ಬೆಂಗಳೂರು: ರಾಜಧಾನಿಯಲ್ಲಿ ಆಟೋ ಚಾಲಕರ ದುಂಡಾವರ್ತನೆ ಮುಂದುವರಿದಿದೆ. ಬಾಡಿಗೆ ವಿಚಾರಕ್ಕೆ ಆಟೋ ಚಾಲಕನಿಂದ ಪ್ರಯಾಣಿಕನ ಕೊಲೆ ಕೇಸ್ ಬೆನ್ನಲ್ಲೆ ಮತ್ತೊಂದು ಹಲ್ಲೆ ಪ್ರಕರಣ (Auto Driver Assault) ವರದಿಯಾಗಿದೆ.
ಟ್ರಿಪ್ ಕ್ಯಾನ್ಸಲ್ ಮಾಡದಿದ್ದಕ್ಕೆ ಪ್ರಯಾಣಿಕನಿಗೆ ಆಟೋದಿಂದ ಗುದ್ದಿ, ಹಲ್ಲೆ ಮಾಡಲಾಗಿದೆ. ಆನ್‌ಲೈನ್‌ನಲ್ಲಿ ಪ್ರಯಾಣಿಕ ಆಟೋ ಬುಕ್ ಮಾಡಿದ್ದ. ತನ್ನ ತಾಯಿಯ ಜೊತೆಗೆ ಆಟೋಗೆ ಕಾದಿದ್ದ .ನಂತರ ಬಂದ ಆಟೋ ಚಾಲಕ, ಬುಕಿಂಗ್ ಕ್ಯಾನ್ಸಲ್ ಮಾಡಿ ಆಫ್‌ಲೈನ್ ಬರುವಂತೆ ಕೇಳಿದ್ದ. ಆಫ್‌ಲೈನ್ ಆಗಲ್ಲ ಎಂದಿದ್ದಕ್ಕೆ ಪ್ರಯಾಣಿಕನ ಜೊತೆ ದುಂಡಾವರ್ತನೆ ತೋರಿದ್ದಾನೆ.
ಪ್ರಯಾಣಿಕ ಇದ್ದ ಸ್ಥಳಕ್ಕೆ ಬಂದು ಆಟೋದಲ್ಲಿ ಡಿಕ್ಕಿ ಹೊಡೆದು ಹಲ್ಲೆಗೆ ಯತ್ನಿಸಿದ ಆಟೋ ಚಾಲಕನ ದುಂಡಾವರ್ತನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಾಲಕನ ದುರ್ವರ್ತನೆಯ ಬಗ್ಗೆ ದೂರಿ ಟ್ವೀಟ್ ಮಾಡಲಾಗಿದ್ದು, ಆ ಮೂಲಕ ನಗರ ಸಂಚಾರಿ ಪೊಲೀಸರಿಗೆ ಪ್ರಯಾಣಿಕ ದೂರು ನೀಡಿದ್ದಾರೆ. ಆಟೋ ಸಂಖ್ಯೆ ನಮೂದಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ: Auto Driver Arrest : ಬ್ಯಾಗ್ ನೋಡಿಕೊ, ಬರ್ತೇನೆ ಎಂದ ಪ್ರಯಾಣಿಕ; 1.5 ಲಕ್ಷ ರೂ. ಎಗರಿಸಿ ಪರಾರಿಯಾದ ರಿಕ್ಷಾ ಚಾಲಕ!