿಗೆ ಆರನೇ ಸ್ಥಾನ! - Vistara News

ಪರಿಸರ

Air Pollution | ದೇಶದ ಮಾಲಿನ್ಯಯುಕ್ತ ನಗರಗಳ ಪೈಕಿ ಬೆಂಗಳೂರಿಗೆ ಆರನೇ ಸ್ಥಾನ!

ಕೊರೊನಾ ನಂತರ ನಗರದಲ್ಲಿ ಸಂಚಾರ ದಟ್ಟಣೆ ಮತ್ತೆ ಹೆಚ್ಚಿದ್ದು, ವಾಯು ಮಾಲಿನ್ಯವೂ (Air Pollution) ಹೆಚ್ಚಾಗುತ್ತಿದೆ. ದೇಶದ ಅತಿ ಹೆಚ್ಚು ವಾಯು ಮಾಲಿನ್ಯ ಹೊಂದಿರುವ ನಗರಗಳ ಪಟ್ಟಿಯಲ್ಲಿ ಉದ್ಯಾನ ನಗರಿಯೂ ಕಾಣಿಸಿಕೊಂಡಿದೆ.

VISTARANEWS.COM


on

Air Pollution
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರು ಈಗ ಮಾಲಿನ್ಯ ನಗರಿಯಾಗುತ್ತಿದೆ. ಕೊರೊನಾ ನಂತರ ಮತ್ತೆ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ದೇಶದ ಅತಿ ಹೆಚ್ಚಿನ ಮಾಲಿನ್ಯಯುಕ್ತ ನಗರಗಳಲ್ಲಿ ಅಗ್ರಸ್ಥಾನ ಪಡೆಯುವತ್ತ ಹೆಜ್ಜೆ ಇಟ್ಟಿದೆ. ಇದಕ್ಕೆ ಸಾಕ್ಷಿಯೆಂಬಂತೆ ಸೋಮವಾರ ಬೆಳಗ್ಗೆ ನಗರದಲ್ಲಿ ವಾಯು ಮಾಲಿನ್ಯವು (Air Pollution) ಅತೀ ಹೆಚ್ಚಾಗಿರುವುದನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯು ಬೊಟ್ಟು ಮಾಡಿದೆ.

ಸೋಮವಾರ ಬೆಳಗ್ಗೆ ೭.೩೦ರ ವೇಳೆಯಲ್ಲಿ ಬೆಂಗಳೂರಿನ ವಾಯು ಮಾಲಿನ್ಯವು ವಾಯು ಗುಣಮಟ್ಟ ಇಂಡೆಕ್ಸ್‌ನಲ್ಲಿ (air quality index (AQI)) ನಲ್ಲಿ 101 ಎಂದು ದಾಖಲಾಗಿತ್ತು. ಇದರಿಂದಾಗಿ ಸಿಲಿಕಾನ್‌ ಸಿಟಿಯು ದೇಶದಲ್ಲಿ ವಾಯುಮಾಲಿನ್ಯಕ್ಕೆ ಹೆಸರಾದ ಆರು ನಗರಗಳ ಪೈಕಿ ಒಂದಾಗಿ ಗುರುತಿಸಿಕೊಂಡಿತು.

ಈ ಪಟ್ಟಿಯಲ್ಲಿ ಪಂಚಾಬ್‌ನ ರುಪ್ನಾಗರ್‌ 141 ಎಕ್ಯೂಐ ನೊಂದಿಗೆ ಮೊದಲ ಸ್ಥಾನ ಪಡೆದಿದ್ದರೆ, ಪಟನಾ, ಧಾರುಹೆರಾ, ದೆಹಲಿ, ಚಂದ್ರಾಪುರ ನಗರಗಳು ಕ್ರಮವಾಗಿ 113,114,106 ಮತ್ತು 104 ಎಕ್ಯೂಐನೊಂದಿಗೆ ಮೊದಲ ಐದು ಸ್ಥಾನ ಪಡೆದಿದ್ದವು. ಬೆಂಗಳೂರು ಆರನೇ ಸ್ಥಾನ ಪಡೆದುಕೊಂಡಿತು.

ಬಿಟಿಎಂ ಲೇಔಟ್ ಅತಿ ಮಾಲಿನ್ಯಯುಕ್ತ ಪ್ರದೇಶ

ನಗರದ ಬಿಟಿಎಂ ಲೇಔಟ್‌ ನಗರದಲ್ಲಿ ಅತೀ ಹೆಚ್ಚಿನ ವಾಯು ಮಾಲಿನ್ಯವನ್ನು ಹೊಂದಿರುವ ಪ್ರದೇಶವಾಗಿದೆ. ಈ ಪ್ರದೇಶವು ೧೦೧ ಎಕ್ಯೂಐ ಹೊಂದಿತ್ತು ಎಂದು ವರದಿ ಹೇಳಿದೆ. ನಗರದಲ್ಲಿ ವಾಯು ಮಾಲಿನ್ಯ ಹೆಚ್ಚಲು ಸಾರಿಗೆ ವ್ಯವಸ್ಥೆ, ಸಿಟಿಯ ಟ್ರಾಫಿಕ್ ಜಾಮ್, ಟ್ರಾಫಿಕ್ ಸಿಗ್ನಲ್, ರಸ್ತೆ ಕಾಮಗಾರಿ ವಿಳಂಬ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

