Site icon Vistara News

Ban on dogs : ಅಪಾಯಕಾರಿ ನಾಯಿ ತಳಿಗಳಿಗೆ ಕೇಂದ್ರನಿಷೇಧ; ಕರ್ನಾಟಕದಲ್ಲಿ ತಡೆ

Ban on Dogs pitbull terrier

ಬೆಂಗಳೂರು: ಕೇಂದ್ರ ಸರ್ಕಾರವು ಮನುಷ್ಯನ ಜೀವಕ್ಕೆ ಅಪಾಯ ಎಂದು ಪರಿಗಣಿಸಲಾದ 23 ಅಪಾಯಕಾರಿ ನಾಯಿ ತಳಿಗಳ (Dangerous Dog breeds) ಆಮದು, ಮಾರಾಟ ಮತ್ತು ಸಂತಾನೋತ್ಪತ್ತಿಗೆ ನಿಷೇಧ (Ban on dogs) ಹೇರಿತ್ತು. ಈ ಅಧಿಸೂಚನೆಗೆ ಕರ್ನಾಟಕ ಹೈಕೋರ್ಟ್ ​(Karnataka High Court) ಮಧ್ಯಂತರ ತಡೆಯಾಜ್ಞೆ ನೀಡಿದೆ. ಆದರೆ, ಇದು ಕರ್ನಾಟಕಕ್ಕೆ ಸೀಮಿತವಾದ ತಡೆಯಾಜ್ಞೆಯಾಗಿದೆ.

ತಜ್ಞರ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಸಚಿವಾಲಯವು ಮಾರ್ಚ್ 12ರಂದು ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಂದು ನಿರ್ದೇಶನವನ್ನು ನೀಡಿ 23 ನಾಯಿ ತಳಿಗಳ ನಿಷೇಧಕ್ಕೆ ಆದೇಶ ನೀಡಿತ್ತು.

1. ಪಿಟ್‌ ಬುಲ್‌ ಟೆರಿಯರ್‌(Pitbull Terrier), 2. ಟೋಸಾ ಇನು (Tosa Inu), 3. ಅಮೆರಿಕನ್‌ ಸ್ಟಾಫರ್ಡ್‌ಶೈರ್‌ ಟೆರಿಯರ್‌ (American Staffordshire Terrier), 4. ಫಿಲಾ ಬ್ರಾಸಿಲೀರೋ (Fila Brasileiro), 5. ಡೋಗೋ ಅರ್ಜೆಂಟೀನೋ (Dogo Argentino), 6. ಅಮೆರಿಕನ್‌ ಬುಲ್‌ ಡಾಗ್‌ (American Bulldog), 7. ಬೋಸ್‌ ಬೋಲ್‌ (Boesboel), 8. ಕಾನ್‌ಗಾಲ್‌ (Kangal), 9. ಸೆಂಟ್ರಲ್‌ ಏಷ್ಯನ್‌ ಶೆಫರ್ಡ್‌ ಡಾಗ್‌ (Central Asian Shepherd Dog), 10. ಕಕೇಶಿಯನ್‌ ಶೆಫರ್ಡ್‌ ಡಾಗ್‌ (Caucasian Shepherd Dog), 11. ಸೌತ್‌ ರಷ್ಯನ್‌ ಶೆಫರ್ಡ್‌ ಡಾಗ್‌ (South Russian Shepherd Dog), 12. ಟೋರ್ನ್‌ಜಾಕ್‌ ಸರ್‌ಪ್ಲ್ಯಾನಿಯಾಕ್‌ (Tornjak, Sarplaninac), 13. ಜಪಾನೀಸ್‌ ಟೋಸಾ ಎಂಡ್‌ ಅಕಿಟಾ (Japanese Tosa and Akita), 14. ಮಾಸ್ಟಿಫ್ಸ್‌ (Mastiffs), 15. ರಾಟ್‌ ವೀಲರ್‌ (Rottweiler), 16. ಟೆರಿಯರ್ಸ್‌ (Terriers), 17. ರೊಡೇಷಿಯನ್‌ ರಿಜ್‌ ಬ್ಯಾಕ್‌ (Rhodesian Ridgeback), 18. ವೂಲ್ಫ್‌ ಡಾಗ್ಸ್ (Wolf Dogs)‌, 19. ಕೆನೇರಿಯೊ (Canario), 20. ಅಕ್ಬಷ್‌ Akbash, 21. ಮಾಸ್ಕೋ ಗಾರ್ಡ್‌ Moscow Guard, 22. ಕೇನ್‌ ಕಾರ್ಸೋ (Cane Corso), 23. ಬ್ಯಾನ್‌ಡಾಗ್‌ Bandog- ಇವು ಕೇಂದ್ರದಿಂದ ನಿಷೇಧಿಸಲಾದ ತಳಿಗಳು.

