Site icon Vistara News

Bangalore Bandh : ಬೆಂಗಳೂರಿನ ಈ ಭಾಗದಲ್ಲಿ ಪ್ರತಿಭಟನೆ ಜೋರು, ಆ ಕಡೆ ಹೋಗುವಾಗ ಹುಷಾರು

Cauvery protest in Bangalore

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ (Cauvery Water Dispute) ಮಾಡುತ್ತಿರುವುದನ್ನು ಪ್ರತಿಭಟಿಸಿ ಜಲ ಸಂರಕ್ಷಣಾ ಸಮಿತಿ ಕರೆ ನೀಡಿರುವ ಬೆಂಗಳೂರು ಬಂದ್‌ (bangalore bandh) ಕಾವೇರುತ್ತಿದೆ. ಯಾವ ಕಾರಣಕ್ಕೂ ಬಲವಂತದ ಬಂದ್‌ಗೆ ಅವಕಾಶವಿಲ್ಲ ಎಂದು ಪೊಲೀಸರು ಸ್ಪಷ್ಟವಾಗಿ ಹೇಳಿರುವುದರಿಂದ ಕೆಲವು ಕಡೆಗಳಲ್ಲಿ ವ್ಯಾಪಾರ ವಹಿವಾಟುಗಳು (Business as usual) ಎಂದಿನಂತೆ ನಡೆಯುತ್ತಿವೆ. ಆದರೆ, ಪ್ರಮುಖ ಸ್ಥಳಗಳಾದ ಮೆಜೆಸ್ಟಿಕ್‌ (Majestic Bus stand), ಕೆ.ಆರ್.‌ ಮಾರ್ಕೆಟ್‌ನಲ್ಲಿ (KR Market) ಜನ ಸಂಚಾರ ಬಹುತೇಕ ಸ್ತಬ್ಧವಾಗಿದೆ. ಈ ನಡುವೆ ಪೊಲೀಸರು ಬಂದ್‌ಗೆ ಕರೆ ನೀಡಿದ ಮುಖಂಡರಲ್ಲಿ ಒಬ್ಬರಾದ ರೈತ ಮುಖಂಡ ಕುರುಬೂರು ಶಾಂತ ಕುಮಾರ್‌ (Kuruburu Shanthakumar) ಅವರನ್ನು ಬಂಧಿಸಿದ್ದಾರೆ.

ರಾಜಧಾನಿಯ ಹಲವು ಕಡೆಗಳಲ್ಲಿ ಇಂದು ಪ್ರತಿಭಟನೆ ತೀವ್ರಗೊಳ್ಳುವ ಸಾಧ್ಯತೆ ಇದೆ. ಅಂದರೆ ಆ ಭಾಗದಲ್ಲಿ ಸಂಘಟನೆಗಳು ಪ್ರತಿಭಟನೆಯನ್ನು ಹಮ್ಮಿಕೊಂಡಿವೆ. ಹೀಗಾಗಿ ಆ ಭಾಗಕ್ಕೆ ಹೋಗದಿದ್ದರೆ ಒಳ್ಳೆಯದು. ಹೋಗಲೇಬೇಕು ಎಂದಾದರೆ ಸೂಕ್ತ ವ್ಯವಸ್ಥೆ ಮಾಡಿಕೊಂಡು ಹೋಗಬಹುದು. ಪ್ರತಿಭಟನೆ ಮುಗಿದ ನಂತರ ಹೋಗಬಹುದು.

ಅಲ್ಲಲ್ಲಿ ಪ್ರತಿಭಟನೆಗಳನ್ನು ಆಯೋಜಿಸಿರುವ ಸಂಘಟನೆಗಳು ಸ್ವಲ್ಪ ಹೊತ್ತು ಆ ಭಾಗದಲ್ಲಿ ಮೆರವಣಿಗೆ ನಡೆಸುವ ಸಾಧ್ಯತೆ ಇರುತ್ತದೆ. ರಸ್ತೆಗಳು ಬಂದ್‌ ಆಗುತ್ತದೆ. ಸೋ ಹುಷಾರಾಗಿ ಓಡಾಡಿ ಎನ್ನುವುದಕ್ಕಾಗಿ ಪ್ರತಿಭಟನೆಯ ಪೂರ್ಣ ಮಾಹಿತಿ ಇಲ್ಲಿ ನೀಡುತ್ತಿದ್ದೇವೆ.

ಯಾವ ಸಂಘಟನೆಗಳ ಪ್ರತಿಭಟನೆ ಎಲ್ಲಿ? ಏನೇನು ಕಾರ್ಯಕ್ರಮ?

ಇದನ್ನೂ ಓದಿ: Bangalore Bandh : ಮೈಸೂರು ಬ್ಯಾಂಕ್‌ ಸರ್ಕಲ್‌ನಲ್ಲಿ ಪ್ರತಿಭಟನೆ: ಕುರುಬೂರು ಶಾಂತ ಕುಮಾರ್‌ ಪೊಲೀಸ್‌ ವಶಕ್ಕೆ

ಮೆರವಣಿಗೆಗೆ ಅವಕಾಶವಿಲ್ಲ, ಫ್ರೀಡಂಪಾರ್ಕ್​ನಲ್ಲಿ ಮಾತ್ರ ಪ್ರತಿಭಟನೆ

ಹೋರಾಟಗಾರರು ಈ ಹಿಂದೆ ಮೈಸೂರು ಬ್ಯಾಂಕ್‌ನಿಂದ ಟೌನ್‌ ಹಾಲ್‌, ಅಲ್ಲಿಂದ ಫ್ರೀಡಂ ಪಾರ್ಕ್‌ಗೆ ಮೆರವಣಿಗೆ ನಡೆಸಲು ಪ್ಲ್ಯಾನ್‌ ಮಾಡಿದ್ದರು. ಆದರೆ, ಪೊಲೀಸರು ಯಾವ ಮೆರವಣಿಗೆಗೂ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಪ್ರತಿಭಟನೆ ಫ್ರೀಡಂ ಪಾರ್ಕ್‌ಗೆ ಸೀಮಿತವಾಗಲಿದೆ.

Exit mobile version