Air Pollution

ಬೆಂಗಳೂರಿನಲ್ಲಿ ಯಾವುದರಿಂದ ಎಷ್ಟು ಮಾಲಿನ್ಯ?
ಸಾರಿಗೆ       63.5%
ರೋಡ್ ಡಸ್ಟ್   6.8%
ವೇಸ್ಟ್ ಬರ್ನಿಂಗ್    9.6%
ಹೋಟೆಲ್     3.7%
ಇಂಡಸ್ಟ್ರಿ             0.1%

ಸಮಾಧಾನದ ವಿಷಯವೆಂದರೆ ಸೋಮವಾರ ಬೆಳಗ್ಗೆ ಅತಿ ಹೆಚ್ಚಿನ ಮಾಲಿನ್ಯದಿಂದ ಗಮನ ಸೆಳೆದಿದ್ದ ನಗರವು ಮಧ್ಯಾಹ್ನದ ವೇಳೆಗೆ ನಿಯಂತ್ರಣಕ್ಕೆ ಬಂದಿತ್ತು ಮಧ್ಯಾಹ್ನ ೧ ಗಂಟೆಯ ವೇಳೆಗೆ ನಗರದಲ್ಲಿನ ಮಾಲಿನ್ಯದ ಪ್ರಮಾಣವು ೬೭ಐಕ್ಯೂಐಗೆ ಇಳಿದಿತ್ತು ಎಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ತಿಳಿಸಿದೆ. ಮಂಡಳಿಯ ಪ್ರಕಾರ ಎಕ್ಯೂಐ ೧೦೦ ಇದ್ದರೂ ಪರ್ವಾಗಿಲ್ಲ. ಆದರೆ ಅದನ್ನು ಮೀರಿ ಹೋದಾಗ ಅತಿ ಹೆಚ್ಚಿನ ಮಾಲಿನ್ಯಯುಕ್ತ ನಗರವೆಂದು ಪರಿಗಣಿಸಲಾಗುತ್ತದೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದಲೂ ವರದಿ

ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಹೆಚ್ಚಾಗಿರುವ ಕುರಿತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೂ ಇತ್ತೀಚೆಗೆ ವರದಿ ನೀಡಿದೆ. ಈ ಕುರಿತು ಮಂಡಳಿ ಅಧ್ಯಯನ ನಡೆಸಿದ್ದು, ವರದಿಯ ಪ್ರಕಾರ ನಗರದ ಮಾಲಿನ್ಯಕ್ಕೆ ಸಾರಿಗೆ ವ್ಯವಸ್ಥೆಯೇ ಮೂಲ ಕಾರಣ.

ನಗರದ ಶೇ 63.5% ರಷ್ಟು ಮಾಲಿನ್ಯ ಬಿಎಂಟಿಸಿಯ ವಾಹನಗಳಿಂದ ಸೃಷ್ಟಿಯಾಗುತ್ತಿದೆ ಎಂದು ಅಧ್ಯಯನ ವರಿದ ಬೊಟ್ಟು ಮಾಡಿದೆ. ರಸ್ತೆ ಕಾಮಗಾರಿಯಿಂದ ರೋಡ್ ಡಸ್ಟ್, ಇಂಡಸ್ಟ್ರೀಸ್, ಹೋಟೆಲ್‌ಳಿಂದಲೂ ಮಾಲಿನ್ಯ ಹೆಚ್ಚಳವಾಗಿದೆ. ಟ್ರಾಫಿಕ್ ಸಿಗ್ನಲ್‌ನಿಂದ ಅಧಿಕ ವಾಯು ಮಾಲಿನ್ಯ ಸೃಷ್ಟಿಯೆಂದು ವರದಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಸಾರಿಗೆ ಇಲಾಖೆ ಜತೆ ಚರ್ಚಿಸಿ ಹೆಚ್ಚೆಚ್ಚು ಎಲೆಕ್ಟ್ರಿಕಲ್ ಬಸ್ ಸೇವೆಗೆ ಬಳಸುವಂತೆ ವರದಿಯಲ್ಲಿ ಸಲಹೆ ನೀಡಲಾಗಿದೆ.

ಇದನ್ನೂ ಓದಿ| ವಾಯು ಮಾಲಿನ್ಯ ಎಂಬ ಸೈಲೆಂಟ್‌ ಕಿಲ್ಲರ್ ವರ್ಷಕ್ಕೆ 23 ಲಕ್ಷ ಭಾರತೀಯರು ಬಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Indian Origin Crow: ಭಾರತೀಯ ಮೂಲದ 10 ಲಕ್ಷ ಕಾಗೆಗಳನ್ನು ಕೊಲ್ಲಲು ಕೀನ್ಯಾ ನಿರ್ಧರಿಸಿದ್ದೇಕೆ?

2024ರ ಅಂತ್ಯದ ವೇಳೆಗೆ ಅಂದರೆ ಮುಂಬರುವ ಆರು ತಿಂಗಳಲ್ಲಿ ಭಾರತೀಯ ಮೂಲದ ಕಾಗೆಗಳನ್ನು(Indian Origin Crow) ಹೆಚ್ಚಿನ ಸಂಖ್ಯೆಯಲ್ಲಿ ಕೊಲ್ಲುವುದಾಗಿ ಕೀನ್ಯಾ ಸರ್ಕಾರ ಘೋಷಿಸಿದೆ. 10 ಲಕ್ಷ ಕಾಗೆಗಳನ್ನು ನಿರ್ಮೂಲನೆ ಮಾಡಲು ಸರ್ಕಾರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ ಯಾಕೆ ಗೊತ್ತೇ? ಇಲ್ಲಿದೆ ಮಾಹಿತಿ.