Karnataka High court

ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಸುತ್ತೋಲೆಯನ್ನು ಪ್ರಶ್ನಿಸಿ ನಾಯಿ ಸಾಕಣೆದಾರ ಮತ್ತು ಕೆನ್ನೆಲ್ ಕ್ಲಬ್ ಆಫ್ ಇಂಡಿಯಾ ರಾಜ್ಯ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದವು. ಅದರ ಮೇರೆಗೆ ಹೈಕೋರ್ಟ್‌ ಮಂಗಳವಾರ ವಿಚಾರಣೆ ನಡೆಸಿ ಕರ್ನಾಟಕಕ್ಕೆ ಸೀಮಿತವಾಗಿ ಸುತ್ತೋಲೆಗೆ ತಡೆಯಾಜ್ಞೆ ನೀಡಲಾಗಿದೆ.

ಬೆಂಗಳೂರಿನ ನಿವಾಸಿಗಳಾದ ಕಿಂಗ್ ಸೊಲೊಮನ್ ಡೇವಿಡ್ ಮತ್ತು ಮರ್ಡೋನಾ ಜೋನ್ಸ್ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ವಿಚಾರಣೆ ನಡೆಸಿ ಈ ಮಧ್ಯಂತರ ಆದೇಶ ನೀಡಿದ್ದಾರೆ.

ಇದನ್ನೂ ಓದಿ: pitbull dog Attack: ನಾಲ್ಕು ವರ್ಷದ ಬಾಲಕಿ ಮೇಲೆ ದಾಳಿ ಮಾಡಿದ ಡೇಂಜರಸ್‌ ಪಿಟ್‌ಬುಲ್‌ ನಾಯಿ

Ban on dogs : ಅರ್ಜಿದಾರರ ವಾದವೇನು?

  1. ಅಪಾಯಕಾರಿ ಶ್ವಾನಗಳ ತಳಿ ನಿಷೇಧಿಸುವ ಕುರಿತಂತೆ ಸಂಬಂಧಪಟ್ಟ ಎಲ್ಲ ಪಾಲುದಾರರೊಂದಿಗೆ ಚರ್ಚಿಸಬೇಕೆಂದು ದೆಹಲಿ ಹೈಕೋರ್ಟ್​ ಹೇಳಿದೆ. ಅವುಗಳಲ್ಲಿ ಕೆನ್ನಲ್​ ಕ್ಲಬ್​ ಆಪ್​ ಇಂಡಿಯಾ ಕೂಡ ಒಂದಾಗಿದ್ದು, ಅದರ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿಲ್ಲ.
  2. ಮನುಷ್ಯನ ಜೀವಕ್ಕೆ ಅಪಾಯಕಾರಿ ಮತ್ತು ಉಗ್ರವಾಗಿ ವರ್ತಿಸುವ ತಳಿಯ ಶ್ವಾನಗಳನ್ನು ಗುರುತಿಸುವುದಕ್ಕೆ ಆಳವಾದ ಅಧ್ಯಯನದ ಅಗತ್ಯವಿದೆ.
  3. ಸುತ್ತೋಲೆಯಲ್ಲಿ ಉಲ್ಲೇಖಿಸದ ಹಲವು ತಳಿಗಳು ಕ್ರೂರ ವರ್ಗಕ್ಕೆ ಸೇರಲಿವೆ. ಅವುಗಳನ್ನು ಪರಿಗಣಿಸಿಲ್ಲ.
  4. ಕ್ರೂರ ಹಾಗೂ ಅಪಾಯಕಾರಿ ಶ್ವಾನಗಳ ತಳಿಗಳ ಸಂತಾನೋತ್ಪತ್ತಿ ನಿಷೇಧಿಸುವ ಸಲುವಾಗಿ ಅವುಗಳ ಮಾಲೀಕರು ಸಂತಾನಹರಣಕ್ಕಾಗಿ ಅಗತ್ಯವಿರುವ ಕ್ರಿಮಿನಾಶಕಗಳನ್ನು ಬಳಕೆ ಮಾಡಬೇಕು ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ 2024ರ ಮಾರ್ಚ್ 12ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಈ ರಾಸಾಯನಿಕಗಳ ಬಗ್ಗೆ ನಿಖರತೆ ಇಲ್ಲ.
karnataka High court

ಹೈಕೋರ್ಟ್‌ ತನ್ನ ಆದೇಶದಲ್ಲಿ ಹೇಳಿದ್ದೇನು?

ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸುವ ಸಂಬಂಧ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಪರಿಗಣಿಸಿರುವ ಎಲ್ಲ ಅಂಶಗಳಿರುವ ದಾಖಲೆಗಳನ್ನು ಸಲ್ಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್​ ಕೇಂದ್ರ ಸರ್ಕಾರದ ಪರ ವಕೀಲರಿಗೆ ಸೂಚಿಸಿದೆ.

Exit mobile version