ಬೆಂಗಳೂರು: ಕಾವೇರಿ ನೀರು ಬಿಡುಗಡೆ ವಿರುದ್ಧ (Cauvery Dispute) ಜಲ ಸಂರಕ್ಷಣಾ ಸಮಿತಿ (Jala samrakshana Samiti) ಕರೆ ನೀಡಿರುವ ಬೆಂಗಳೂರು ಬಂದ್ (Bangalore Bandh) ಬಹುತೇಕ ಯಶಸ್ವಿಯಾಗಿದೆ. ಇದು ವಿಮಾನ, ಮೆಟ್ರೋ ಮತ್ತು ಬಿಎಂಟಿಸಿ ಬಸ್ ಸಂಚಾರದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. 13 ವಿಮಾನಗಳ ಸಂಚಾರ ಕ್ಯಾನ್ಸಲ್ (13 flights Cancelled) ಆಗಿದೆ, ಮೆಟ್ರೋ ರೈಲುಗಳು ಖಾಲಿ ಓಡುತ್ತಿವೆ (metro trains are empty), ಬಿಎಂಟಿಸಿ ಬಸ್‌ಗಳು ಖಾಲಿ ಹೊಡೆಯುತ್ತಿವೆ (No passengers for BMTC Buses)
ತುಂಬಿ ತುಳುಕುತ್ತಿದ್ದ ಮೆಟ್ರೋ ರೈಲು ಖಾಲಿ
ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಎಂದಿನಂತೇ ಇದೆ. ಎರಡು ರೈಲುಗಳ ಓಡಾಟದ ಅಂತರದಲ್ಲಿ ಸ್ವಲ್ಪ ವ್ಯತ್ಯಾಸ ಮಾಡಲಾಗಿದೆ. ಆದರೆ, ಮೆಟ್ರೋ ರೈಲಿನಲ್ಲಿ ಓಡಾಡುವವರೇ ಇಲ್ಲವಾಗಿದೆ.
ಬೆಳಗ್ಗಿನ ಸ್ವಲ್ಪ ಹೊತ್ತು ಮೆಟ್ರೋ ರೈಲಿನಲ್ಲಿ ಜನ ಸಂಚಾರ ಕಂಡುಬಂತು. ಅಂದರೆ ಆ ಹೊತ್ತಿಗೆ ಬಿಎಂಟಿಸಿ ಬಸ್‌ಗಳ ಓಡಾಟ ಕಡಿಮೆ ಇತ್ತು, ಇದ್ದರೂ ಜನ ಹೋಗುತ್ತಿರಲಿಲ್ಲ. ಯಾಕೆಂದರೆ ಮಾರ್ಗ ಮಧ್ಯದಲ್ಲಿ ಯಾರಾದರೂ ತಡೆದು ನಿಲ್ಲಿಸಿದರೆ ಭಯದಿಂದ ಜನರು ಹೋಗುತ್ತಿರಲಿಲ್ಲ. ಹೊರ ಜಿಲ್ಲೆಗಳಿಂದ ಬಸ್ ಮತ್ತು ರೈಲುಗಳಲ್ಲಿ ಬಂದವರು ಮೆಟ್ರೋ ರೈಲನ್ನೇ ಆಶ್ರಯಿಸಿದಂತೆ ಕಂಡಿತು.
ಆದರೆ ಒಂಬತ್ತು ಗಂಟೆಯ ನಂತರ ಮೆಟ್ರೋ ಪ್ರಯಾಣಿಕರ ಸಂಖ್ಯೆ ವಿರಳವಾಯಿತು. 11 ಗಂಟೆಯ ನಂತರ ಅದು ಇನ್ನಷ್ಟು ಕಡಿಮೆಯಾಯಿತು. ಹೆಚ್ಚಿನವರು ಮೊದಲೇ ಬಂದ್‌ಗೆ ಫಿಕ್ಸ್ ಆಗಿದ್ದರಿಂದ ಮನೆಯಿಂದ ಹೊರಗೆ ಬಿದ್ದಿಲ್ಲ ಎಂಬಂತೆ ಕಾಣುತ್ತಿದೆ. ಇನ್ನು ನೆಂಟರ ಮನೆಗೆ, ಖರೀದಿಗೆ ಹೋಗುವವರೆಲ್ಲ ಇವತ್ತು ಹೊರಟಿಲ್ಲ. ಹೀಗಾಗಿ ಮೆಟ್ರೋ ಸಂಚಾರವಿದ್ದರೂ ಜನರು ಅಷ್ಟಾಗಿ ಕಾಣಿಸುತ್ತಿಲ್ಲ.
