Site icon Vistara News

Bangalore rain : ಮನೆ ಮುಂದೆ ವಾಕ್‌ ಮಾಡುತ್ತಿದ್ದಾಗ ಉರುಳಿದ ಮರ; ತಾಯಿ ಮೃತ್ಯು, 5 ವರ್ಷದ ಮಗು ಗಂಭೀರ

Tree falls and kills woman, daughter survived

ಬೆಂಗಳೂರು: ಬೆಂಗಳೂರಿನಲ್ಲಿ ಸೋಮವಾರ ಸಂಜೆ ಸುರಿದ ಮಳೆಗೆ (Bangalore rain) ಮರವೊಂದು ಧರೆಗುರುಳಿ (Tree Falls on mother and daughter) ವಾಕ್‌ ಮಾಡುತ್ತಿದ್ದ ತಾಯಿ ಮತ್ತು ಮಗುವನ್ನು ಗಾಯಗೊಳಿಸಿದೆ. ತಾಯಿ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟರೆ (Mothrer dead at Hospital), ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ವಿಲ್ಸನ್ ಗಾರ್ಡನ್ 7 ಕ್ರಾಸ್ ನಲ್ಲಿ ಸಂಜೆ ವೇಳೆ ಈ ದುರ್ಘಟನೆ ಸಂಭವಿಸಿದೆ. ಮೃತಪಟ್ಟವರನ್ನು ವಿಲ್ಸನ್‌ ಗಾರ್ಡನ್‌ (Wilson garden) ನಿವಾಸಿ ಹೇಮಾವತಿ (35) ಎಂದು ಗುರುತಿಸಲಾಗಿದೆ. ಅವರ ಪುಟ್ಟ ಕಂದಮ್ಮ ಐದು ವರ್ಷದ ರಚಿತಾ ಗಂಭೀರವಾಗಿ ಗಾಯಗೊಂಡಿದ್ದಾಳೆ.

ಹೇಮಾವತಿ ಮತ್ತು ಮಗಳು ರಚಿತಾ ಸಂಜೆಯ ಹೊತ್ತು ಮನೆಯ ಮುಂದೆ ಪುಟ್ ಪಾತ್ ಮೇಲೆ ತಾಯಿ ಮಗಳು ವಾಕ್ ಮಾಡುತ್ತಿದ್ದಾಗ ಬೃಹತ್ ಮರ ಉರುಳಿದೆ. ಒಂದು ಕಡೆ ಮರದ ಕೊಂಬೆ ಇನ್ನೊಂದು ಕಡೆ ವಿದ್ಯುತ್‌ ಕಂಬವೂ ಅವರ ಮೇಲೆ ಬಿದ್ದಿದೆ.

ಕೂಡಲೇ ಹೇಮಾವತಿ ಅವರನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ಒಯ್ಯಲಾಯಿತು. ರಚಿತಾಗೆ ತಲೆಗೆ ಗಾಯವಾಗಿದ್ದು ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತು.

ಈ ನಡುವೆ, ಚಿಕಿತ್ಸೆ ಫಲಕಾರಿಯಾಗದೇ ತಾಯಿ ಹೇಮಾವತಿ ನಿಧನರಾಗಿದ್ದಾರೆ. ಅವರು ಸಂಜಯಗಾಂಧಿ ಆಸ್ಪತ್ರೆಯಲ್ಲಿ‌ ಕೊನೆಯುಸಿರೆಳೆದರು. ಬೆಳಗ್ಗೆ ಮರಣೋತ್ತರ ಪರೀಕ್ಷೆ ನಂತರ ಮೃತದೇಹ ಕುಟುಂಬಕ್ಕೆ ಹಸ್ತಾಂತರ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರ ಸಾವು

ರಾಮನಗರ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ದೇವರಹೊಸಹಳ್ಳಿ ಬಳಿ ಭೀಕರ ಅಪಘಾತ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು ಮಹಿಳೆಯರಾಗಿದ್ದು, ಮೃತರಾದವರ ಗುರುತು ಪತ್ತೆಯಾಗಿಲ್ಲ.

ಮೈಸೂರು ಕಡೆಗೆ ಹೋಗುತ್ತಿದ್ದ ಫಾರ್ಚುನರ್‌ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಬೆಂಗಳೂರು ಕಡೆಗೆ ಬರುವ ರಸ್ತೆಗೆ ನುಗ್ಗಿ ಸ್ಯಾಂಟ್ರೋ ಕಾರು ಮತ್ತು ಇತರ ಮೂರು ವಾಹನಗಳಿಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಸ್ಯಾಂಟ್ರೋ ಚಲಾಯಿಸುತ್ತಿದ್ದ ವ್ಯಕ್ತಿ ಮತ್ತು ಅವರ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಮಹಿಳೆಗೂ ಗಂಭೀರ ಗಾಯಗಳಾಗಿದ್ದು ಅವರು ಆಸ್ಪತ್ರೆಗೆ ಸಾಗಿಸುವ ಪ್ರಾಣ ಕಳೆದುಕೊಂಡರು.

ಸಂಜೆ ಸುಮಾರು 5.30ರ ಹೊತ್ತಿಗೆ ಅಪಘಾತ ಸಂಭವಿಸಿದ್ದು, ಮೃತರು ಹಾಸನ ಮೂಲದವರೆಂದು ಹೇಳಲಾಗುತ್ತಿದೆ. ಎರಡೂ ಕಾರುಗಳ ಮುಂಭಾಗ ನಜ್ಜುಗುಜ್ಜಾಗಿದೆ. ಇತರ ವಾಹನಗಳಿಗೂ ಹಾನಿಯಾಗಿದೆ.

ಅಪಘಾತದಿಂದಾಗಿ ಹೆದ್ದಾರಿಯಲ್ಲಿ ತುಂಬಾ ಹೊತ್ತು ಟ್ರಾಫಿಕ್‌ ಜಾಮ್‌ ಆಗಿತ್ತು.

Exit mobile version