ಬೆಂಗಳೂರು: ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲಿ ವಕೀಲೆಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿರುವ (Attempt Murder case) ಘಟನೆ ಮಂಗಳವಾರ ನಡೆದಿದೆ. ವಿಮಲ ಎಂಬುವವರ ಪರಿಸ್ಥಿತಿ ಚಿಂತಾಜನಕವಾಗಿದೆ. ಜಯರಾಮರೆಡ್ಡಿ ಎಂಬಾತನಿಂದ ಈ ಕೃತ್ಯ ನಡೆದಿದೆ.
ವಕೀಲೆಯಾಗಿರುವ ವಿಮಲ ಜತೆ ಆತ್ಮೀಯವಾಗಿದ್ದ ಜಯರಾಮ ಹಂತ ಹಂತವಾಗಿ ಸುಮಾರು ಒಂದೂವರೆ ಕೋಟಿ ರೂ.ಗಿಂತಲೂ ಹೆಚ್ಚು ಹಣ ನೀಡಿದ್ದ. ಆದರೆ ಆನಂತರ ಇವರಿಬ್ಬರಿಗೂ ಮನಸ್ತಾಪ ಎದುರಾಗಿತ್ತು. ಹೆಜ್ಜಾಲ ಬಳಿ ಇರುವ ಪ್ರಾಪರ್ಟಿ ವಿಚಾರವಾಗಿ ಇಬ್ಬರು ಕಿರಿಕ್ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ವಿಮಲಾ ದೌರ್ಜನ್ಯದ ಜತೆಗೆ ಪ್ರಾಪರ್ಟಿ ವಿಚಾರವಾಗಿಯೂ ಶೇಷಾದ್ರಿಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣ ಸಂಬಂಧ ಇಬ್ಬರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆದರೆ ಏಕಾಏಕಿ ಕೋರ್ಟ್ ಹಾಲ್‌ನ ಒಂದನೇ ಎಸಿಎಂಎಂ ಬಳಿ ಚಾಕುವಿನಿಂದ ಇರಿದಿದ್ದಾನೆ. ವಿಮಲಾ ಪರಿಸ್ಥಿತಿ ಗಂಭೀರವಾಗಿದ್ದು ಅವರನ್ನು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಹಲಸೂರುಗೇಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Theft case : ಚರಂಡಿಯೊಳಗೆ ಅಡಗಿ ಕುಳಿತ ರಕ್ತಚಂದನ ಸಾಗಾಟಗಾರರನ್ನು ಹಿಡಿದ ಅರಣ್ಯಾಧಿಕಾರಿಗಳು
ಧಾರವಾಡದಲ್ಲಿ ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ
ಧಾರವಾಡದ ಹೆಬ್ಬಳ್ಳಿ ರಸ್ತೆಯ ಗೋವನಕೊಪ್ಪ ಕ್ರಾಸ್ ಬಳಿ ಕಲ್ಲಿನಿಂದ ಜಜ್ಜಿ ಯುವಕನ ಕೊಲೆ ಮಾಡಲಾಗಿದೆ. ಹರೀಶ್ ಶಿಂಧೆ (30)ಹತ್ಯೆಗೀಡಾದವನು. ಹರೀಶ್‌ಗೆ ಚಾಕುವಿನಿಂದ ಇರಿದು ಬಳಿಕ ಕಲ್ಲಿನಿಂದ ಜಜ್ಜಿ ಹತ್ಯೆ ನಡೆಸಲಾಗಿದೆ. ಹತ್ಯೆಗೆ ನಿಖರ ಕಾರಣ ತಿಳಿದಿಲ್ಲ. ಸದ್ಯ ಧಾರವಾಡ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