Site icon Vistara News

Assault Case : ರಾಜಧಾನಿಯಲ್ಲಿ ನಿಲ್ಲದ ಪುಂಡರ ಪುಂಡಾಟ; ಕಾರು ಚಾಲಕನ ಚೇಸ್‌ ಮಾಡಿ ಹಲ್ಲೆ

assault case

ಬೆಂಗಳೂರು: ಕಾರೊಂದನ್ನು ಹಿಂಬಾಲಿಸಿಕೊಂಡು ಬಂದ ಕೆಲ ಪುಂಡರು ಚಾಲಕನ ಮೇಲೆ ಹಲ್ಲೆಗೆ (Assault Case) ಯತ್ನಿಸಿದ್ದಾರೆ. ಬೈಕ್‌ನಲ್ಲಿ ಬಂದ ಪುಂಡರು ತಡರಾತ್ರಿ ಕಾರನ್ನು ಚೇಸ್‌ ಮಾಡಿ ಎರಡು ಬಾರಿ ಕಾರಿಗೆ ಅಡ್ಡ ಹಾಕಿ ಹಲ್ಲೆಗೆ ಯತ್ನಿಸಿದ್ದಾರೆ. ಕಾರಿನ ಗ್ಲಾಸ್ ಹೊಡೆದು ದರ್ಪ ಮೆರೆದಿದ್ದಾರೆ. ಬೆಂಗಳೂರಿನ ವಿಜಯನಗರ ಸಮೀಪ ಪುಂಡರ ಕ್ರೌರ್ಯಕ್ಕೆ ಚಾಲಕರು ಬೆಚ್ಚಿ ಬಿದ್ದಿದ್ದಾರೆ. ಕಾರಿನ ಅಕ್ಕ ಪಕ್ಕ ಬೈಕ್‌ಗಳಲ್ಲಿ ಸುಮಾರು ಒಂದೂವರೆ ಕಿಲೋ ಮೀಟರ್‌ವರೆಗೂ ಚೇಸ್‌ ಮಾಡಿದ್ದಾರೆ. ಕಾರಿನ ಡ್ಯಾಷ್ ಬೋರ್ಡ್‌ನಲ್ಲಿ ಪುಂಡರ ಅಟ್ಟಹಾಸ ಬಯಲಾಗಿದೆ. ಡ್ಯಾನ್ಸರ್ ಹಾಗು ಕೋರಿಯಾಗ್ರಾಫರ್ ಆಗಿರುವ ಅರವಿಂದ್ ಎಂಬುವವರ ಕಾರಿನ್ನು ಚೇಸ್‌ ಮಾಡಿ ಗ್ಲಾಸ್‌ ಹೊಡೆದು, ಹಲ್ಲೆಗೆ ಯತ್ನಿಸಿದ್ದಾರೆ. ವಿಜಯನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವ್ಹೀಲಿಂಗ್‌ ಮಾಡಿ ಬೆದರಿಕೆ ಹಾಕಿದ ಪುಂಡಾರು

ರಸ್ತೆಯಲ್ಲಿ ವ್ಹೀಲಿಂಗ್‌ ಮಾಡಿ ಪುಂಡಾಟ ಮಾಡಿದ್ದಲ್ಲದೇ ಬೆದರಿಸಿ ಹಲ್ಲೆಗೆ ಯತ್ನಿಸಿದ ಕಿರಾತಕರನ್ನು ಪೊಲೀಸರು ಬಂಧಿಸಿದ್ದಾರೆ. ಕ್ರಿಮಿನಲ್ ಅಫೆನ್ಸ್ ಎಂಬ ಕಾರಣಕ್ಕೆ ಲಾ ಆ್ಯಂಡ್ ಆರ್ಡರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಇಬ್ಬರು ಅಪ್ರಾಪ್ತರು ಸೇರಿ ಸಂಜಯ್ ಎಂಬ ಯುವಕನನ್ನು ಬಂಧಿಸಲಾಗಿದೆ. ಸಿಲ್ಕ್ ಬೋರ್ಡ್ ಬಳಿ ಇರುವ ಹೊಸ ಫ್ಲೈ ಓವರ್ ಸಮೀಪ ಈ ಮೂವರು ವ್ಹೀಲಿಂಗ್‌ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಹೊರತು ಪಡಿಸಿ ಲಾ ಆ್ಯಂಡ್ ಆರ್ಡರ್‌ನಲ್ಲಿ ಕೇಸ್ ದಾಖಲು ಮಾಡಲಾಗಿತ್ತು. ಇದೀಗ ಸುಮೋಟೋ ಕೇಸ್ ದಾಖಲಿಸಿ ಸುದ್ಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Police Firing: ದರೋಡೆ, ಕೊಲೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಸೆರೆ

