Site icon Vistara News

Assault Case: ಯಾರ ಮೇಲೋ ದ್ವೇಷ, ಇನ್ಯಾರಿಗೋ ಮಚ್ಚಿನೇಟು

abhigowda rakesh assault

ಬೆಂಗಳೂರು: ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಅಟ್ಯಾಕ್ ಮಾಡಲು ಬಂದವನೊಬ್ಬ ಹಾಕಿದ ಮಚ್ಚಿನೇಟು (Assault Case) ಸಂಬಂಧವೇ ಇಲ್ಲದ ಇನ್ಯಾರಿಗೋ ಬಿದ್ದಿದೆ. ಸುಬ್ರಹ್ಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಯತ್ರಿನಗರದಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ.

ತನ್ನ ವೈರಿಯನ್ನು ಕತ್ತರಿಸಲು ಬಂದವನು ಬಾಡಿಗೆ ಮನೆ ಮಹಿಳೆ ಮೇಲೆ ಮಚ್ಚಿನಿಂದ ಅಟ್ಯಾಕ್ ಮಾಡಿದ್ದಾನೆ. ರಾಕೇಶ್@ರಾಕು ಎಂಬಾತನ ಮೇಲೆ ಅಭಿಗೌಡ@ಅಮೂಲ್ ಎಂಬಾತನಿಂದ ಹತ್ಯಾ ಯತ್ನ ನಡೆದಿದೆ. ರಾಕೇಶ್ ಹಾಗು ಅಭಿಗೌಡನ ನಡುವೆ ಹಳೆ ವೈಷಮ್ಯವಿತ್ತು. ಇದೇ ಐದನೇ ತಾರೀಕು ಅವರ ನಡುವೆ ಗಣೇಶ ಇಟ್ಟಿದ್ದ ವಿಚಾರಕ್ಕೆ ಸಂಬಂಧಿಸಿ ಕಿರಿಕ್ ಆಗಿತ್ತು. ಈ ವೇಳೆ ಅಭಿಗೌಡನ ಕೈಗೆ ರಾಕೇಶ್ ಗ್ಯಾಂಗ್ ಚಾಕುವಿನಿಂದ ಇರಿದಿತ್ತು.

ಇವರಿಬ್ಬರೂ ಜೊತೆಯಲ್ಲಿಯೇ ಇದ್ದವರಾಗಿದ್ದು, ಹುಡುಗಿ ವಿಚಾರಕ್ಕೆ ವೈಷಮ್ಯ ಶುರುವಾಗಿತ್ತು. ನಂತರ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುತ್ತಿದ್ದರು. ಇಂದು ರಾಕೇಶ್ ಮೇಲೆ ಹಲ್ಲೆ ಮಾಡಲು ಅಭಿಗೌಡ ಮಚ್ಚು ಹಿಡಿದು ಬಂದಿದ್ದ. ಬಾಡಿಗೆ ಮನೆ ಬಾಗಿಲು ಬಡಿದಿದ್ದ. ಬಾಡಿಗೆ ನೀಡಿದ್ದ ಮನೆಯೇ ರಾಕೇಶ್ ಮನೆ ಎಂದು ತಿಳಿದು ಮಚ್ಚಿನಿಂದ ಬಾಗಿಲು ಬಡಿದಿದ್ದ. ಬಾಡಿಗೆದಾರ ಮಹಿಳೆ ಹೊರ ಬರುತ್ತಿದ್ದಂತೆ ರಾಕೇಶ್‌ ಎಂದು ತಿಳಿದು ಮಚ್ಚು ಬೀಸಿದ್ದ. ಈ ವೇಳೆ ಮಹಿಳೆ ಕೈ ಕತ್ತರಿಸಿಹೋಗಿದೆ.

ಇದಾದ ಬಳಿಕ ಅಭಿಗೌಡ ಅಲ್ಲಿಂದ ಪರಾರಿಯಾಗಿದ್ದಾನೆ. ಸುಬ್ರಹ್ಮಣ್ಯನಗರ ಪೊಲೀಸರು ದೂರು ದಾಖಲಿಸಿಕೊಂಡು ಅಭಿಗೌಡನಿಗೆ ತಲಾಶ್‌ ನಡೆಸಿದ್ದಾರೆ.

ಸ್ನೇಹಿತರ ಜತೆಯೇ ಮಲಗಲು ಒತ್ತಾಯಿಸಿದ ವಿಕೃತ ಪತಿ! ಪತ್ನಿಯ ದೂರು

ಬೆಂಗಳೂರು: ಸ್ನೇಹಿತರ ಜೊತೆಯೇ ಖಾಸಗಿ ಕ್ಷಣ ಕಳೆಯಲು ಒತ್ತಾಯಿಸಿದ ವಿಕೃತ ಪತಿಯ ಬಗ್ಗೆ ಜಿಗುಪ್ಸೆ ಹೊಂದಿದ ಪತ್ನಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ.

ಮಂಗಳೂರು ಮೂಲದ ಸುಧೀರ್ ಪೈ ಎಂಬಾತನ ಮೇಲೆ ದೂರು ದಾಖಲಾಗಿದ್ದು, ವಿಕೃತ ಪತಿ ವಿರುದ್ಧ ಪತ್ನಿ ಶ್ರೇಯಾ ಪೈ ಎಂಬಾಕೆಯಿಂದ ದೂರು ದಾಖಲಾಗಿದೆ. ಈತ ಪತ್ನಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದ. ಗಂಡನ ವಾಟ್ಸ್ಯಾಪ್ ಚೆಕ್ ಮಾಡಿದಾಗ ಅನೇಕ ಅಶ್ಲೀಲ ಮೆಸೇಜ್ ಹಾಗು ಲೈಂಗಿಕ ಕಾರ್ಯಕರ್ತೆಯರ ದರದ ಬಗ್ಗೆ ಚಾಟ್‌ಗಳು ಆಕೆಗೆ ಕಂಡುಬಂದಿದ್ದವು. ಇದನ್ನು ಪ್ರಶ್ನಿಸಿದಾಗ ಹಲ್ಲೆ ನಡೆಸಿದ್ದು, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.

ನಂತರ ತನ್ನ ಮೂರು ಜನ ಸ್ನೇಹಿತರ ಜೊತೆ ದೈಹಿಕ ಸಂಪರ್ಕ ಬೆಳೆಸುವಂತೆ ಸುಧೀರ್ ಪತ್ನಿಯನ್ನು ಒತ್ತಾಯಿಸಿದ್ದ. ಇದರಿಂದ ಬೆಚ್ಚಿಬಿದ್ದ ಪತ್ನಿ, ಬೇಡಿಕೆ ನಿರಾಕರಿಸಿದ್ದರು. ಇದರಿಂದ ಕ್ರುದ್ಧನಾದ ಸುಧೀರ್‌ ಆಕೆಯ ಮೇಲೆ ಹಲ್ಲೆ ನಡೆಸಿದ್ದುದೂ ಅಲ್ಲದೆ, ಸ್ನೇಹಿತರನ್ನು ಕರೆತಂದು ಬಲಪ್ರಯೋಗಕ್ಕೂ ಮುಂದಾಗಿದ್ದ. ಇದರಿಂದ ನೊಂದ ಪತ್ನಿ ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: Murder Case: ಮಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ; ಹಲ್ಲೆಯಿಂದ ಮಗನ ಸ್ಥಿತಿಯೂ ಗಂಭೀರ

Exit mobile version