VISTARANEWS.COM


on

By

Indian Origin Crow
Koo

ಭಾರತೀಯ ಮೂಲದ 10 ಲಕ್ಷ ಕಾಗೆಗಳನ್ನು (Indian Origin Crow) ಈ ವರ್ಷಾಂತ್ಯದ ವೇಳೆಗೆ ಕೊಲ್ಲಲು ಕೀನ್ಯಾ (Kenya) ಯೋಜನೆ ಹಾಕಿಕೊಂಡಿದೆ. ಕಾಗೆಯು ಪ್ರಾಥಮಿಕ ಪರಿಸರ ವ್ಯವಸ್ಥೆಯ ಭಾಗವಲ್ಲ. ಈ ಕಾಗೆಗಳು ದಶಕಗಳಿಂದ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದು, ಸ್ಥಳೀಯ ಪಕ್ಷಿಗಳನ್ನು ಸಾಯಿಸುತ್ತಿವೆ ಎಂದು ಕೀನ್ಯಾದ ವನ್ಯಜೀವಿ ಇಲಾಖೆ (Wildlife Department) ಹೇಳಿದೆ.

2024ರ ಅಂತ್ಯದ ವೇಳೆಗೆ ಅಂದರೆ ಮುಂಬರುವ ಆರು ತಿಂಗಳಲ್ಲಿ ಭಾರತೀಯ ಮೂಲದ ಕಾಗೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೊಲ್ಲುವುದಾಗಿ ಕೀನ್ಯಾ ಸರ್ಕಾರ ಘೋಷಿಸಿದೆ. 10 ಲಕ್ಷ ಕಾಗೆಗಳನ್ನು ನಿರ್ಮೂಲನೆ ಮಾಡಲು ಸರ್ಕಾರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ. ಭಾರತೀಯ ಮೂಲದ ಕಾಗೆಗಳನ್ನು ‘ಆಕ್ರಮಣಕಾರಿ ವಿದೇಶಿ ಪಕ್ಷಿಗಳು’ ಎಂದು ಕರೆದಿರುವ ಕೀನ್ಯಾದ ವನ್ಯಜೀವಿ ಪ್ರಾಧಿಕಾರವು ಈ ಕಾಗೆಗಳು ಪೂರ್ವ ಆಫ್ರಿಕಾಕ್ಕೆ ಸ್ಥಳೀಯವಾಗಿಲ್ಲ ಎಂದಿದೆ.

ಕಳೆದ ಕೆಲವು ವರ್ಷಗಳಲ್ಲಿ ಕರಾವಳಿ ನಗರಗಳಾದ ಮೊಂಬಾಸಾ, ಮಲಿಂಡಿ, ಕಿಲಿಫಿ ಮತ್ತು ವಟಮುಗಳಲ್ಲಿ ಅವುಗಳ ಸಂಖ್ಯೆಯು ವೇಗವಾಗಿ ಹೆಚ್ಚಾಗಿದೆ. ಇದರಿಂದ ಉಂಟಾಗುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು 1 ಮಿಲಿಯನ್ ಕಾಗೆಗಳನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ. ಹೊಟೇಲ್ ಉದ್ಯಮದ ಪ್ರತಿನಿಧಿಗಳು ಮತ್ತು ಕಾಗೆ ನಿಯಂತ್ರಣದಲ್ಲಿ ಪರಿಣತಿ ಹೊಂದಿರುವ ವೈದ್ಯರನ್ನು ಒಳಗೊಂಡ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಹೊಟೇಲ್ ಉದ್ಯಮಕ್ಕೆ ತೊಂದರೆ

ವನ್ಯಜೀವಿ ಪ್ರಾಧಿಕಾರವು ನೀಡಿರುವ ಹೇಳಿಕೆಯಲ್ಲಿ ಕರಾವಳಿ ನಗರಗಳ ಹೊಟೇಲ್ ಉದ್ಯಮಕ್ಕೆ ಈ ಕಾಗೆಗಳು ದೊಡ್ಡ ಸಮಸ್ಯೆಯಾಗುತ್ತಿವೆ. ಕಾಗೆಗಳಿಂದ ಪ್ರವಾಸಿಗರು ತೆರೆದ ಜಾಗದಲ್ಲಿ ಕುಳಿತು ಆಹಾರ ಸೇವಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೊಟೇಲ್ ಉದ್ಯಮಕ್ಕೆ ಸಂಬಂಧಿಸಿದವರು ಸಹ ಕಾಗೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ಅವುಗಳ ಮೇಲೆ ನಿಯಂತ್ರಣಕ್ಕೆ ಒತ್ತಾಯಿಸುತ್ತಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯಿಂದ ಕಾಗೆಗಳನ್ನು ನಿರ್ಮೂಲನೆ ಮಾಡಲು ನಿರ್ಧರಿಸಲಾಗಿದೆ ಎಂದು ಕೀನ್ಯಾ ವನ್ಯಜೀವಿ ಪ್ರಾಧಿಕಾರ ತಿಳಿಸಿದೆ.

ಯಾರಿಗೆ ಅಪಾಯ?

