Site icon Vistara News

ಅನಂತ್‌ ಕುಮಾರ್‌ ಪುತ್ಥಳಿ ರಚನೆಗೆ ಹಿಂದೂಪರ ಸಂಘಟನೆಗಳೇ ಅಡ್ಡಗಾಲು

ananth kumar

ಬೆಂಗಳೂರು: ದಿ.ಅನಂತ್‌ ಕುಮಾರ್‌ ಅವರ ಪುತ್ಥಳಿ ಹಾಗೂ ನೆನಪಿನ ಸ್ಮೃತಿವನ ಮಾಡಲು ಮುಂದಾಗಿರುವ ಬಿಬಿಎಂಪಿಗೆ ಹಿಂದೂಪರ ಸಂಘಟನೆಗಳು ಅಡ್ಡಗಾಲು ಹಾಕಿವೆ.

ದಿವಂಗತ ಅನಂತ್ ಕುಮಾರ್ ಪುತ್ಥಳಿ ವಿಚಾರವಾಗಿ ತಗಾದೆ ಹುಟ್ಟಿಕೊಂಡಿದೆ. ಲಾಲ್‌ಬಾಗ್ ವೆಸ್ಟ್‌ಗೇಟ್ ಬಳಿ ಇರುವ ಕೂಡ್ಲಿ ಶೃಂಗೇರಿ ಮಠದ ಹೊರಭಾಗದಲ್ಲಿ ಸ್ಮೃತಿವನ ರಚನೆ ಮಾಡಲು ನಗರಪಾಲಿಕೆಯ ಆಡಳಿತ ವರ್ಗ ಮುಂದಾಗಿತ್ತು. ಸರ್ಕಾರ ಇದಕ್ಕೆ ಅನುಮತಿ ನೀಡಿದ್ದು, ಅನಂತ್ ಕುಮಾರ್ ಅವರ ಸ್ಮೃತಿವನ ಮಾಡಲು ಪಾಲಿಕೆ ತಯಾರಿ ಮಾಡಿಕೊಂಡಿದೆ. ಆದರೆ ಇದು ಮಠಕ್ಕೆ ಸೇರಿದ ಜಾಗ ಎಂದು ಹಿಂದೂಪುರ ಸಂಘಟನೆಗಳು ಹೇಳುತ್ತಿದ್ದು, ಬಿಬಿಎಂಪಿ ಯೋಜನೆಯನ್ನು ವಿರೋಧಿಸಿವೆ.

ಈ ಕುರಿತು ಮಠಕ್ಕೆ ಬಿಬಿಎಂಪಿ ನೋಟಿಸ್ ನೀಡಿದ್ದು, ನಿಮ್ಮಲ್ಲಿರುವ ಮೂಲ ದಾಖಲೆಗಳನ್ನು ನೀಡುವಂತೆ ವಿಶೇಷ ಆಯುಕ್ತರು ಸೂಚಿಸಿದ್ದಾರೆ. ಹಿಂದೂಪರ ಸಂಘಟನೆಗಳು ಸೋಮವಾರ ದಾಖಲೆ ಸಲ್ಲಿಸುವ ಸಾಧ್ಯತೆಯಿದೆ.

ಅನಂತ್ ಕುಮಾರ್ ಅವರ ಸ್ಮೃತಿವನದ ಜೊತೆಗೆ ಕಂಚಿನ ಪುತ್ಥಳಿ ಮಾಡಬೇಕು ಎಂದು ಕಳೆದ ಎರಡು-ಮೂರು ವರ್ಷಗಳ ಹಿಂದೆ ಪಾಲಿಕೆಯಲ್ಲಿ ನಿರ್ಧಾರ ಆಗಿತ್ತು. ಪಾಲಿಕೆಯ ನಿರ್ಣಯ ಸರ್ಕಾರಕ್ಕೆ ಕಳಿಸಿದ್ದು, ಸರ್ಕಾರದಿಂದ ಇದೀಗ ಪರ್ಮಿಷನ್ ಸಿಕ್ಕಿದೆ. ಇದು ಸರ್ಕಾರದ ಜಾಗವಾಗಿದ್ದು, ಪ್ರೂವ್ ಮಾಡುವ ಅವಶ್ಯಕತೆ ನಮಗಿಲ್ಲ. ಅಕಸ್ಮಾತ್ ಅವರ ಕಡೆ ದಾಖಲೆಗಳು ಇದ್ದರೆ ನೀಡಲಿ ಎಂದು ಪಾಲಿಕೆ ವಿಶೇಷ ಆಯುಕ್ತ ಹಣಕಾಸು ವಿಭಾಗದ ಜಯರಾಮ್ ರಾಯಪುರ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ | ಅನಂತಕುಮಾರ್‌‌ ಅಪೇಕ್ಷೆಗಳ ಈಡೇರಿಕೆಗಾಗಿ ಕಂಕಣಬದ್ಧರಾಗಿ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

Exit mobile version