Site icon Vistara News

Bangalore Airport : ಏರ್‌ ಪೋರ್ಟ್‌ನಲ್ಲಿ ಚೆಕ್ಕಿಂಗ್‌ ವೇಳೆ ಬಾಂಬ್‌ ಇದೆ ಎಂದು ಜೋಕ್‌ ಮಾಡಿದ ಭೂಪ ಅರೆಸ್ಟ್‌

Bangalore Airport Security check

ಬೆಂಗಳೂರು: ಭದ್ರತೆ, ಸುರಕ್ಷತೆ ವಿಷಯದಲ್ಲಿ (Security issue) ಜೋಕ್‌ ಮಾಡಿದರೆ ಏನಾಗುತ್ತದೆ ಎನ್ನುವುದಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bangalore Airport) ನಡೆದ ಘಟನೆ ನಿದರ್ಶನವಾಗಿದೆ. ಹುಸಿ ಬಾಂಬ್‌ ಕರೆ (Hoax Bomb threat) ಮಾಡುವವರಿಗೆ ಕೂಡಾ ಇದೊಂದು ಪಾಠವಾಗಿದೆ.

ಆಗಿದ್ದೇನು ಅಂದರೆ ಅವನು ಬೆಂಗಳೂರು ವಿಮಾನ ನಿಲ್ದಾಣದಿಂದ ಕೊಚ್ಚಿನ್‌ಗೆ ತೆರಳುತ್ತಿದ್ದ. ವಿಮಾನ ನಿಲ್ದಾಣದ ತಪಾಸಣೆ ಅಧಿಕಾರಿಗಳು ಆತನನ್ನು ಒಳಗೆ ಬಿಡುವ ಮುಂಚೆ ಚೆಕ್ಕಿಂಗ್ ನಡೆಸಲು ಮುಂದಾದರು. ಆಗ ಆತ ಬ್ಯಾಗ್‌ನಲ್ಲಿ ಬಾಂಬ್‌ ಇದೆ ಎಂದು ತಮಾಷೆ ಮಾಡಿದ್ದ. ಮುಂದೆ ಅವನಿಗೆ ಎದುರಾದದ್ದು ಬಿಗಿಯಾದ ತಪಾಸಣೆ. ಆತ ತಾನು ತಮಾಷೆಗೆ ಹೇಳಿದ್ದು ಎಂದು ಹೇಳಿದರೂ ಕೇಳಿಸಿಕೊಳ್ಳುವವರು ಯಾರೂ ಇರಲಿಲ್ಲ.!

ಈ ರೀತಿ ಸಿಕ್ಕಾಕಿಕೊಂಡ ಪ್ರಯಾಣಿಕನ ಹೆಸರು ಸಜ್ಜು ಕುಮಾರ್‌. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. ಆತ ತನ್ನ ಊರಾದ ಕೇರಳಕ್ಕೆ ಹೋಗುತ್ತಿದ್ದ. ವಿಮಾನ ನಿಲ್ದಾಣ ಪ್ರವೇಶಿಸುವಾಗ ಮಾಡುವ ತಪಾಸಣೆಯಿಂದ ಆತ ಕಿರಿಕಿರಿ ಅನುಭವಿಸಿದ್ದ. ಏನಿದೆ ಬ್ಯಾಗ್‌ನಲ್ಲಿ ಎಂದು ತಪಾಸಣೆ ಮಾಡುವ ಅಧಿಕಾರಿಗಳು ಕೇಳಿದ್ದರು. ಆಗ ಇವನು ತಮಾಷೆಗೆ ʻಬಾಂಬ್‌ ಇದೆʼ ಎಂದಿದ್ದ.

Bangalore Airport Security check1

ಬಾಂಬ್‌ ಎಂಬ ಶಬ್ದ ಕೇಳುತ್ತಿದ್ದಂತೆಯೇ ಅಲರ್ಟ್‌ ಆದ ಅಧಿಕಾರಿಗಳು ಕೂಡಲೇ ಆತನ ಬ್ಯಾಗ್‌ ಮತ್ತು ಆತನನ್ನು ಒಳಗೆ ಕರೆದುಕೊಂಡು ಹೋದರು. ತೀವ್ರ ತಪಾಸಣೆ ಮಾಡಿದ ವೇಳೆ ಬ್ಯಾಗ್‌ನಲ್ಲಿ ಬೇರೆ ಏನೂ ಪತ್ತೆಯಾಗಿರಲಿಲ್ಲ. ಅಧಿಕಾರಿಗಳ ಜತೆ ಉದ್ಧಟತನದಿಂದ ವರ್ತಿಸಿ, ತಪ್ಪು ಹಾದಿಗೆ ಎಳೆದ ಸಜ್ಜು ಕುಮಾರ್‌ನನ್ನು ಈಗ ಬಂಧಿಸಲಾಗಿದೆ. ವಿಮಾನ ನಿಲ್ದಾಣ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದೆ.‌

ಇದನ್ನೂ ಓದಿ : Bangalore Airport : ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಿಶ್ವದ ಅತಿ ಸುಂದರ ಏರ್‌ಪೋರ್ಟ್ ಗರಿ

Bangalore Airport: ಬೆಂಗಳೂರು ಏರ್‌ಪೋರ್ಟ್‌ಗೆ ಹುಸಿ ಬಾಂಬ್ ಬೆದರಿಕೆ ಕರೆ; ಬಂಧನ

ದೇವನಹಳ್ಳಿ: ಪರ್ಸ್ ಹುಡುಕಲು ಸಹಕರಿಸಲಿಲ್ಲ ಎಂದು ಪ್ರಯಾಣಿಕನೊಬ್ಬ ಏರ್‌ಪೋರ್ಟ್‌ ಕಾಲ್‌ ಸೆಂಟರ್‌ಗೆ ಹುಸಿ ಬಾಂಬ್ ಬೆದರಿಕೆ‌ ಕರೆ ಮಾಡಿ, ಜೈಲುಪಾಲಾಗಿರುವುದು ನಡೆದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿ.26ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಶ್ರೇಯಸ್ ಚಾರ್ಮಿಯಾ ಬಂಧಿತ ಆರೋಪಿ. ಈತನ ಪರ್ಸ್ ಹುಡುಕಲು ಸಿಬ್ಬಂದಿ ಸಹಕರಿಸಲಿಲ್ಲ ಎಂದು ಕೋಪಗೊಂಡು ವಿಮಾನಯಾನ ಕಂಪನಿಯ ಕಾಲ್ ಸೆಂಟರ್‌ಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದಾನೆ. ಇದರಿಂದ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ನಂತರ SG 8536 ವಿಮಾನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ಸ್ಪೈಸ್ ಜೆಟ್ ವಿಮಾನದಲ್ಲಿ ಬಂದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಏರ್‌ಪೋರ್ಟ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version