ಹಾಗಾಗಿ ಪ್ರತಿ ದಿನ ಪ್ರಯಾಣಿಕರಿಂದ ತುಂಬಿರುತ್ತಿದ್ದ ಮೆಟ್ರೋ ಮಂಗಳವಾರ ಬಹುಪಾಲು ಖಾಲಿಯಾಗಿ ಸಂಚರಿಸುತ್ತಿದೆ.
ಬಿಎಂಟಿಸಿ ಬಸ್‌ಗಳಿದ್ದರೂ ಪ್ರಯಾಣಿಕರಿಲ್ಲ
ಬೆಂಗಳೂರಿನ ಜೀವನಾಡಿಯಾಗಿರುವ ಬಿಎಂಟಿಸಿ ಬಸ್‌ಗಳ ಓಡಾಟಕ್ಕೆ ಹೆಚ್ಚಿನ ತೊಂದರೆಯಾಗಿಲ್ಲ. ಆದರೆ, ಪ್ರಯಾಣಿಕರ ಸಂಖ್ಯೆಯೇ ವಿರಳವಾಗಿದೆ.
ಸದಾ ಗಿಜಿಗುಡುವ ಬಸ್ ನಿಲ್ದಾಣಗಳು ಇಂದು ಬಿಕೋ ಎನ್ನುತ್ತಿವೆ. ಹಿಂದೆಲ್ಲ ಬಸ್ ಬಂದಾಗ ಜನರು ಓಡಿ ಬರುತ್ತಿದ್ದರೆ ಈಗ ಜನರೇ ಇಲ್ಲದೆ ಬಸ್‌ಗಳು ಖಾಲಿಯಾಗಿ ನಿಲ್ಲುತ್ತಿವೆ. ಎಂದಿನಂತೆ ಬಿಎಂಟಿಸಿ ಬಸ್ಸುಗಳು ಸಂಚಾರ ಇದ್ದರೂ ಪ್ರಯಾಣಿಕರು ಬರುತ್ತಿಲ್ಲ.
ಪ್ರಯಾಣಿಕರಿಲ್ಲದೆ ಬಣಗುಡುತ್ತಿರುವ ಯಶವಂತಪುರ ಟಿಟಿಎಂಸಿ ಬಸ್ ನಿಲ್ದಾಣ ಒಟ್ಟಾರೆ ಬಿಎಂಟಿಸಿ ಓಡಾಟದ ಚಿತ್ರಣವನ್ನು ನೀಡುತ್ತಿದೆ. ಇಲ್ಲಿ ಬಿಎಂಟಿಸಿ ಬಸ್ಸುಗಳು ಖಾಲಿ ಖಾಲಿಯಾಗಿ ಸಂಚರಿಸುತ್ತಿವೆ.
ನಿಜವೆಂದರೆ ಬಿಎಂಟಿಸಿ ನೌಕರರ ಸಂಘಟನೆ ಬಂದ್‌ಗೆ ಬೆಂಬಲ ನೀಡಿದ್ದರೂ ನಿಗಮದ ಸೂಚನೆಯ ಮೇರೆಗೆ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕೆ ಹಾಜಗಾರಿ ಬಸ್ ಓಡಿಸುತ್ತಿದ್ದಾರೆ. ಆದರೆ, ಜನರಿಲ್ಲದೆ ಖಾಲಿ ಓಡಿಸಬೇಕಾಗಿದೆ. ಹಾಗಂತ ತುರ್ತು ಪ್ರಯಾಣದ ಅವಶ್ಯಕತೆ ಇರುವವರಿಗೆ ಇದು ಅನುಕೂಲವಾಗಿದೆ. ಸಂಜೆಯ ಹೊತ್ತು ಪ್ರಯಾಣಿಕರು ಬರುವ ನಿರೀಕ್ಷೆಯಲ್ಲಿದ್ದಾರೆ.
