ಬೆಂಗಳೂರು: ಬೆಂಗಳೂರಿನ ವಿದ್ಯಾರಣ್ಯಪುರ ಬಾರ್‌ವೊಂದರಲ್ಲಿ ಕೇವಲ 20 ರೂಪಾಯಿಗೆ ಕೊಲೆ ಯತ್ನ ನಡೆದಿದೆ. ಬಾರ್ ಕ್ಯಾಶಿಯರ್‌ಗೆ ಚಾಕು ಇರಿದ ಇಬ್ಬರು ಆರೋಪಿಗಳನ್ನು (Assault Case) ಪೊಲೀಸರು ಬಂಧಿಸಿದ್ದಾರೆ.
ಚೇತನ್ ಹಾಗು ಕಾರ್ತಿಕ್ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡ ಆರೋಪಿಗಳಾಗಿದ್ದಾರೆ. ವಿದ್ಯಾರಣ್ಯಪುರ ನರಸೀಪುರ ಜಯಶ್ರೀ ಬಾರ್‌ನಲ್ಲಿ ಕ್ಯಾಶಿಯರ್ ರಂಜಿತ್ ಎಂಬಾತನ ಮೇಲೆ ಹಲ್ಲೆ ಚಾಕು, ಬಾಟಲ್‌ನಿಂದ ಮೂವರು ಆರೋಪಿಗಳು ಹಲ್ಲೆ ನಡೆಸಿದ್ದರು.
ಈ ಆರೋಪಿಗಳು ಎಲ್ಲರೂ ಆಟೋ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದರು. ಕುಡಿಯಲು ಬಾರ್‌ಗೆ ಬಂದಾಗ 150 ರೂಪಾಯಿ ಬಿಲ್ ಆಗಿತ್ತು. ಬಾರ್ ಕ್ಯಾಶಿಯರ್ ರಂಜಿತ್ 20 ರೂಪಾಯಿ ಹೆಚ್ಚಿಗೆ ಕೇಳಿದ್ದ ಎನ್ನಲಾಗಿದೆ. ಇಷ್ಟಕ್ಕೆ ಸಿಟ್ಟಾದ ಮೂವರು ಆರೋಪಿಗಳು ಕೊಲೆಗೆ ಯತ್ನಿಸಿದ್ದಾರೆ. ಮೂವರಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಕೆರೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ
ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಕೆರೆಕೋಡಿ ಕೆರೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಸುಮಾರು 30 ವರ್ಷದೊಳಗಿನ ಮಹಿಳೆಯ ಶವ ಪತ್ತೆಯಾಗಿದ್ದು, ಕೊಲೆ ಮಾಡಿ ಬಿಸಾಡಿರುವ ಶಂಕೆ ಇದೆ. ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