Site icon Vistara News

Jai Shree Ram : ಜೈ ಶ್ರೀರಾಮ್‌ ಎಂದ ಮುಸ್ಲಿಂ ಜೋಡಿಯನ್ನು ಸೀಳಿ ಹಾಕ್ತೇನೆ ಎಂದವ ಸಿಕ್ಕಿಬಿದ್ದ; ಅವನೊಬ್ಬ ಆಟೋ ಚಾಲಕ!

Jai shree ram

ಬೆಂಗಳೂರು: ಬುರ್ಖಾ ಹಾಕಿದ ಯುವತಿ ಮತ್ತು ಟೋಪಿ ಧರಿಸಿದ ಯುವಕ ಇಬ್ಬರೂ ಸೇರಿ ಜೈ ಶ್ರೀರಾಮ್‌ (Jai Shree Ram) ಎಂದ ಹೇಳಿದ್ದಕ್ಕೆ ಸಾಮಾಜಿಕ ಜಾಲತಾಣದ (Threatening on Social Media) ಮೂಲಕ ಬೆದರಿಕೆ ಹಾಕಿದ ಯುವಕನನ್ನು ಬೆಂಗಳೂರು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ನಗರದ ಕೋಣನಕುಂಟೆ ನಿವಾಸಿ ನಯಾಜ್ ಖಾನ್ ಬಂಧಿತ. ಈತ ರಿಕ್ಷಾ ಚಾಲಕನಾಗಿದ್ದಾನೆ.

ಕೆಲವು ದಿನಗಳ ಹಿಂದೆ ಈ ಬೆದರಿಕೆ ವಿದ್ಯಮಾನ ನಡೆದಿತ್ತು. ಯುವಕ ಉರ್ದು ಭಾಷೆಯಲ್ಲಿ ಬೆದರಿಕೆ ಹಾಕಿದ್ದ. ಆತನ ಹಿನ್ನೆಲೆಯಲ್ಲಿ ಕಂಡೂ ಕಾಣದಂತೆ ಹಾದುಹೋಗುವ ರಿಕ್ಷಾವೊಂದರ ಬಣ್ಣವನ್ನು ಆಧರಿಸಿ ಇದು ಬೆಂಗಳೂರಿನ ಯುವಕನ ಕೃತ್ಯ ಎನ್ನುವ ಸಣ್ಣ ಅನುಮಾನವೊಂದು ಬಂದಿತ್ತು. ಈ ಬೆದರಿಕೆಯ ವಿಡಿಯೊವನ್ನು ವ್ಯಕ್ತಿಯೊಬ್ಬರು ಬೆಂಗಳೂರು ಪೊಲೀಸರ ಟ್ವಿಟರ್‌ ಅಕೌಂಟ್‌ಗೆ ಟ್ಯಾಗ್‌ ಮಾಡಿದ್ದರು. ಆಗ ಪರಿಶೀಲಿಸುತ್ತೇವೆ ಎಂದು ಹೇಳಿದ್ದ ಬೆಂಗಳೂರು ಪೊಲೀಸರು ಈಗ ಆರೋಪಿಯನ್ನು ಪತ್ತೆ ಹಚ್ಚಿಯೇ ಬಿಟ್ಟಿದ್ದಾರೆ.

threatening video

ಹಾಗಿದ್ದರೆ ಏನಿದು ಪ್ರಕರಣ? ಯಾರಿದು ಯುವಕ?

ವಿಡಿಯೊ ಒಂದರಲ್ಲಿ ಒಬ್ಬ ಯುವಕ ಮತ್ತು ಯುವತಿ ಹಿಂದೆ ಮುಂದೆ ನಿಂತುಕೊಂಡಿದ್ದು, ಇಬ್ಬರೂ ಒಬ್ಬರ ಬಳಿಕ ಇನ್ನೊಬ್ಬರು ಜೈಶ್ರೀರಾಂ ಎನ್ನುತ್ತಾರೆ. ದಿಲ್‌ ಕಿ ದಿಮಾಗ್‌ ಮೇ ಏಕ್‌ ಹೀ ನಾಮ್‌ ಜೈ ಶ್ರೀರಾಂ ಎಂದು ಅವರು ಹೇಳುತ್ತಾರೆ. ಈ ವಿಡಿಯೊ ಎಲ್ಲಿಯದು ಎನ್ನುವುದು ಗೊತ್ತಿಲ್ಲ. ಈ ವಿಡಿಯೊಗೆ ಪ್ರತಿಕ್ರಿಯೆಯಾಗಿ ಯುವಕನೊಬ್ಬ ಈ ಜೋಡಿಗೆ ಬೆದರಿಕೆ ಹಾಕುತ್ತಾನೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆ.

