ಬೆಂಗಳೂರು: ಮನೆ ಮಾಲಿಕನೊಬ್ಬ ತನ್ನ ಮನೆಯಲ್ಲಿ ಲೀಸ್‌ಗೆ ಇದ್ದ ಇಬ್ಬರ ತಲೆಗೆ ಪಿಸ್ತೂಲ್ ಇಟ್ಟು ಬೆದರಿಸಿ, ನಡು ರಸ್ತೆಯಲ್ಲಿ ಯದ್ವಾತದ್ವಾ ಚಚ್ಚಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅನೀಲ್ ಎಂಬಾತನಿಂದ ಕೃತ್ಯ ನಡೆದಿದ್ದು, ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೌಶಿಕ್ ಹಾಗೂ ನಂದನ್ ಎಂಬವರ ಮೇಲೆ ಹಲ್ಲೆ ನಡೆದಿದೆ.
ಅನೀಲ್ ಮನೆಯಲ್ಲಿ ನಂದನ್ ಹಾಗೂ ಕೌಶಿಕ್ ಲೀಸ್‌ಗೆ ಇದ್ದಾರೆ. ಮನೆ ಖಾಲಿ ಮಾಡುವಂತೆ ಒತ್ತಡ ಹಾಕಿದ್ದ ಅನೀಲ್, ನಂದನ್ ಹಾಗೂ ಕೌಶಿಕ್‌ರ ತಾಯಿ ಜೊತೆ ಕೆಟ್ಟದಾಗಿ ಮಾತಾಡಿದ್ದ. ಇದನ್ನು ಪ್ರಶ್ನೆ ಮಾಡಲು ಅನೀಲ್ ಕಚೇರಿ ಬಳಿಗೆ ಅಣ್ಣ ತಮ್ಮ ತೆರಳಿದ್ದರು. ಈ ವೇಳೆ ಇಬ್ಬರ ಮೇಲೂ ಅನೀಲ್ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ನಡುರಸ್ತೆಯಲ್ಲಿ ಅವರನ್ನು ಥಳಿಸುತ್ತಾ, ಪಿಸ್ತೂಲ್ ಪ್ರದರ್ಶಿಸುತ್ತಾ ಸಾಗಿದ್ದಾನೆ. ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೋಕಿಲಾಲ ಹಾಗೂ ದರ್ಪಿಷ್ಟನಾಗಿರುವ ಅನೀಲ್, ಪಿಸ್ತೂಲ್ ಹಾಗೂ ಬಂದೂಕು ಹಿಡಿದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಕಿಕೊಂಡಿದ್ದಾನೆ. ಸದ್ಯ ದೂರು ದಾಖಲಾಗಿರುವ ಬಳಿಕ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ನಡೆದಿದೆ.
ಇದನ್ನೂ ಓದಿ | Girl murder | ಆಳಂದದಲ್ಲಿ ಬಾಲಕಿಯ ಅತ್ಯಾಚಾರ, ಕೊಲೆ