ಕೀನ್ಯಾದಲ್ಲಿ ಕಾಗೆಗಳಿಂದಾಗಿ ಅನೇಕ ಪಕ್ಷಿಗಳು ಅಳಿವಿನಂಚಿನಲ್ಲಿವೆ. ಅಂತಹ ಪಕ್ಷಿಗಳನ್ನು ಕಾಗೆಗಳು ನಿರಂತರವಾಗಿ ಬೇಟೆಯಾಡುತ್ತಿವೆ ಎಂದು ವನ್ಯಜೀವಿ ಪ್ರಾಧಿಕಾರ ತಿಳಿಸಿದೆ.

ಇದನ್ನೂ ಓದಿ: Norway Tour: ಜಗತ್ತಿನ ಕೊನೆಯ ದೇಶ ಇದು! ಇಲ್ಲಿ 6 ತಿಂಗಳು ಹಗಲು, 6 ತಿಂಗಳು ರಾತ್ರಿ!

ಈ ಕಾಗೆಗಳು ಸಣ್ಣ ಸ್ಥಳೀಯ ಪಕ್ಷಿಗಳ ಗೂಡುಗಳನ್ನು ನಾಶಪಡಿಸುತ್ತವೆ ಮತ್ತು ಅವುಗಳ ಮೊಟ್ಟೆಗಳು ಮತ್ತು ಮರಿಗಳನ್ನು ತಿನ್ನುತ್ತವೆ, ಇದರಿಂದಾಗಿ ಅನೇಕ ಪಕ್ಷಿ ಪ್ರಭೇದಗಳು ಕಡಿಮೆಯಾಗುತ್ತಿವೆ ಎಂದು ಕೀನ್ಯಾದ ಪಕ್ಷಿವಿಜ್ಞಾನಿ ಕಾಲಿನ್ ಜಾಕ್ಸನ್ ತಿಳಿಸಿದ್ದಾರೆ.

ಸ್ಥಳೀಯ ಪಕ್ಷಿಗಳ ಕೊರತೆಯಿಂದ ಪರಿಸರ ಸಂರಕ್ಷಣೆಗೆ ತೊಂದರೆಯಾಗಿದೆ. ಕಾಗೆಗಳ ಹೆಚ್ಚುತ್ತಿರುವ ಸಂಖ್ಯೆಯ ಪರಿಣಾಮವು ಅಂತಹ ಪಕ್ಷಿಗಳ ಮೇಲೆ ಮಾತ್ರವಲ್ಲ ಇಡೀ ಪರಿಸರ ವ್ಯವಸ್ಥೆಯು ಪರಿಣಾಮ ಬೀರುತ್ತಿದೆ ಎಂದು ಕೀನ್ಯಾ ಹೇಳಿದೆ.

Continue Reading

ಬಳ್ಳಾರಿ

Ballari News: ಚೇಳ್ಳಗುರ್ಕಿಯಲ್ಲಿ ವಿಶ್ವ ಪರಿಸರ ದಿನಾಚರಣೆ

Ballari News: ಬಳ್ಳಾರಿ ತಾಲೂಕಿನ ಚೇಳ್ಳಗುರ್ಕಿ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಆಂಧ್ರಪ್ರದೇಶದ ಹ್ಯಾಂಡ್ಸ್‌ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ವೆಂಕಟರೆಡ್ಡಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಪರಿಸರ ಸಂರಕ್ಷಣೆಯು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ಗ್ರಾಮೀಣರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು.

VISTARANEWS.COM


on

World Environment Day programme in Chellagurki
Koo

ಬಳ್ಳಾರಿ: ತಾಲೂಕಿನ ಚೇಳ್ಳಗುರ್ಕಿ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ (World Environment Day) ಕಾರ್ಯಕ್ರಮವನ್ನು (Ballari News) ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಾಧ್ಯಾಪಕ ನಾರಾಯಣಸ್ವಾಮಿ, ಪರಿಸರ ಹಾಗೂ ನೀರಿನ ಸದ್ಬಳಕೆ ಕುರಿತು ತಿಳಿಸಿದರು.

ಇದನ್ನೂ ಓದಿ: Ballari News: ಬಳ್ಳಾರಿಯಲ್ಲಿ ಅಕ್ರಮ ಗಾಂಜಾ ಸಂಗ್ರಹ; ಇಬ್ಬರು ಆರೋಪಿಗಳ ಬಂಧನ

ಆಂಧ್ರಪ್ರದೇಶದ ಹ್ಯಾಂಡ್ಸ್‌ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ವೆಂಕಟರೆಡ್ಡಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಪರಿಸರ ಸಂರಕ್ಷಣೆಯು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ಗ್ರಾಮೀಣರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು.

ಹ್ಯಾಂಡ್ಸ್‌ ಸಂಸ್ಥೆಯ ಡಿ. ಗಂಗಾಧರ ಮಾತನಾಡಿ, ಪರಿಸರ ನಾಶದಿಂದಾಗುತ್ತಿರುವ ಅಪಾಯಗಳು ಹಾಗೂ ಜನಜೀವನದ ಮೇಲಿನ ಪರಿಣಾಮಗಳು ಕುರಿತು ತಿಳಿಸಿದರು. ತೋಟಗಾರಿಕೆ ಅಧಿಕಾರಿ ವಿನಯ್ ಕುಮಾರ, ಇಲಾಖೆಯ ಯೋಜನೆಗಳ ಕುರಿತು ತಿಳಿಸಿದರು.

