Site icon Vistara News

Assault: ನಗರದಲ್ಲಿ ಮತ್ತೆ ಪುಂಡರ ಅಟ್ಟಹಾಸ, ಹೋಟೆಲ್‌ ಕಾರ್ಮಿಕರ ಮೇಲೆ ದೌರ್ಜನ್ಯ

assault bangalore

ಬೆಂಗಳೂರು: ಹೋಟೆಲ್-‌ ಅಂಗಡಿ ಕಾರ್ಮಿಕರ ಮೇಲೆ ರಾಜಧಾನಿಯ ಪುಂಡರು ನಡೆಸುತ್ತಿರುವ ದೌರ್ಜನ್ಯ ಮತ್ತೆ ಮುಂದುವರಿದಿದೆ. ಬಾಣಸವಾಡಿಯಲ್ಲಿ ಮತ್ತೊಂದು ಹಲ್ಲೆ ಪ್ರಕರಣ ಬೆಳಕಿಗೆ ಬಂದಿದೆ.

ಈ ಹಿಂದೆ ಬಾಣಸವಾಡಿಯಲ್ಲಿ ಬೇಕರಿಯಲ್ಲಿ ಕೆಲವು ಪುಂಡರು ಮಾರಕಾಸ್ತ್ರಗಳನ್ನು ಬೀಸಿ ಅಟ್ಟಹಾಸ ಮೆರೆದಿದ್ದರು. ಮೀನು ವ್ಯಾಪಾರಿ ಮೇಲೆ ಕಿಡಿಗೇಡಿಗಳು ಲಾಂಗ್ ಬೀಸಿದ ಕೃತ್ಯವೂ ಬಾಣಸವಾಡಿಯಲ್ಲೇ ನಡೆದಿತ್ತು. ಈಗ ಮತ್ತದೇ ಬಾಣಸವಾಡಿಯಲ್ಲಿ ಇನ್ನೊಂದು ಹಲ್ಲೆ ನಡೆದಿದೆ.

ಮೂರ್ನಾಲ್ಕು ಜನ ಯುವಕರು ಕಾಫಿ ಅಂಗಡಿಯಲ್ಲಿದ್ದವನ ಮೇಲೆ ಹಲ್ಲೆ ನಡೆಸಿದ್ದಾರೆ. ಬಾಣಸವಾಡಿಯ ಕಲ್ಯಾಣನಗರದ ʼದಿ ಚಟ್ ಪಟಾ ಅಫೇರ್ʼ ಎಂಬ ಅಂಗಡಿಯಲ್ಲಿ ಈ ಕೃತ್ಯ ನಡೆದಿದೆ. ಮಾತುಕತೆ ನಡೆಸುವ ವೇಳೆ ಕೆಲಸದವನ ಮೇಲೆ ದರ್ಪ ತೋರಿಸಿದ ಯುವಕರು, ಏಕಾಏಕಿ ಹಲ್ಲೆ ನಡೆಸಿದ್ದಾರೆ. ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಎರಡನೇ ಪ್ರಕರಣ ಇದಾಗಿದೆ.

ಇದನ್ನೂ ಓದಿ: Assault Case In Kolar: ತಂಗಿಯನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ ಅಣ್ಣನ ಮೇಲೆ ಲಾಂಗ್‌ನಿಂದ ಹಲ್ಲೆ; ಕೈಕಟ್ಟಿ ಕುಳಿತ ಖಾಕಿ ಪಡೆ!

Exit mobile version