ಬೆಂಗಳೂರು: ಒಂಟಿ ಮಹಿಳೆ ವಾಸವಾಗಿದ್ದ ಮನೆಗೆ ನುಗ್ಗಿ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ನಡೆಸಿ (Assault Case) ಚಿನ್ನಾಭರಣ ಸುಲಿಗೆ ಮಾಡಿದ ಘಟನೆ (crime news) ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆದಿದೆ.
ಹೆಚ್‌ಎಸ್‌ಆರ್ ಲೇಔಟ್‌ನ 5ನೇ ಸೆಕ್ಟರ್ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ನಡೆದಿದೆ. ಮಗುವನ್ನು ಶಾಲೆಗೆ ಬಿಟ್ಟು ಬರುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿಕೊಂಡು ಬಂದ ವ್ಯಕ್ತಿಯಿಂದ ಕೃತ್ಯ ನಡೆದಿದೆ. ಗಾಡ್ ಗಿಫ್ಟ್ ಎಂಬ ಅಪಾರ್ಟ್ಮೆಂಟ್‌ನಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದ ಮಹಿಳೆ ಮೂರು ದಿನಗಳ ಹಿಂದೆ ಮಗುವನ್ನು ಶಾಲೆಗೆ ಬಿಟ್ಟು ವಾಪಸ್ಸಾಗುತ್ತಿದ್ದರು. ಆ ವೇಳೆ ಆಕೆಯ ಕೈಯಲ್ಲಿದ್ದ ಬೀಗದ ಕೀಯನ್ನು ದುಷ್ಕರ್ಮಿ ಜೋಶ್ವಾ ಎಂಬಾತ ಅಬ್ಸರ್ವ್ ಮಾಡಿದ್ದ. ಕೈಯಲ್ಲಿ ಕೀ ಇರುವುದನ್ನು ನೋಡಿ ಆಕೆಯ ಮನೆಯಲ್ಲಿ ಬೇರೆ ಯಾರೂ ಇಲ್ಲ ಎಂದು ಕನ್ಫರ್ಮ್ ಮಾಡಿಕೊಂಡಿದ್ದ.
ಬಳಿಕ ಆಕೆಯನ್ನ ಹಿಂಬಾಲಿಸಿಕೊಂಡು ಬಂದು ಯಾವ ಫ್ಲೋರ್‌ನಲ್ಲಿ ವಾಸವಿದ್ದಾಳೆಂದು ತಿಳಿದುಕೊಂಡಿದ್ದ. ಬಳಿಕ ಮಧ್ಯಾಹ್ನದ ವೇಳೆ ಅಪಾರ್ಟ್‌ಮೆಂಟ್‌ಗೆ ಬಂದು ಬಾಗಿಲು ಬಡಿದಿದ್ದ. ಕೊರಿಯರ್ ಬಾಯ್ ಇರಬೇಕೆಂದು ಮಹಿಳೆ ಬಾಗಿಲು ತೆಗೆದಿದ್ದರು. ಆ ವೇಳೆ ಏಕಾಏಕಿ ಕಣ್ಣಿಗೆ ಖಾರದ ಪುಡಿ ಎರಚಿ ಕಿರಾತಕ ಮನೆಯೊಳಗೆ ನುಗ್ಗಿದ್ದ. ಬಳಿಕ ಚಾಕುವಿನಿಂದ ಹಲ್ಲೆ ಮಾಡಿ ಅಲ್ಮೇರಾದಲ್ಲಿದ್ದ ಚಿನ್ನಾಭರಣ ಸುಲಿಗೆ ಮಾಡಿ ಎಸ್ಕೇಪ್ ಆಗಿದ್ದ.