ಇದನ್ನೂ ಓದಿ: KMH CUP: ʼಕೆಎಂಎಚ್‌ ಕಪ್‌ʼ ಕ್ರಿಕೆಟ್‌ಗೆ ನಟಿ ಭಾವನಾ ರಾಮಣ್ಣ ರಾಯಭಾರಿ

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸಿ.ಎಂ. ಬಸವರಾಜ ಸ್ವಾಮಿ, ಶಿವಕುಮಾರ ರೆಡ್ಡಿ, ನಾರಾಯಣ, ಟಿ. ತಿಮ್ಮನಗೌಡ, ವೈ.ಎಸ್. ಎರ್ರೆಣ್ಣ, ದೊಡ್ಡಬಸವನಗೌಡ, ಶಶಿಧರಗೌಡ, ವಿ. ಎರಿಸ್ವಾಮಿ, ಟಿ. ಎರಿಸ್ವಾಮಿ ಹಾಗೂ ದ್ರಾಕ್ಷಾಯಿಣಮ್ಮ ಉಪಸ್ಥಿತರಿದ್ದರು.

Continue Reading

ಕೊಡಗು

Kodagu News: ಬಿಸ್ಲೆರಿಯಿಂದ ಕೊಡಗಿನಲ್ಲಿ ಸ್ವಚ್ಛತಾ ಅಭಿಯಾನ

Kodagu News: ಕೊಡಗು ಜಿಲ್ಲೆಯ ಮಲ್ದರೆಯಲ್ಲಿ ಅರಣ್ಯ ಇಲಾಖೆಯು ಬಿಸ್ಲೆರಿ ಇಂಟರ್‌ನ್ಯಾಷನಲ್ ಸಹಯೋಗದಲ್ಲಿ ಬೃಹತ್‌ ಅರಣ್ಯ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಜರುಗಿತು. ಅಭಿಯಾನದಲ್ಲಿ ಕೊಡಗು ಜಿಲ್ಲೆಯ ಮಲ್ದರೆಯಿಂದ ಮುತ್ತೂರು ಅಭಯಾರಣ್ಯದವರೆಗೆ ಸುಮಾರು 10 ಕಿ.ಮೀ. ವರೆಗೆ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಈ ವೇಳೆ ತಂಡವು ಒಟ್ಟು 810 ಕಿಲೋ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಜೈವಿಕವಾಗಿ ವಿಘಟನೆಯಾಗದ ತ್ಯಾಜ್ಯವನ್ನು ಸಂಗ್ರಹಿಸಿದೆ.

VISTARANEWS.COM


on

forest cleaning campaign in Maldare of Kodagu district
Koo

ಕೊಡಗು: ಜಿಲ್ಲೆಯ ಮಲ್ದರೆಯಲ್ಲಿ ಅರಣ್ಯ ಇಲಾಖೆಯು ಬಿಸ್ಲೆರಿ ಇಂಟರ್‌ನ್ಯಾಷನಲ್ ಸಹಯೋಗದಲ್ಲಿ ಬೃಹತ್‌ ಅರಣ್ಯ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು (Kodagu News) ಹಮ್ಮಿಕೊಳ್ಳಲಾಗಿತ್ತು. ಸ್ವಚ್ಛತಾ ಅಭಿಯಾನದಲ್ಲಿ ಕೊಡಗು ಜಿಲ್ಲೆಯ ಮಲ್ದರೆಯಿಂದ ಮುತ್ತೂರು ಅಭಯಾರಣ್ಯದವರೆಗೆ ಸುಮಾರು 10 ಕಿ.ಮೀ. ವರೆಗೆ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಈ ವೇಳೆ ತಂಡವು ಒಟ್ಟು 810 ಕಿಲೋ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಜೈವಿಕವಾಗಿ ವಿಘಟನೆಯಾಗದ ತ್ಯಾಜ್ಯವನ್ನು ಸಂಗ್ರಹಿಸಿದೆ.

ಅಷ್ಟೇ ಅಲ್ಲ, ಸೈನೇಜ್ ಬೋರ್ಡ್‌ಗಳನ್ನು ನೆಟ್ಟು, ಸರಿಯಾದ ತ್ಯಾಜ್ಯ ವಿಲೇವಾರಿ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಿದೆ. ಜತೆಗೆ ಮರುಬಳಕೆಯನ್ನು ಉತ್ತೇಜಿಸಿ, ಕಸ ಎಸೆಯುವುದನ್ನು ತಪ್ಪಿಸಲು ಒಮ್ಮೆ ಬಳಸಿ ಎಸೆಯುವ ಪ್ಲಾಸ್ಟಿಕ್‌ನ ಪರಿಣಾಮ ಮತ್ತು ಬಳಸಿದ ಪ್ಲಾಸ್ಟಿಕ್ ಅನ್ನು ಸಂಗ್ರಹಿಸುವ ವಿಧಾನದ ಬಗ್ಗೆ ತಿಳಿವಳಿಕೆಯನ್ನೂ ಮೂಡಿಸಲು ಯತ್ನಿಸಿದೆ.

