Site icon Vistara News

Assault Case: ಮಹಿಳೆ ಮೇಲೆ ವಿನಾಕಾರಣ ಹಲ್ಲೆ ನಡೆಸಿದ ಸೈಕೋ ಜಿಮ್‌ ಟ್ರೈನರ್‌

gym trainer assault

ಬೆಂಗಳೂರು: ಬೆಂಗಳೂರಿನ ಬೀದಿಯಲ್ಲಿ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದ ಒಬ್ಬರು ಮಹಿಳೆಯ ಮೇಲೆ ಹಾಡುಹಗಲೇ ಜಿಮ್‌ ಟ್ರೈನರ್‌ (gym trainer) ಒಬ್ಬ ಹಲ್ಲೆ ನಡೆಸಿ (assault case) ಹೋಗಿದ್ದಾನೆ.

ಆಗಸ್ಟ್ 2ರಂದು ಸಾಯಂಕಾಲ ನಡೆದಿರುವ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಹೆಚ್‌ಎಸ್‌ಆರ್ ಲೇಔಟ್‌ನ ಜಿಮ್ ಟ್ರೈನರ್ ನಿತಿನ್ ಎಂಬವನಿಂದ ಹಲ್ಲೆ ನಡೆದಿದೆ. ಕ್ರಿಪ್ಟನ್ ಜಿಮ್‌ನ ಟ್ರೈನರ್ ಆಗಿರುವ ನಿತಿನ್, ಸೈಕೋ ಥರ ನಡೆದುಕೊಂಡಿದ್ದಾನೆ. ಯುವತಿ ತನ್ನ ಪಾಡಿಗೆ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ನಿತಿನ್‌ ಆಕೆಯ ತಲೆಗೆ ಹಲ್ಲೆ ಮಾಡಿ ದೂಡಿ ಹಾಕಿ ಹೋಗಿದ್ದಾನೆ.

ನಿತಿನ್‌ಗೆ ಹೆದರಿ ದೂರು ಯುವತಿ ದೂರು ದಾಖಲಿಸಿಲ್ಲ. ಹಲ್ಲೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಯುವತಿಗೆ ಹಲ್ಲೆ ನಡೆಸಿರುವ ದೃಶ್ಯ ‌ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಇತ್ತೀಚೆಗೆ ಕೆಲವು ಜಿಮ್‌ಗಳ ಕಾನೂನುಭಂಜಕರ ಅಡ್ಡೆಯಾಗುತ್ತಿರುವುದನ್ನು ಗಮನಿಸಲಾಗಿದೆ. ರೌಡಿಶೀಟರ್‌ಗಳು ಕೆಲವು ಜಿಮ್‌ಗಳನ್ನು ಅಡ್ಡೆ ಮಾಡಿಕೊಳ್ಳುತ್ತಿದ್ದು, ಜಿಮ್‌ಗಳಲ್ಲೂ ಇವರಿಗೆ ತರಬೇತಿ ನೀಡಲಾಗುತ್ತಿದೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ನಿತಿನ್‌ಗೆ ರೌಡಿ ಸಂಪರ್ಕ ಇರಬಹುದಾ, ಅಥವಾ ಈತ ದಾರಿಹೋಕರ ಮೇಲೆ ವಿನಾಕಾರಣ ಹಲ್ಲೆ ಮಾಡುವ ಸೈಕೋನಾ ಎಂದು ತಿಳಿದುಬರಬೇಕಿದೆ. ಈ ಬಗ್ಗೆ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸ್ನೇಹಿತರ ಗಲಾಟೆ ಚಾಕು ಇರಿತದಲ್ಲಿ ಅಂತ್ಯ

ಬೆಂಗಳೂರು: ಕುಡಿದ ಅಮಲಿನಲ್ಲಿ ನಡೆದ ಸ್ನೇಹಿತರ ಗಲಾಟೆ ಇರಿತದಲ್ಲಿ ಅಂತ್ಯವಾಗಿದೆ. ಅಜಿತ್ ರಾಜ್ ಮತ್ತು ಅನಿಲ್ ಎಂಬವರು ಕುಡಿದು ಗಲಾಟೆ ಮಾಡಿಕೊಂಡಿದ್ದು, ತರಕಾರಿ ಕಟ್ ಮಾಡುವ ಚಾಕುವಿನಿಂದ ಅನಿಲ್‌ ತನ್ನ ಸ್ನೇಹಿತನ ಕೆನ್ನೆಗೆ ಇರಿದಿದ್ದಾನೆ.

ಘಟನೆಯನ್ನು ಗಮನಿಸಿದ ನೆರೆಕೆರೆಯವರು 112ಕ್ಕೆ ಕರೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗಾಯಾಳು ಅಜೀತ್ ರಾಜ್‌ನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ಚಾಕುವಿನಿಂದ ಇರಿದ ಅನಿಲ್‌ನನ್ನು ಬಂಧಿಸಿದ್ದಾರೆ. ಅಜಿತ್‌ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Assault case : ಯಾವನೋ ಅವನು ಬಾಸ್‌ ಅಂದಿದ್ದಕ್ಕೆ ಲಾಂಗ್‌ನಿಂದ ಹಲ್ಲೆ

Exit mobile version