ರೀಲ್ಸ್‌ ಮಾಡಿದ್ದಕ್ಕೆ ಠಾಣೆ ಮೆಟ್ಟಿಲೇರಿದ ಯುವಕರು

ಕಿವುಡರ ಬಗ್ಗೆ ಸಮಾಜದಲ್ಲಿ ಕೆಟ್ಟ ಭಾವನೆ ಮೂಡುವ ರೀತಿಯಲ್ಲಿ ರೀಲ್ಸ್‌ ಮಾಡಿದ್ದಕ್ಕೆ ಯುವಕರಿಬ್ಬರು ಜೈಲುಪಾಲಾಗಿದ್ದಾರೆ. ಕಿವುಡರ ಸನ್ನೆ ಹಾಗೂ ಸಂಜ್ಞಾ ಭಾಷೆಗೆ ಅವಮಾನ ಮಾಡಿದ್ದರು. ಸೋಶಿಯಲ್‌ ಮೀಡಿಯಾದಲ್ಲಿ ಕಿವುಡರ ಹಾಗು ಮೂಖರ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವಂತೆ ರೋಹನ್ ಕಾರ್ಯಪ್ಪ ಹಾಗು ಶರವಣ ಭಟ್ಟಾಚಾರ್ಯ ಇಬ್ಬರು ವಿಡಿಯೋ ಮಾಡಿದ್ದರು. ಹೀಗಾಗಿ ವಿಶೇಷ ಚೇತನರು ಬೆಂಗಳೂರಿನ ಸೈಬರ್ ಕ್ರೈಂನಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ದೆಹಲಿ ಪೊಲೀಸರಿಗೂ ಕೂಡ ಆನ್ ಲೈನ್ ಮೂಲಕ ದೂರು ಸಲ್ಲಿಸಲಾಗಿತ್ತು. ಸದ್ಯ ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಂದ ಇಬ್ಬರ ಬಂಧಿಸಿದ್ದಾರೆ.

ಕಿಡಿಗೇಡಿಗಳಿಂದ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ

ಮನೆ ಮುಂದೆ ನಿಲ್ಲಿಸಿದ್ದ ಗೂಡ್ಸ್ ವಾಹನ ಹಾಗೂ ಎರಡು ಆಟೋಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಬೆಂಗಳೂರಿನ ನಂದಿನಿಲೇಔಟ್ ಸಮೀಪದ ಲಕ್ಷ್ಮೀದೇವಿ ನಗರದಲ್ಲಿ ಘಟನೆ ನಡೆದಿದೆ. ಶುಕ್ರವಾರ ಮುಂಜಾನೆ ಮೂರು ಗಂಟೆ ಸುಮಾರಿಗೆ ಬಂದು ಬೆಂಕಿ ಹಾಕಿದ್ದಾರೆ. ಘಟನೆ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನರೇಂದ್ರ ಹಾಗೂ ಹಯಾಜ್ ಎಂಬುವರಿಗೆ ಸೇರಿದ ವಾಹನಗಳಿಗೆ ಬೆಂಕಿ ಹಾಕಿದ್ದಾರೆ. ಈ ಹಿಂದೆ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಕಲ್ಲು ತೂರಾಟ ಮಾಡುತ್ತಿದ್ದರು. ಇದೀಗ ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾರೆ. ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version