ಇದನ್ನೂ ಓದಿ: Share Market : ಷೇರು ಮಾರುಕಟ್ಟೆಯಲ್ಲಿ ನೂತನ ದಾಖಲೆ; ಮೊದಲ ಬಾರಿಗೆ 78,000 ಮಟ್ಟವನ್ನು ದಾಟಿದ ಸೆನ್ಸೆಕ್ಸ್

ಈ ಕುರಿತು ರಾಜ್ಯ ಅರಣ್ಯ ಇಲಾಖೆಯ ಟೈಗರ್ ರಿಸರ್ವ್‌ ಫಾರೆಸ್ಟ್‌ನ ಡಿಆರ್‌ಎಫ್‌ಒ ಚಿನ್ನವಿಶೇರಾ ಮಾತನಾಡಿ, “ಪರಿಸರ ಸುಸ್ಥಿರತೆಯನ್ನು ಖಾತ್ರಿ ಪಡಿಸುವ ನಿಟ್ಟಿನಲ್ಲಿ ಈ ಪಾಲುದಾರಿಕೆ ಅತ್ಯಂತ ಮಹತ್ವದ್ದಾಗಿದೆ. ಬಾಟಲ್ಸ್ ಫಾರ್ ಚೇಂಜ್‌ ಎಂಬ ಕಾರ್ಯಕ್ರಮದ ಅಡಿಯಲ್ಲಿ ಮರುಬಳಕೆ ಪ್ರಯತ್ನದಲ್ಲಿ ಬಿಸ್ಲೆರಿ ಇಂಟರ್‌ನ್ಯಾಷನಲ್‌ ಸಹಕಾರ ಮತ್ತು ಸಕ್ರಿಯ ತೊಡಗಿಸಿಕೊಳ್ಳುವಿಕೆಯನ್ನು ನಾವು ಮೆಚ್ಚುತ್ತೇವೆ. ಕರ್ನಾಟಕಕ್ಕೆ ಪರಿಸರ ಸ್ನೇಹಿ ಭವಿಷ್ಯವನ್ನು ರೂಪಿಸುವುದಕ್ಕೆ ನಾವು ನಿರಂತರವಾಗಿ ಶ್ರಮಿಸುತ್ತೇವೆ ಎಂದು ತಿಳಿಸಿದ್ದಾರೆ.

ಸಹಭಾಗಿತ್ವದ ಕುರಿತು ಬಿಸ್ಲೆರಿ ಇಂಟರ್‌ನ್ಯಾಷನಲ್ ಪ್ರೈ.ಲಿ.ನ ಸುಸ್ಥಿರತೆ ಮತ್ತು ಕಾರ್ಪೊರೇಟ್ ವ್ಯವಹಾರಗಳ ನಿರ್ದೇಶಕ ಕೆ.ಗಣೇಶ್ ಮಾತನಾಡಿ, ನಮ್ಮ ಬಾಟಲ್ಸ್ ಫಾರ್ ಚೇಂಜ್ ಕಾರ್ಯಕ್ರಮದ ಮೂಲಕ ಪರಿಸರ ಸಂರಕ್ಷಣೆಯನ್ನು ಉತ್ತೇಜಿಸಲು ಕರ್ನಾಟಕ ಅರಣ್ಯ ಇಲಾಖೆಯ ಜತೆಗೆ ಸಹಭಾಗಿತ್ವ ವಹಿಸಿರುವುದಾಗಿ ಘೋಷಿಸುವುದು ನಮಗೆ ಖುಷಿಯ ಸಂಗತಿಯಾಗಿದೆ. ಧನಾತ್ಮಕ ಬದಲಾವಣೆಯನ್ನು ಪ್ರೋತ್ಸಾಹಿಸಲು ಮತ್ತು ಸುಸ್ಥಿರ ಭವಿಷ್ಯವನ್ನು ಪೋಷಿಸಲು ನಮಗೆ ಈ ಪಾಲುದಾರಿಕೆಯು ಪೂರಕವಾಗಿರಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Transfer Guidelines: ಸರ್ಕಾರಿ ನೌಕರರ ವರ್ಗಾವಣೆಗೆ ಪರಿಷ್ಕೃತ ಮಾರ್ಗಸೂಚಿ ಪ್ರಕಟ; ಜು.9ರವರೆಗೆ ಅವಕಾಶ

ಸುಸ್ಥಿರ ಅಭಿವೃದ್ಧಿ ಉಪಕ್ರಮಗಳ ಮೂಲಕ ಸಮುದಾಯಗಳ ಮೇಲೆ ಧನಾತ್ಮಕ ಮತ್ತು ದೀರ್ಘಕಾಲೀನ ಪರಿಣಾಮವನ್ನು ಉಂಟು ಮಾಡುವ ಗುರಿ ಹೊಂದಿರುವ ಲಾಭೋದ್ದೇಶ ರಹಿತ ಸಂಸ್ಥೆ ಸಂಪ್ರಭಾವ್‌ ಫೌಂಡೇಶನ್‌ ಪರಿಣಾಮಕಾರಿಯಾಗಿ ತ್ಯಾಜ್ಯವನ್ನು ನಿರ್ವಹಿಸುವುದು ಮತ್ತು ಸಾಮಗ್ರಿಗಳನ್ನು ಮರುಬಳಕೆ ಮಾಡುವ ವಿಷಯದಲ್ಲಿ ಸಮುದಾಯಗಳಲ್ಲಿ ಜಾಗೃತಿ ಮೂಡಿಸುವ ಗುರಿ ಹೊಂದಿದೆ. ಈ ಸಂಸ್ಥೆಯು ಪಾಲುದಾರನಾಗಿದೆ. ಈ ಸಂಸ್ಥೆಯು ಕೊಡಗಿನ ಅಭ್ಯತ್‌ಮಂಗಲ ಮೂಲದ್ದಾಗಿದೆ.

