ಬೆಂಗಳೂರು: ಪೊಲೀಸ್ ಠಾಣಾ ಆವರಣದಲ್ಲೇ ಮಹಿಳೆಯೊಬ್ಬಳು ಇನ್‌ಸ್ಪೆಕ್ಟರ್‌ಗೆ ಕಪಾಳಮೋಕ್ಷ (Assault Case) ಮಾಡಿದ್ದಾಳೆ. ಸೈಟು ವಿಚಾರಕ್ಕೆ (Site Dispute) ಎರಡು ಗುಂಪುಗಳ ಮಧ್ಯೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ ಜ್ಞಾನಭಾರತಿ ಠಾಣೆಗೆ ಬಂದಿದ್ದರು. ಈ ವೇಳೆ ಎರಡು ಗುಂಪುಗಳ ಸದಸ್ಯರು ಮಾತಿಗೆ ಮಾತು ಬೆಳೆಸಿ ಕಿತ್ತಾಡಲು ಮುಂದಾಗಿದ್ದರು. ಹೀಗಾಗಿ ಮಧ್ಯಪ್ರವೇಶಿಸಿ ಗಲಾಟೆ ಮಾಡದಂತೆ ಎಚ್ಚರಿಸಲು ಹೋದ ಇನ್‌ಸ್ಪೆಕ್ಟರ್‌ಗೆ ಮಹಿಳೆಯೊಬ್ಬಳು ಕಪಾಳಕ್ಕೆ ಹೊಡೆದಿದ್ದಾಳೆ.
ನಿನ್ನೆ ಬುಧವಾರ ಸಂಜೆ ಜ್ಞಾನಭಾರತಿ ಠಾಣೆ ಇನ್‌ಸ್ಪೆಕ್ಟರ್ ರವಿ ಅವರಿಗೆ ಫೌಜೀಯಾ ಎಂಬಾಕೆ ಹಲ್ಲೆ ನಡೆಸಿದ್ದಾಳೆ. ಫೌಜೀಯಾ ಹಾಗೂ ಇನ್ನೊಂದು ಗುಂಪು ಸೈಟು ವಿಚಾರಕ್ಕೆ ಜ್ಞಾನಭಾರತಿ ಠಾಣೆ ಮೆಟ್ಟಿಲೇರಿದ್ದರು. ಈ ವೇಳೆ ಠಾಣೆ ಆವರಣದಲ್ಲಿ ಎರಡು ಗುಂಪುಗಳು ಏರು ಧ್ವನಿಯಲ್ಲಿ ಕೂಗಾಡುತ್ತಾ ಮಾತನಾಡುತ್ತಿದ್ದರು.
ಕರ್ತವ್ಯದಲ್ಲಿದ್ದ ಇನ್‌ಸ್ಪೆಕ್ಟರ್ ರವಿ ಎರಡು ಗುಂಪುಗಳಿಗೆ ಗಲಾಟೆ ಮಾಡದಂತೆ ವಾರ್ನಿಂಗ್ ಮಾಡಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಫೌಜೀಯ ಏಕಾಏಕಿ ಇನ್‌ಸ್ಪೆಕ್ಟರ್ ರವಿ ಅವರ ಕಪಾಳಕ್ಕೆ ಹೊಡೆದಿದ್ದಾಳೆ. ಮಾನವ ಹಕ್ಕುಗಳ ಸಂಘಟನೆಯಲ್ಲಿರುವ ಫೌಜೀಯಾ ಹಾಗೂ ಮತ್ತಿಬ್ಬರು ಮಹಿಳೆಯರ ಮೇಲೆ ಎಫ್‌ಐಆರ್ ದಾಖಲಾಗಿದೆ. ರಾತ್ರಿಯೇ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದಾರೆ. ಸದ್ಯ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
ಇದನ್ನೂ ಓದಿ: Assault Case : ವಿವಾಹಿತೆ ಹಿಂದೆ ಬಿದ್ದ ಪಾಗಲ್ ಪ್ರೇಮಿ; ಮದುವೆ ನಿರಾಕರಿಸಿದ್ದಕ್ಕೆ ಮನೆಗೆ ಇಟ್ಟ ಬೆಂಕಿ
ನಡುರಸ್ತೆಯಲ್ಲೆ ಪತ್ನಿಗೆ ಚಾಕು ಇರಿದು ಕೊಂದ ಪತಿ
ಬೆಂಗಳೂರು: ಬೆಂಗಳೂರಿನ (Bengaluru News) ಕೋರಮಂಗಲ ಪೊಲೀಸ್ ಠಾಣಾ (Kormangala police station) ವ್ಯಾಪ್ತಿಯಲ್ಲಿ ಪತಿಯಿಂದಲೇ ಪತ್ನಿಯ ಬರ್ಬರ ಕೊಲೆಯಾಗಿದೆ. ಸೆಲ್ವಿನ್ ಪ್ರಾನ್ಸಿಸ್ ಎಂಬಾತ ಪತ್ನಿಯನ್ನು ನಡುರಸ್ತೆಯಲ್ಲೆ ಚಾಕುವಿನಿಂದ ಇರಿದು (Murder Case) ಕೊಂದಿದ್ದಾನೆ. ಗುರುವಾರ ಮಧ್ಯಾಹ್ನ 3.30 ರ ಸುಮಾರಿಗೆ ಈ ಘಟನೆ ನಡೆದಿದೆ.
ಸೆಲ್ವಿನ್ ಪ್ರಾನ್ಸಿಸ್ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ. ಈ ನಡುವೆ ಪತಿ-ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ಮೂಡಿತ್ತು. ಹೀಗಾಗಿ ಪತಿಯಿಂದ 6 ತಿಂಗಳ ಹಿಂದೆ ದೂರಾಗಿದ್ದಳು. ವೆಂಕಟಾಪುರದ ತಾಯಿ ಮನೆಯಲ್ಲಿ ವಾಸವಿದ್ದಳು. ಇಂದು ಗುರುವಾರ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಪತ್ನಿ ಜತೆಗೆ ಸೆಲ್ವಿನ್ ಪ್ರಾನ್ಸಿಸ್ ಗಲಾಟೆ ಮಾಡಿಕೊಂಡಿದ್ದ. ಈ ಮೊದಲೇ ಪ್ರಿಪ್ಲಾನ್ ಮಾಡಿಕೊಂಡು ಪತ್ನಿಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ.
ಸ್ಥಳಕ್ಕೆ ಕೋರಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸೆಂಜ್ ಜಾನ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೃತ್ಯ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