ಬೆಂಗಳೂರಿನ ಲೇಕ್ ವ್ಯೂ ಅಪಾರ್ಟ್ಮೆಂಟ್ ಎದುರು ಯುವಕ-ಯುವತಿಯರು ಪಾರ್ಟಿ ಮಾಡುತ್ತಿದ್ದರು. ಕಂಟ್ರೋಲ್ ರೂಂಗೆ ಕರೆ ಬಂದ ಹಿನ್ನೆಲೆ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಮಹಿಳಾ ಜಾಗೃತಿ ಸಂಬಂಧಿಸಿದಂತೆ ಪಾರ್ಟಿ ಮಾಡುವಂತಿಲ್ಲ ಮನೆಗೆ ಹೋಗಿ ಎಂದು ಮೈಕ್ ಮೂಲಕ ಅನೌನ್ಸ್ ಮಾಡಿದ್ದರು. ಈ ವೇಳೆ ಪೊಲೀಸರೊಂದಿಗೆ ಜಗಳಕ್ಕೆ ಇಳಿದಿದ್ದ ಯುವಕನೊಬ್ಬ ನಮಗೆ ಡಿಸಿಪಿ ಹಾಗೂ ಇನ್‌ಸ್ಪೆಕ್ಟರ್ ಪರಿಚಯ ಎಂದು ಅವಾಜ್ (Assault case) ಹಾಕಿದ್ದಾನೆ. ಪೊಲೀಸರ ಮೇಲೆ ಅಟ್ರಾಸಿಟಿ ಹಾಗು ಲೈಂಗಿಕ ದೌರ್ಜನ್ಯ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ. ಮಾತ್ರವಲ್ಲದೇ ಪೊಲೀಸರನ್ನು ತಳ್ಳಿ ಎಳೆದಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ.
ಡಿಸಿಪಿ ಸಾರಾಫಾತೀಮಾ, ಇನ್‌ಸ್ಪೆಕ್ಟರ್ ಮಹೇಶ್ ಅವರ ಹೆಸರು ಹೇಳಿ ಧಮ್ಕಿ ಹಾಕಿರುವ ಆರೋಪ ಕೇಳಿ ಬಂದಿದೆ. ಸುನೀಲ್ ಹಾಗು ಇನ್ನಿತರ ಯುವಕರಿಂದ ಕೃತ್ಯ ನಡೆದಿದೆ. ಅಮೀನ ಸಾ ಬಿರಾದರ್ , ವೆಂಕಟೇಶ್ , ಹಸಿಂ ಪಟೇಲ್ ದೀಪು ಆರ್ ಎಂಬ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದೆ. ಈ ಸಂಬಂಧ ಪೊಲೀಸರಿಂದಲೇ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:Murder Case : ಉಡುಪಿಯಲ್ಲಿ ಪತ್ನಿಯನ್ನು ಕಡಿದು ಕೊಂದು ಹಾಕಿದ ಪತಿ!
ಬಾಡಿಗೆ ಮನೆ ಪಡೆದು ಡ್ರಗ್ಸ್ ಸೇವನೆ
ಕನಕಪುರ ರಸ್ತೆ ಬಳಿ ಇರುವ ಬಾಡಿಗೆ ಮನೆಯಲ್ಲಿ ಯುವಕರಿಂದ ಡ್ರಗ್ ಸೇವನೆ ಆರೋಪ ಕೇಳಿ ಬಂದಿದೆ. ಸ್ಥಳೀಯರೇ ಯುವಕರನ್ನು ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ. ಮನೆಯೊಂದರಲ್ಲಿ ಡ್ರಗ್ಸ್‌ಗೆ ಬಳಸುವ ನಾಲ್ಕೈದು ಸಿರೆಂಜ್‌ಗಳು ಪತ್ತೆಯಾಗಿವೆ. ಪ್ರತಿದಿನ ಸಿರೆಂಜ್‌ನಿಂದ ಡ್ರಗ್ಸ್ ಚುಚ್ಚಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯುವಕರಿದ್ದ ಮನಗೆ ಬೀಗ ಹಾಕಿದ ಸ್ಥಳೀಯರು ಪೊಲೀಸರನ್ನು ಕರೆಸಿದ್ದಾರೆ. ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಯುವಕರು ಡ್ರಗ್ ಸೇವನೆ ಮಾಡುತ್ತಿದ್ದರಾ ಎಂಬುದರ ಪತ್ತೆಗಾಗಿ ಯುವಕನಿಗೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