Continue Reading

ಕ್ರೈಂ

Hunters Arrest : ಶಿವಮೊಗ್ಗದಲ್ಲಿ ಕಾಡುಕೋಣಗಳು ಬಲಿ; ಚಿಕ್ಕಬಳ್ಳಾಪುರ, ಬಾಗಲಕೋಟೆಯಲ್ಲಿ ಬೇಟೆಗಾರರು ಸೆರೆ

Hunters Arrest :ರಾಜ್ಯದ ಹಲವೆಡೆ ಬೇಟೆಗಾರರ ಬೆನ್ನತ್ತಿರುವ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಕಾಡು ಹಂದಿ ಹಾಗೂ ಬಾಗಲಕೋಟೆಯಲ್ಲಿ ಕೃಷ್ಣ ಮೃಗ ಬೇಟೆಯಾಡುತ್ತಿದ್ದವರನ್ನು ಬಂಧಿಸಲಾಗಿದೆ. ಇತ್ತ ಶಿವಮೊಗ್ಗದಲ್ಲಿ ಬೇಟೆಗಾರರ ಕೃತ್ಯಕ್ಕೆ ಕಾಡು ಕೋಣಗಳು ಬಲಿಯಾಗಿವೆ.

VISTARANEWS.COM


on

By

Hunters Arrest
Koo

ಶಿವಮೊಗ್ಗ: ಶಿವಮೊಗ್ಗದಲ್ಲಿ ಕಾಡು ಕೋಣಗಳ ಮಾರಣಹೋಮ ಹೋಗಿದೆ. ದುಷ್ಕರ್ಮಿಗಳು (Hunters Arrest) ನಾಲ್ಕೈದು ಕಾಡು ಕೋಣಗಳನ್ನು ಬೇಟೆಯಾಡಿದ್ದಾರೆ. ಶಿವಮೊಗ್ಗದ ಹೊಸನಗರ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಅಕ್ರಮ ಬಂದೂಕು ಬಳಸಿ ಕಾಡುಕೋಣಗಳ ಹತ್ಯೆ (Bison) ಮಾಡಲಾಗಿದೆ. ಕಾಡುಕೋಣಗಳ ಕಳೆಬರ ಪತ್ತೆಯಾಗಿದೆ.

ಸ್ಥಳಕ್ಕೆ ಸಾಗರ ಡಿಎಫ್‌ಓ ಸಂತೋಷ್ ಕೆಂಚಣ್ಣನವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡುಕೋಣದ ಕಳೇಬರಗಳನ್ನು ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಿದ್ದಾರೆ. ಆರೋಪಿಗಳು ಕಾಡುಕೋಣಗಳ ಮಾಂಸಕಾಗಿ ಬೇಟೆಯಾಡಿರುವ ಸಾಧ್ಯತೆ ಇದೆ. ಸದ್ಯ ಅರಣ್ಯಾಧಿಕಾರಿಗಳು ಕಾಡುಕೋಣಗಳ ಹತ್ಯೆ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಕಾಡು ಹಂದಿಗಳ ಬೇಟೆ

ಚಿಕ್ಕಬಳ್ಳಾಪುರದಲ್ಲಿ ಕಾಡು ಹಂದಿಗಳ ಬೇಟೆಯಾಡಿ ಸಾಗಾಟ ಮಾಡುತ್ತಿದ್ದ ಜಾಲವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ. ಬೀಚಗಾನಹಳ್ಳಿ ಮಿಟ್ಟೇಮರಿ ಅರಣ್ಯದಲ್ಲಿ ಕಾಡು ಹಂದಿಗಳ ಬೇಟೆಯಾಡುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ ಮಾಡಿದ್ದಾರೆ.

ದಾಳಿ ವೇಳೆ ಸಿಕ್ಕಿದ ಆರು ಕಾಡು ಹಂದಿಗಳನ್ನು ರಕ್ಷಣೆ ಮಾಡಲಾಗಿದೆ. ದಾಳಿಯಲ್ಲಿ ಇಬ್ಬರು ಸಿಕ್ಕಿ ಬಿದ್ದಿದ್ದು, ನಾಲ್ವರು ಪರಾರಿ ಆಗಿದ್ದಾರೆ. ಒಂದು ಬುಲೇರೋ ವಾಹನ ಸೀಸ್ ಮಾಡಿದ್ದಾರೆ. ಬಾಗೇಪಲ್ಲಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Hunters Arrest

ಇದನ್ನೂ ಓದಿ: Road Accident : ನಿಂತಿದ್ದ ಟ್ಯಾಂಕರ್‌ ಟ್ಯಾಲಿಗೆ ಬೈಕ್‌ ಡಿಕ್ಕಿ; ಸವಾರ ಸಾವು, ಮತ್ತೋರ್ವ ಗಂಭೀರ

ಕೃಷ್ಣ ಮೃಗ ಬೇಟೆಯಾಡುತ್ತಿದ್ದ 7 ಜನರ ಬಂಧನ

ಬಾಗಲಕೋಟೆಯ ಜಮಖಂಡಿ ಹೊರ ವಲಯದ ಅರಣ್ಯ ಪ್ರದೇಶದಲ್ಲಿ ಕೃಷ್ಣ ಮೃಗ ಬೇಟೆಯಾಡುತ್ತಿದ್ದ 7 ಜನರನ್ನು ಬಂಧಿಸಲಾಗಿದೆ. ರಾಯಭಾಗ ತಾಲೂಕಿನ ಕಡಕಬಾವಿ ಗ್ರಾಮದ ಸಿದ್ದಪ್ಪ ಪಿಡಾಯಿ (23), ಬ್ಯಾಕೋಡ ಗ್ರಾಮದ ಸುರೇಶ್ ಪಕಾಂಡೆ (21), ಚೇತನ್ ಬಿದರಿ (24) , ಕಂಕನವಾಡಿ ಗ್ರಾಮದ ನಿಂಗಪ್ಪ ಪಡತಾರೆ (24) ಹಾಗೂ ದೇವರಪಟ್ಟಿ ಗ್ರಾಮದ ಪ್ರಜ್ವಲ್ ಮೆಳವಂಕಿ (18), ರಬಕವಿ ಬನಹಟ್ಟಿ ತಾಲ್ಲೂಕಿನ ಹಳಿಂಗಳಿ ಗ್ರಾಮದ ಶಬ್ಬಿರ್ ಗುಡ್ಡದಮನಿ (25), ರಮಜಾನ್‌ಸಾಬ್ ಅಲಸ್ (25) ಬಂಧಿತ ಆರೋಪಿಗಳು.

