Site icon Vistara News

Bangalore Bandh : ಬಲವಂತದಿಂದ ಬಂದ್‌ ಮಾಡಿಸುವಂತಿಲ್ಲ; ಮೆರವಣಿಗೆಗೆ ಅವಕಾಶವಿಲ್ಲ, ಸೆಕ್ಷನ್‌ ಜಾರಿ ಎಂದ ಕಮಿಷನರ್‌

Bangalore police

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಪ್ರತಿಭಟಿಸಿ (Cauvery Water Dispute) ಜಲ ಸಂರಕ್ಷಣಾ ಸಮಿತಿ ಕರೆ ನೀಡಿರುವ ಸೆ. 26ರ ಬೆಂಗಳೂರು ಬಂದ್‌ (Bangalore Bandh) ಸಂದರ್ಭದಲ್ಲಿ ಬಲವಂತವಾಗಿ ಬಂದ್‌ ಮಾಡಿಸುವಂತಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ ದಯಾನಂದ್ (Police Commissioner B Dayanand) ತಿಳಿಸಿದ್ದಾರೆ.

ಬಂದ್‌ ವಿಚಾರದಲ್ಲಿ ಸಂಘಟಕರು ಮತ್ತು ಸಾರ್ವಜನಿಕರಿಗೆ ಸ್ಪಷ್ಟತೆ ನೀಡಲು ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಅವರು ವಿಷಯವನ್ನು ಸ್ಪಷ್ಟಪಡಿಸಿದರು. ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಮೆರವಣಿಗೆ (No permission for Procession) ನಡೆಸುವ ಸಂಘಟಕರ ಮನವಿಯನ್ನು ಅವರು ತಿರಸ್ಕರಿಸಿದರು. ಯಾವುದೇ ಪ್ರತಿಭಟನೆ ಮತ್ತು ಮೆರವಣಿಗೆಗೆ ಅವಕಾಶವಿಲ್ಲ ಎಂದು ತಿಳಿಸಿದರು.

ಬಲವಂತದಿಂದ ಯಾರೂ ಬಂದ್‌ ಮಾಡಿಸುವಂತಿಲ್ಲ. ಯಾವುದೇ ರೀತಿಯ ಬಂದ್‌ಗೆ ಅವಕಾಶವಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಹೀಗಾಗಿ ಜನರು ಸ್ವಯಂಪ್ರೇರಿತವಾಗಿ ಪಾಲ್ಗೊಂಡರೆ ಆಕ್ಷೇಪ ಇಲ್ಲ. ಹಾಗಂತ ಯಾರನ್ನೂ ತಡೆಯುವುದು, ಅಂಗಡಿಗಳನ್ನು ಮುಚ್ಚಿಸುವುದು ಮೊದಲಾದ ಕೆಲಸಗಳನ್ನು ಮಾಡುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಬಂದ್‌ ವೇಳೆ ಯಾವುದಾದರೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಅದಕ್ಕೆ ಬಂದ್‌ಗೆ ಕರೆ ನೀಡಿದ ಸಂಘಟನೆಗಳೇ ಹೊಣೆಯಾಗುತ್ತವೆ ಎಂದು ಎಚ್ಚರಿಸಿದರು.

ಹೆಚ್ಚುವರಿ ಭದ್ರತಾ ವ್ಯವಸ್ಥೆ

ಬಂದ್‌ ಹೆಸರಿನಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಬಾರದು ಎಂದು ಹೈಕೋರ್ಟ್‌ ಹೇಳಿದೆ. ಸರ್ಕಾರ ಜನರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದೇವೆ ಎಂದು ಹೇಳಿದ ದಯಾನಂದ್‌, ಪ್ರತಿಭಟನೆ ವೇಳೆ ಆಹಿತಕರ ಘಟನೆ ನಡೆಯಬಾರದು ಎಂಬ ಕಾರಣಕ್ಕಾಗಿ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸೋಮವಾರ ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿ

