Site icon Vistara News

ಪ್ರತಿವಾರ 3,000 ರಸ್ತೆ ಗುಂಡಿ ಪ್ರತ್ಯಕ್ಷ: ಅಧಿಕಾರಿಗಳ ತಪ್ಪು ಮಾಹಿತಿ ಎಂದ ಬಿಬಿಎಂಪಿ

ರಸ್ತೆ ಗುಂಡಿ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವುದೇ ಪಾಳಿಕೆಗೆ ದೊಡ್ಡ ಸಮಸ್ಯೆಯಾಗಿದ್ದು, ಪ್ರತಿ ವಾರ ಮೂರು ಸಾವಿರ ಗುಂಡಿಗಳು ಪ್ರತ್ಯಕ್ಷವಾಗುತ್ತಲೇ ಇವೆ. ಬೇಸಿಗೆ ಕಾಲದಲ್ಲಿ ರಸ್ತೆ ಗುಂಡಿ ಮುಚ್ಚದೇ ಕಾಲಹರಣ ಮಾಡುವ ಬಿಬಿಎಂಪಿ ಅಧಿಕಾರಿಗಳು ಮಳೆಗಾಲದಲ್ಲಿ ಪೂರ್ಣಪ್ರಮಾಣದಲ್ಲಿ ಸಕ್ರಿಯರಾಗುತ್ತಾರೆ. ಪರಿಣಾಮ ಇಂದು ಗುಂಡಿ ಮುಚ್ಚಿದರೆ, ಸಂಜೆ ಮಳೆ ಬಿದ್ದು, ಮಾರನೆಯ ದಿನ ಮತ್ತೆ ದೊಡ್ಡ ಗುಂಡಿ ಸೃಷ್ಟಿಯಾಗಿರುತ್ತದೆ.

ಪರಿಸ್ಥಿತಿ ಹೀಗಿರುವಾಗ ರಸ್ತೆ ಗುಂಡಿ ದಿನ ಇದ್ದೇ ಇರುತ್ತೆ ಅದಕ್ಕೆ ಏನು ಮಾಡಲು ಆಗೋದಿಲ್ಲ. ಮಳೆಯಿಂದಾಗಿ ಗುಣ್ಣಮಟ್ಟದ ಡಾಂಬರೀಕರಣ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದ್ದಾರೆ.

ಇದನ್ನೂ ಓದಿ | ಚಾಮರಾಜಪೇಟೆ ಮೈದಾನ ಮಾಲೀಕರು ಯಾರಾದ್ರೂ ಇದ್ರೆ ಮುಂದೆ ಬನ್ನಿ: ಬಿಬಿಎಂಪಿ ಮನವಿ

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಆಯುಕ್ತ, ಮೇ 25 ರಂದು ಮಾನ್ಸೂನ್‌ ಪ್ರವೇಶ ಹಿನ್ನೆಲೆ ತ್ವರಿತಗತಿಯಲ್ಲಿ ರಸ್ತೆ ಗುಂಡಿ ಮಚ್ಚಲು ಕ್ರಮವಹಿಸಲಾಗಿತ್ತು. ಈ ನಿಟ್ಟಿನಲ್ಲಿ ಸುಮಾರು 5,500 ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಿದ್ದೇವೆ, ಮುಂದಿನ ಹತ್ತೇ ದಿನಗಳಲ್ಲಿ ಪೈಥಾನ್‌ ಯಂತ್ರದ ಮೂಲಕ ಗುಂಡಿ ಮುಚ್ಚುವ ಗುರಿ ಹೊಂದಲಾಗಿತ್ತು. ಆದರೆ ಈಗ ನಿತ್ಯ ರಸ್ತೆ ಗುಂಡಿ ಸರ್ವೇ ನಡೆಸುತ್ತಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಪ್ರತಿವಾರ 3 ಸಾವಿರ ಹೊಸ ಗುಂಡಿಗಳು ಪತ್ತೆಯಾಗುತ್ತಿವೆ.

ಪ್ರತಿ ದಿನ ರಸ್ತೆ ಗುಂಡಿ ಸರ್ವೇ ನಡೆಯುತ್ತಿದ್ದು, ಹೊಸದಾಗಿ ರಸ್ತೆ ಗುಂಡಿ ಪತ್ತೆಯಾಗುತ್ತಲೇ ಇರುತ್ತವೆ. ಇದೊಂದು ನಿರಂತರ ಪ್ರಕ್ರಿಯೆಯಾಗಿದ್ದು, ಕಳಪೆ ಗುಂಡಿ ವಿಚಾರದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.

ರಸ್ತೆ ಗುಂಡಿ ವಿಚಾರದಲ್ಲಿ ಅಧಿಕಾರಿಗಳು ತಪ್ಪು ಮಾಹಿತಿ ನೀಡಿರುವುದು ನಿಜ ಎಂದು ಒಪ್ಪಿಕೊಂಡ ಮುಖ್ಯ ಆಯುಕ್ತರು, ಆದರೆ ಅದು ಬೇಕೆಂದು ಹೇಳುವುದಲ್ಲ ಎಂದು ಸಮರ್ಥನೆ ಮಾಡಿಕೊಂಡರು. ದಾಖಲೆ ಸಲ್ಲಿಸುವಾಗ ಮಿಸ್‌ ಮ್ಯಾಚ್‌ ಆಗಿದ್ದು, ಸರಿಯಾಗಿ ಗುಂಡಿಗಳನ್ನು ಮುಚ್ಚಲು ಆಗುತ್ತಿಲ್ಲ. ಜತೆಗೆ ಮಳೆಯ ಕಾರಣದಿಂದ ಗುಣ್ಣಮಟ್ಟದ ಡಾಂಬರೀಕರಣ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದರು.

ಇದನ್ನೂ ಓದಿ | ರಾತ್ರಿಯಿಡೀ ರಸ್ತೆ ಗುಂಡಿ ಮುಚ್ಚಿಸಿದ BBMP ಮುಖ್ಯ ಆಯುಕ್ತ

Exit mobile version