Site icon Vistara News

Bangalore gang war | ಬಾರ್‌ನಲ್ಲಿ ಲಾಂಗ್‌ ಬೀಸಿ ಪುಡಿ ರೌಡಿಗಳ ಅಟ್ಟಹಾಸ, ಇನ್ನೂ ಹಿಡಿಯದ ಪೊಲೀಸರು

bangalore gang war

ಬೆಂಗಳೂರು: ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮಿತಿ ಮೀರಿದೆ ಎಂಬುದಕ್ಕೆ ಈ ಸಿಸಿ ಕ್ಯಾಮರಾ ಫೂಟೇಜ್‌ ಸಾಕ್ಷಿ ಒದಗಿಸಿದೆ. ಬಾರ್‌ನಲ್ಲಿ ಎರಡು ರೌಡಿ ಗ್ಯಾಂಗ್‌ಗಳು ಲಾಂಗ್‌ ಹಾಗೂ ಬಿಯರ್‌ ಬಾಟಲಿ ಹಿಡಿದು ಹೊಡೆದಾಡಿಕೊಂಡಿವೆ. ಪೊಲೀಸರು ಇನ್ನೂ ರೌಡಿಗಳ ಶೋಧದಲ್ಲಿದ್ದಾರೆ.

ಬೆಂಗಳೂರಿನ ಲಗ್ಗೆರೆಯ ಸನ್‌ರೈಸ್ ಬಾರ್‌ನಲ್ಲಿ ಲಾಂಗ್ ಹಾಗು ಬಿಯರ್ ಬಾಟಲಿಗಳ ಕಾಳಗ ನಡೆದಿದೆ. ಬಾರ್ ಒಳಗೆ ಬಂದ ರೌಡಿಗಳ ಗ್ಯಾಂಗ್ ಚೀಲದಿಂದ ಲಾಂಗ್ ಹೊರಗೆ ತೆಗೆದು, ಕುಡಿಯುತ್ತಾ ಕುಳಿತಿದ್ದ ರೌಡಿ ಶೀಟರ್ ಐಕಾನ್ ರಾಜು ಎಂಬಾತನ ಮೇಲೆ ಅಟ್ಯಾಕ್ ಮಾಡಿದೆ. ಅಟ್ಯಾಕ್ ಮಾಡಲು ಬಂದ ಗ್ಯಾಂಗ್ ಮೇಲೆ ರಾಜು ಮತ್ತು ಸ್ನೇಹಿತನಿಂದ ಪ್ರತಿದಾಳಿ ನಡೆದಿದೆ. ಬಿಯರ್ ಬಾಟಲ್‌ನಿಂದ ಹೊಡೆದು ದಾಳಿಗೆ ಬಂದವರನ್ನು ರಾಜು ಗ್ಯಾಂಗ್ ಓಡಿಸಿದೆ. ಇಷ್ಟೂ ದೃಶ್ಯಗಳು ಬಾರಿನ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ದಾಳಿಗೆ ಕ್ರಿಕೆಟ್ ಬೆಟ್ಟಿಂಗ್ ದಂಧೆ ಕಾರಣ ಎನ್ನಲಾಗುತ್ತಿದೆ. ಬೆಟ್ಟಿಂಗ್ ನಡೆಸುವ ಅರುಣ್ ಎಂಬಾತನನ್ನು ಹುಡುಕಿಕೊಂಡು ಬಂದಿತ್ತು. ಅರುಣ್ ಸಿಗದ ಹಿನ್ನೆಲೆಯಲ್ಲಿ ಅರುಣ್ ತಮ್ಮ ಐಕಾನ್ ರಾಜು ಮೇಲೆ ಅಟ್ಯಾಕ್ ನಡೆದಿತ್ತು. ಹೀಗೆ ರಾಜಾರೋಷವಾಗಿ ಮಚ್ಚು ಹಿಡಿದುಕೊಂಡು ನಗರದಲ್ಲಿ ಭಯಭೀತಿ ಉಂಟು ಮಾಡುತ್ತಿರುವ ಗ್ಯಾಂಗ್‌ನ ತಲಾಶೆಯಲ್ಲಿ ರಾಜಗೋಪಾಲನಗರ ಪೊಲೀಸರಿದ್ದಾರೆ.

ಇದನ್ನೂ ಓದಿ | ಖತರ್ನಾಕ್‌ ರೌಡಿಗಳ ಹೆಡೆಮುರಿ ಕಟ್ಟಿದ ಖಾಕಿ: ಹಲವು ವರ್ಷಗಳ ಗ್ಯಾಂಗ್‌ ವಾರ್‌ಗೆ ಬ್ರೇಕ್

Exit mobile version