ಘಟನೆ ಬಳಿಕ ಮಹಿಳೆ ಕಿರುಚಾಡಿದ್ದು, ನೆರೆಹೊರೆಯ ನಿವಾಸಿಗಳು ಸಹಾಯಕ್ಕೆ ಧಾವಿಸಿದ್ದಾರೆ. ಸ್ಥಳಕ್ಕೆ ಬಂದ ಹೆಚ್ಎಸ್ಆರ್ ಲೇಔಟ್ ಪೊಲೀಸರಿಂದ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲು ಮಾಡಿಕೊಂಡು ಸಿಸಿಟಿವಿ ಹಾಗೂ ಆತನ ಗೂಗಲ್ ಪೇ ನಂಬರ್ ಆಧಾರದ ಮೇಲೆ ಆರೋಪಿಯನ್ನು ಸೆರೆಹಿಡಿಯಲಾಗಿದೆ. ಸುದ್ದಗುಂಟೇಪಾಳ್ಯದ ಜೋಶ್ವಾ ಬಂಧಿತ ಆರೋಪಿ.
ಮೊದಲು ಪ್ರತಿಷ್ಠಿತ ಕಂಪನಿಯಲ್ಲಿ ಹೆಚ್ಆರ್ ಆಗಿ ಕೆಲಸ ಮಾಡ್ತಿದ್ದ ಜೋಶ್ವಾ, ಲ್ಯಾಬ್ ಒಂದರಲ್ಲಿ ಥೆರಫಿಸ್ಟ್ ಆಗಿಯೂ ಕೆಲಸ ಮಾಡುತ್ತಿದ್ದ. ಬಳಿಕ ಆ ಕೆಲಸವನ್ನು ಬಿಟ್ಟು ಸ್ವಂತ ಕಂಪನಿ ಸ್ಟಾರ್ಟ್ ಮಾಡೋಕೆ ನಿರ್ಧರಿಸಿದ್ದ. 40 ಸಾವಿರ ಕೊಟ್ಟು ‘ಗ್ರೇಟ್ ಜಾಬ್’ ಹೆಸರಿನಲ್ಲಿ ಅಗ್ರಿಮೆಂಟ್ ಮಾಡಿಕೊಂಡಿದ್ದ. ಉಳಿದ ಹಣ ಸಂಗ್ರಹ ಮಾಡಲು ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿಕೊಂಡು ಸುಲಿಗೆ ಮಾಡೋದಕ್ಕೆ ಇಳಿದಿದ್ದ.
ಕದ್ದ ಮಾಲುಗಳನ್ನು ಈತ ರೌಡಿಶೀಟರ್‌ಗಳಿಗೆ ನೀಡುತ್ತಿದ್ದ. ಸುದ್ದಗುಂಟೆ ಪಾಳ್ಯ ರೌಡಿಶೀಟರ್ ರವೀಂದ್ರನ್ ಹಾಗೂ ಅಕ್ಷಯ್ ಎಂಬವರಿಗೆ ನೀಡುತ್ತಿದ್ದ. ಇವರಿಬ್ಬರೂ ಚಿನ್ನಾಭರಣ ಡಿಸ್ಟ್ರಿಬ್ಯೂಟ್ ಮಾಡುವ ಕೆಲಸ ಮಾಡುತ್ತಿದ್ದರು. ರವೀಂದ್ರನ್ ಮೇಲೆ ಎಸ್‌ಜಿ ಪಾಳ್ಯ ಠಾಣೆಯಲ್ಲಿ ಐದು ಕೇಸ್‌ಗಳಿವೆ. ಅಕ್ಷಯ ಮೇಲೆ ಇದೇ ಠಾಣೆಯಲ್ಲಿ ಒಂದು ಕೇಸ್ ಇದೆ. ಜೋಶ್ವಾ ಕೃತ್ಯ ಎಸಗಿ ಓಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Fraud Case : ಹುಡುಗಿ ಹೆಸರಲ್ಲಿ ಚಾಟಿಂಗ್; ಸಲಿಗೆ ಬೆಳೆಸಿ ಸುಲಿಗೆ!