ಯುವಕ ಉರ್ದು ಭಾಷೆಯಲ್ಲಿ ಅತ್ಯಂತ ಅಸಭ್ಯ ಭಾಷೆ ಮತ್ತು ಭಯ ಹುಟ್ಟಿಸುವ ಭಾವ ಭಂಗಿಗಳಲ್ಲಿ ಈ ವಿಡಿಯೊ ಮಾಡಿದ್ದಾನೆ. ‘ಬುರ್ಖಾ ತೆಗೆದು ಏನಾದ್ರು ಮಾತನಾಡಿ. ಮುಸ್ಲಿಂರನ್ನು ಮಧ್ಯಕ್ಕೆ ತಂದು ಜೈ ಶ್ರೀರಾಂ ಅಂತ ಹೇಳ್ಬೇಡಿ. ನಿಜವಾದ ಮುಸ್ಲಿಂರ ಮುಂದೆ ಬಂದು ಮಾತನಾಡಿದರೆ ಸೀಳ್ತೀವಿʼʼ ಎಂದು ಬೆದರಿಕೆ ಹಾಕಲಾಗಿದೆ.

ಯುವಕ ಮೊದಲು ತಾನು ಹಾಕಿಕೊಂಡಿದ್ದ ಟೋಪಿಯನ್ನು ತೆಗೆದು ಭಯ ಹುಟ್ಟಿಸುವ ರೀತಿಯಲ್ಲಿ ಬೆದರಿಕೆ ಹಾಕುತ್ತಾನೆ. ನಾಲಿಗೆಯನ್ನು ಕಚ್ಚಿಕೊಂಡು, ಬೆರಳುಗಳನ್ನು ಹಿಡಿದು ಹೆದರಿಸುತ್ತಾನೆ, ಕುತ್ತಿಗೆ ಕತ್ತರಿಸುತ್ತೇನೆ ಎಂದು ಹೇಳುವ ರೀತಿಯಲ್ಲಿ ತೋರಿಸುತ್ತಾ ಸಾಗುತ್ತಾನೆ.

ಈಗ ಬಂಧನಕ್ಕೆ ಒಳಗಾದ ನಯಾಜ್‌ ಖಾನ್‌ ಯಾರು?

ನಿಜವೆಂದರೆ ಜೈಶ್ರೀರಾಮ್‌ ಎಂದು ಘೋಷಣೆ ಮಾಡುವ ಮುಸ್ಲಿಂ ದಿರಸು ಧರಿಸಿದವರು ನಿಜಕ್ಕೂ ಮುಸ್ಲಿಮರೇನಾ ಎನ್ನುವುದು ಸ್ಪಷ್ಟವಿಲ್ಲ. ಯಾಕೆಂದರೆ, ಇದರಲ್ಲಿ ಹುಡುಗನ ಕೊರಳಲ್ಲಿ ಶಿಲುಬೆಯೂ ಇದೆ. ಆದರೆ, ಬೆಂಗಳೂರು ಪೊಲೀಸರಿಗೆ ಮುಖ್ಯವಾಗಿದ್ದು ಬೆದರಿಕೆ ಹಾಕಿದ ಯುವಕ ಬೆಂಗಳೂರಿನವನೇ ಎನ್ನುವುದು. Right wing guy ಎಂಬವರು ಮಾಡಿದ ಟ್ವೀಟ್‌ ಆಧರಿಸಿ ಅವರು ಬಲೆ ಬೀಸಿದಾಗ ನಯಾಜ್‌ ಖಾನ್‌ ಸಿಕ್ಕಿಬಿದ್ದಿದ್ದಾನೆ.

ಇದನ್ನೂ ಓದಿ: Viral Video: ಕಾಲರ್‌ ಪಟ್ಟಿ ಹಿಡಿದು ಶಿಖರ್​ ಧವನ್​ಗೆ​ ವಾರ್ನಿಂಗ್​ ನೀಡಿದ ತಂದೆ

ಈ ದೃಶ್ಯಗಳನ್ನು ಮುಂದಿಟ್ಟುಕೊಂಡು ಹುಡುಕಾಡಿದ ಬೆಂಗಳೂರು ಪೊಲೀಸರ ಕೈಗೆ ಆರೋಪಿ ನಯಾಜ್‌ ಖಾನ್‌ ಸಿಕ್ಕಿಬಿದ್ದಿದ್ದಾನೆ. ತಲಘಟ್ಟಪುರ ಪೊಲೀಸರ ಸಾಹಸದಲ್ಲಿ ಬಂಧಿತನಾ ನಯಾಜ್ ಖಾನ್ ನಗರದ ಕೋಣನಕುಂಟೆ ನಿವಾಸಿ. ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ನಯಾಜ್‌ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದ.

ಸದ್ಯದ ನಯಾಜ್ ಖಾನ್ ವಿರುದ್ಧ ಯಾವುದೇ ಹಳೆ ಪ್ರಕರಣಗಳು ಇಲ್ಲ. ಮೂಲ ವಿಡಿಯೋ ನೋಡಿ ಸಿಟ್ಟುಗೊಂಡು ಈ ರೀತಿ ಮಾಡಿದ್ದಾಗಿ ಆತ ವಿಚಾರಣೆಯ ವೇಳೆ ಹೇಳಿದ್ದಾನೆ. ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version