Site icon Vistara News

Assault Case : ಗಂಡನ ಮೇಲೆ ಸಿಟ್ಟು; ಪ್ರಿಯಕರನ ಜತೆ ಸೇರಿ ಮಕ್ಕಳನ್ನು ಕಚ್ಚಿದ ಕ್ರೂರಿ ತಾಯಿ!

anger at her husband Cruel mother bites children with boyfriend

ಬೆಂಗಳೂರು: ಇತ್ತೀಚೆಗಷ್ಟೇ ತಾಯಿಯೊಬ್ಬಳು ಬಾಯ್‌ ಫ್ರೆಂಡ್‌ ಜತೆ ಸೇರಿ ಮೂರು ವರ್ಷದ ಮಗುವನ್ನು ಕೂಡಿ ಹಾಕಿ, ಹೊಡೆದುಬಡಿದು ಮಾಡಿದ್ದಳು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಜೆ.ಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾಯಿಯೊಬ್ಬಳು ಬಾಯ್ ಫ್ರೆಂಡ್ ಜತೆ ಸೇರಿ ತನ್ನ ಸ್ವಂತ ಮಕ್ಕಳಿಗೆ ಚಿತ್ರ ಹಿಂಸೆ ನೀಡಿರುವ ಆರೋಪ (Assault Case) ಕೇಳಿ ಬಂದಿದೆ.

ಆಯೇಷಾ ಎಂಬಾಕೆ ಇಮ್ರಾನ್ ಖಾನ್ ಎಂಬಾತನನ್ನು ಮದುವೆಯಾಗಿದ್ದಳು. ಆದರೆ ದಾಂಪತ್ಯದಲ್ಲಿ ಕಲಹ ಉಂಟಾಗಿ ನಂತರ ಡಿವೋರ್ಸ್ ಪಡೆದಿದ್ದಳು. ಈ ವೇಳೆ ಮಕ್ಕಳು ತಾಯಿ ಆಯೇಷಾ ಜತೆಯಲ್ಲೇ ಇದ್ದವು. ಗಂಡನ ಮೇಲಿನ ಸಿಟ್ಟಿಗೆ ಬಾಯ್ ಫ್ರೆಂಡ್ ಜತೆ ಸೇರಿ ಮಕ್ಕಳಿಗೆ ಚಿತ್ರಹಿಂಸೆಯನ್ನು ನೀಡಿದ್ದಾಳೆ.

ಇದನ್ನೂ ಓದಿ: Love Case : ತಂಗಿಯನ್ನು ಪ್ರೀತಿಸುತ್ತಿದ್ದ ಯುವಕನಿಗೆ ಚಾಕು ಹಾಕಿದ ಅಣ್ಣ

ಕೆಆರ್‌ಎಸ್ ಬಳಿಯ ಲಾಡ್ಜ್‌ನಲ್ಲಿ ಮಕ್ಕಳನ್ನು ನೆಲಕ್ಕೆ ಬಿಸಾಡಿ, ಮಕ್ಕಳಿಗೆ ಕಚ್ಚಿ, ಫ್ರಿಡ್ಜ್‌ನಿಂದ ತಣ್ಣೀರು ಸುರಿದಿದ್ದಾಳೆ. ಮಾತ್ರವಲ್ಲ ಆಯೇಷಾಳ ಬಾಯ್‌ ಫ್ರೆಂಡ್‌ ಸಲೀಂ ಎಂಬಾತ ಮಕ್ಕಳ ಕೈ ಮೇಲೆ ಸಿಗರೇಟ್‌ನಿಂದ ಸುಟ್ಟಿ ನಂತರ ಆ್ಯಶ್ ಹೊಡೆದಿದ್ದಾನೆ. ಇನ್ನೂ ಚಿತ್ರಹಿಂಸೆ ಬಗ್ಗೆ ಹೊರಗೆ ಹೇಳಿದರೆ ನಿಮ್ಮನ್ನೂ ಹಾಗೂ ತಂದೆಯನ್ನೂ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಹೆದರಿ ಮಕ್ಕಳು ಹಲವು ದಿನದಿಂದ ತಂದೆ ಬಳಿಯೂ ಹಿಂಸೆ ಬಗ್ಗೆ ಹೇಳಿಲಿಲ್ಲ.

ಆದರೆ ಇವರ ಚಿತ್ರಹಿಂಸೆಗೆ ನೊಂದ ಮಕ್ಕಳು ತಂದೆ ಇಮ್ರಾನ್‌ ಖಾನ್‌ಗೆ ಹೇಳಿದ್ದಾರೆ. ನಂತರ ಈ ಬಗ್ಗೆ ಪೊಲೀಸರ ಗಮನಕ್ಕೆ ತಂದಿದ್ದಾರೆ. ಸದ್ಯ ಮಕ್ಕಳು ನೀಡಿದ ದೂರಿನ ಮೇಲೆ ಎಫ್‌ಐಆರ್ ದಾಖಲಾಗಿದೆ. ಜೆ.ಜೆ ನಗರ ಪೊಲೀಸ್ ಠಾಣೆಯಲ್ಲಿ ತಾಯಿ ಆಯೇಷಾ, ಸಲೀಂ, ಜಬೀರ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version