ಬೆಂಗಳೂರಿಗೆ ಬರಬೇಕಿದ್ದ 13 ವಿಮಾನಗಳ ಸಂಚಾರ ಕ್ಯಾನ್ಸಲ್
ಬಂದ್‌ಗೆ ಸಂಬಂಧಿಸಿದ ಮಹತ್ವದ ಬೆಳವಣಿಗೆಯಲ್ಲಿ ಬೆಂಗಳೂರಿಗೆ ಬರಬೇಕಾಗಿದ್ದ ಸುಮಾರು 13 ವಿಮಾನಗಳ ಸಂಚಾರವೇ ಕ್ಯಾನ್ಸಲ್ ಆಗಿರುವುದು ಬೆಳಕಿಗೆ ಬಂದಿದೆ.
ಕೊಚ್ಚಿ,, ದೆಹಲಿ, ಮುಂಬೈ ಮತ್ತು ಮಂಗಳೂರಿನಿಂದ ಬರಬೇಕಾಗಿದ್ದ ವಿಮಾನಗಳು ಪ್ರಯಾಣಿಕರಿಂದ ಸಂಚಾರವನ್ನೇ ರದ್ದುಪಡಿಸಿದ್ದವು. ಹೀಗಾಗಿ ದೇವನಹಳ್ಳಿಗೆ ಬೆಳಗ್ಗೆ ಬರಬೇಕಾಗಿದ್ದ 13 ವಿಮಾನಗಳು ಕ್ಯಾನ್ಸಲ್ ಆಗಿವೆ.
ಬೆಂಗಳೂರಿಗೆ ಬರಬೇಕಾಗಿದ್ದ ಪ್ರಯಾಣಿಕರು ಕೊನೆಯ ಕ್ಷಣದಲ್ಲಿ ಬಂದ್‌ನಿಂದಾಗಿ ತಮ್ಮ ಪ್ರಯಾಣವನ್ನು ರದ್ದುಪಡಿಸಿದ್ದರು. ಹೀಗಾಗಿ ವಿಮಾನ ಸಂಚಾರವನ್ನೇ ರದ್ದು ಮಾಡಬೇಕಾಗಿ ಬಂದಿದೆ.
ಇದನ್ನೂ ಓದಿ: Bangalore Bandh : ಪ್ರತಿಭಟನಾಕಾರರ ಬಂಧನಕ್ಕೆ ಎಚ್‌ಡಿಕೆ ಕೆಂಡಾಮಂಡಲ; ಇದು ಸ್ಟಾಲಿನ್‌ನ ಬಾಡಿಗೆ ಸರ್ಕಾರವೇ?
ಏರ್‌ಪೋರ್ಟ್ ಟ್ಯಾಕ್ಸಿಗಳಿವೆ, ಆದರೆ, ಪ್ರಯಾಣಿಕರಿಲ್ಲ
ಬಂದ್‌ಗೆ ಏರ್‌ಪೋರ್ಟ್ ಟ್ಯಾಕ್ಸಿ ಸಂಘಟನೆ ಬೆಂಬಲ ನೀಡಿಲ್ಲ. ಹೀಗಾಗಿ ಏರ್‌ಪೋರ್ಟ್ ಟ್ಯಾಕ್ಸಿಗಳು ಕೆಲಸ ಮಾಡುತ್ತಿವೆ. ಆದರೆ, ಪ್ರಯಾಣಿಕರೇ ಇಲ್ಲದೆ ಅವರು ಖಾಲಿ ಕುಳಿತುಕೊಳ್ಳುವಂತಾಗಿವೆ. ವಿಮಾನ ನಿಲ್ದಾಣದಲ್ಲಿ ಏರ್‌ಪೋರ್ಟ್ ಟ್ಯಾಕ್ಸಿಗಳು ಸಾಲಾಗಿ ನಿಂತಿರುವ ದೃಶ್ಯ ಕಂಡುಬಂತು.