ಪ್ರತಿಭಟನೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಒತ್ತಾಯ ಪೂರಕವಾಗಿ ಬಂದ್ ಮಾಡಿದರೆ ಅಂತವರು ವಿರುದ್ಧ ಸೂಕ್ತವಾದ ಕ್ರಮ ಕೈಗೊಳ್ಳಲಾಗುವುದು. ಸೋಮವಾರ ಮಧ್ಯ ರಾತ್ರಿಯಿಂದ ಮಂಗಳವಾರ ಮಧ್ಯರಾತ್ರಿಯವರಿಗೆ ಐಪಿಸಿ ಸೆಕ್ಷನ್‌ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಬಿಗಿ ಪೊಲೀಸ್‌ ಬಂದೋಬಸ್ತ್‌

ಬೆಂಗಳೂರಲ್ಲಿ ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. 60 ಕೆಎಸ್‌ಆರ್‌ಪಿ ಮತ್ತು 40 ಸಿಎಆರ್ ತುಕಡಿ ನಿಯೋಜನೆ ಮಾಡಿದ್ದೇವೆ. ಹೋಂ ಗಾರ್ಡ್ ಸಿಬ್ಬಂದಿಗಳೂ ಇರುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ: Bangalore Bandh : ನಾಯಕರ ಪ್ರತಿಷ್ಠೆಯಿಂದ ಬೆಂಗಳೂರಿಗೆ ಡಬಲ್‌ ಬಂದ್‌ ಬಿಸಿ, ಬೇಕಿತ್ತಾ ಎರಡೆರಡು ಬಂದ್‌?

ಕಮಿಷನರ್‌ ಹೇಳಿದ ಪ್ರಮುಖ ಅಂಶಗಳು

  1. ಬಲವಂತದ ಬಂದ್‌ಗೆ ಅವಕಾಶವಿಲ್ಲ. ಅಂಗಡಿಗಳನ್ನು ಮುಚ್ಚಿಸುವಂತಿಲ್ಲ. ಜನರ ಸಂಚಾರವನ್ನು ತಡೆಯುವಂತಿಲ್ಲ ಬೆ
  2. ಬೆಂಗಳೂರಿನಲ್ಲಿ ಸೋಮವಾರ ರಾತ್ರಿ 12ರಿಂದಲೇ ನಿಷೇಧಾಜ್ಞೆ ಜಾರಿ, ಪೊಲೀಸ್ ಬಿಗಿ ಬಂದೋಬಸ್ತ್
  3. ಸಂಘಟಕರು ಬೆಂಗಳೂರು ಪುರಭವನದಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನೆ ಮಾಡಲು ಅನುಮತಿ ಕೊರಿದ್ದಾರೆ. ಆದರೆ, ಬಹಿರಂಗ ಮೆರವಣಿಗೆಗೆ ಪ್ರತಿಭಟನೆಗೆ, ಅನುಮತಿ ಕೊಡಲು ಸಾಧ್ಯವಿಲ್ಲ
  4. ನಾಳೆಯ‌ ವಾತಾವರಣ ನೋಡಿಕೊಂಡು ಅವಶ್ಯಕತೆ ಇದ್ದರೆ ಸಾರಿಗೆ ಬಸ್ಸುಗಳಿಗೆ ಭದ್ರತೆ ಕೊಡುತ್ತೇವೆ.
  5. ಅಗತ್ಯವಿದ್ದಲ್ಲಿ ತಮಿಳುನಾಡು ಸಾರಿಗೆ ಬಸ್ ಗಳಿಗೆ ಭದ್ರತೆಯನ್ನು ಒದಗಿಸುತ್ತೇವೆ
  6. ಹಿಂದೆ ಪ್ರತಿಭಟನೆ, ಬಂದ್‌ ನಡೆದಾಗ ಎಲ್ಲೆಲ್ಲಿ ಅವಘಡ ನಡೆದಿತ್ತೋ ಅಲ್ಲಿ ಹೆಚ್ಚಿನ ಭದ್ರತೆ ನೀಡಲಿದ್ದೇವೆ.
  7. ಪ್ರತಿಭಟನೆ ವೇಳೆ ಯಾವುದಾದರೂ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಯಾದ್ರೆ, ಪ್ರತಿಭಟನೆ ಸಂಘಟನೆಗಳು ಅಥವಾ ಹೋರಾಟಗಾರರೇ ಅದನ್ನು ಭರಿಸಬೇಕಾಗುತ್ತದೆ.
Exit mobile version