Site icon Vistara News

Assault Case: ಬೇರೆ ಕಂಪನಿಗೆ ಸೇರಿದ ಪ್ರಿಯತಮೆಯ ತಲೆಗೆ ರಾಡ್‌ನಿಂದ ಹೊಡೆದ ಪ್ರಿಯತಮ

assault culprit ravikumar

ಬೆಂಗಳೂರು: ಬೇರೆ ಕಂಪನಿಗೆ ಸೇರಿಕೊಂಡಳು, ಫೋನ್‌ ಕರೆಗೆ ಉತ್ತರಿಸುತ್ತಿಲ್ಲ ಎಂದು ಸಿಟ್ಟಿಗೆದ್ದ ಪ್ರಿಯತಮನೊಬ್ಬ ಗೆಳತಿಗೆ ರಾಡ್‌ನಿಂದ ಹಲ್ಲೆ ಮಾಡಿ (Assault Case) ರಕ್ತಸಿಕ್ತಗೊಳಿಸಿದ ಘಟನೆ ನಡೆದಿದೆ.

ಸ್ನೇಹ ಸಿಕ್ತ ಚಟರ್ಜಿ (26) ಎಂಬಾಕೆ ಮೇಲೆ‌ ಹಲ್ಲೆ ನಡೆದಿದ್ದು, ಪ್ರಿಯತಮ ರವಿಕುಮಾರ್ (28) ಎಂಬಾತನಿಂದ ಕೃತ್ಯ ನಡೆದಿದೆ. ಸ್ನೇಹ ಮತ್ತು ರವಿಕುಮಾರ್ ಜೋಡಿ ಟೆಕ್ಕಿಗಳಾಗಿದ್ದು, ಕಳೆದ ಒಂದು ವರ್ಷದಿಂದ ಇಂದಿರಾನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅದೇ ಕಂಪನಿಯಲ್ಲಿ ಸ್ನೇಹ ಇಂಟರ್ನ್ ಆಗಿ ಸೇರಿಕೊಂಡಿದ್ದರು. ಈ ವೇಳೆ ಇಬ್ಬರ ಮಧ್ಯೆ ಪ್ರೇಮಾಂಕುರ ಆಗಿದೆ.

ಸ್ನೇಹ ಇತ್ತೀಚೆಗೆ ಬೇರೆ ಕಂಪನಿ‌ ಸೇರಿಕೊಂಡಿದ್ದು, ರವಿಕುಮಾರ್‌ನ ಫೋನ್ ಅವಾಯ್ಡ್ ಮಾಡುತ್ತಿದ್ದರು. ಕರೆಗಳಿಗೆ ಸರಿಯಾಗಿ ಉತ್ತರಿಸುತ್ತಿರಲಿಲ್ಲ. ಸರಿಯಾಗಿ ಮಾತಾಡುತ್ತಿಲ್ಲ ಎಂದು ರವಿ ಕೋಪಗೊಂಡಿದ್ದ. ಹೀಗಾಗಿ ಪ್ರೇಯಸಿ ಮೇಲೆ ಅನುಮಾನ ಬೆಳೆಸಿಕೊಂಡಿದ್ದ. ಆಗಸ್ಟ್ 2ರ ಬುಧವಾರ ಮುಂಜಾನೆ 3.30ರ ಸುಮಾರಿಗೆ ಪ್ರೇಯಸಿಯನ್ನು ಮೈಕೋ ಲೇಔಟ್‌ನಲ್ಲಿರುವ ತನ್ನ ಪಿಜಿ ಬಳಿ ಕರೆಸಿಕೊಂಡಿದ್ದ. ಈ ವೇಳೆ ಕಬ್ಬಿಣದ ರಾಡ್‌ನಿಂದ ಯುವತಿ ತಲೆಗೆ ಹಲ್ಲೆ ನಡೆಸಿದ್ದಾನೆ.

ತಕ್ಷಣ ಸ್ಥಳೀಯರು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಯುವತಿ ನಿಮ್ಹಾನ್ಸ್‌ನಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮೈಕೋ ಲೇಔಟ್ ಪೊಲೀಸರಿಂದ (bangalore police) ಆರೋಪಿ ರವಿಕುಮಾರ್ ಬಂಧನವಾಗಿದೆ.

ಇದನ್ನೂ ಓದಿ: Assault Case: ಮಹಿಳೆ ಮೇಲೆ ವಿನಾಕಾರಣ ಹಲ್ಲೆ ನಡೆಸಿದ ಸೈಕೋ ಜಿಮ್‌ ಟ್ರೈನರ್‌

Exit mobile version