Hunters Arrest

ಬಂಧಿತರಿಂದ 13.5 ಕೆಜಿ ಹಂದಿ ಮಾಂಸ, 4 ಮೊಬೈಲ್, ಕಾರು, ನಾಲ್ಕು ಬೇಟೆ ನಾಯಿಯನ್ನು ವಶಕ್ಕೆ ಪಡೆಯಲಾಗಿದೆ. ಡಿಸಿಎಫ್‌ಸಿ ಶ್ರೀಧರ್ ನೇತೃತ್ವದಲ್ಲಿ ಎಸಿಎಫ್ ರಾಜೇಶ್ವರಿ, ಆರ್‌ಎಫ್‌ಒ ಪವನ್ ಕುರನಿಂಗ ತಂಡ ಕಾರ್ಯಾಚರಣೆ ನಡೆಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Actor Darshan fans starts sticker trend mobile cover 6106
ಸ್ಯಾಂಡಲ್ ವುಡ್2 mins ago

Actor Darshan: ‘ಕೈದಿ ನಂ. 6106…ನಮ್ದೇ ದರ್ಬಾರುʼ ಅಂದ್ರು ಫ್ಯಾನ್ಸ್‌; ಮೊಬೈಲ್ ಕವರ್, ಆಟೋ, ಬೈಕ್‌ಗಳಲ್ಲಿ ಸ್ಟಿಕ್ಟರ್ ಟ್ರೆಂಡ್!

Valmiki Corporation Scam
ಕ್ರೈಂ4 mins ago

Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಸಿಬಿಐನಿಂದ ಬಂಧನ ಆತಂಕದಲ್ಲಿ ಮಾಜಿ ಸಚಿವ ನಾಗೇಂದ್ರ

Virat Kohli
ಕ್ರಿಕೆಟ್11 mins ago

Virat Kohli: ಕೊಹ್ಲಿ ಕ್ಲಾಸ್ ಪ್ಲೇಯರ್, ಫೈನಲ್​ನಲ್ಲಿ ಆಡುತ್ತಾರೆ ಎಂದು ಬೆಂಬಲ ಸೂಚಿಸಿದ ನಾಯಕ ರೋಹಿತ್​

karnataka Rain
ಮಳೆ13 mins ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Viral Video
Latest14 mins ago

Viral Video: ನಡುರಸ್ತೆಯಲ್ಲಿ ಶಿಕ್ಷಕಿಯ ಹಣೆಗೆ ಸಿಂಧೂರ ಹಚ್ಚಿ ಬಲವಂತವಾಗಿ ಮದುವೆಯಾದ ಯುವಕ!

Viral Video
Latest16 mins ago

Viral Video: ನೋಡುಗರ ಕಣ್ಮನ ಸೆಳೆಯುತ್ತಿದೆ ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಆಮಂತ್ರಣ ಪತ್ರಿಕೆ

Actor Darshan support by singer dr shamitha malnad
ಸ್ಯಾಂಡಲ್ ವುಡ್37 mins ago

Actor Darshan: ಆರಡಿ ದೇಹವ ಮೂರಡಿ ಬಗ್ಗಿಸಿ ನಮ್ಮೊಂದಿಗೆ ವಿನಯದಿ ಮಾತನಾಡಿದ ದರ್ಶನ್‌ ಅಣ್ಣ ಎಂದ ಖ್ಯಾತ ಗಾಯಕಿ!

airtel price hike
ಪ್ರಮುಖ ಸುದ್ದಿ41 mins ago

Airtel Price Hike: ಜಿಯೋ ನಂತರ ಏರ್‌ಟೆಲ್‌ ಡೇಟಾ ಬಳಕೆದಾರರ ಜೇಬಿಗೂ ಕತ್ತರಿ; 21% ದರ ಏರಿಕೆ

murder Case in Kalaburagi
ಕಲಬುರಗಿ44 mins ago

Murder case : ಗಾಣಗಾಪುರ ದತ್ತನ ದರ್ಶನಕ್ಕೆ ಆಗಮಿಸಿದ ಭಕ್ತನ ಬರ್ಬರ ಹತ್ಯೆ

Actor Darshan special appeal to the fans
ಸ್ಯಾಂಡಲ್ ವುಡ್58 mins ago

Actor Darshan: ಪರಪ್ಪನ ಅಗ್ರಹಾರದಿಂದಲೇ ಅಭಿಮಾನಿಗಳ ಬಳಿ ದರ್ಶನ್‌ ವಿಶೇಷ ಮನವಿ; ಏನದು?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ13 mins ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ17 hours ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ18 hours ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು20 hours ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ24 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ4 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ7 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ7 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು2 weeks ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

ಟ್ರೆಂಡಿಂಗ್‌