Site icon Vistara News

BBMP Election: 3 ವರ್ಷದ ನಂತರ ಬೆಂಗಳೂರಿಗರಿಗೆ ಸಿಗಲಿದ್ದಾರೆ ಜನಪ್ರತಿನಿಧಿಗಳು: ಬಿಬಿಎಂಪಿ ಚುನಾವಣೆ ಫಿಕ್ಸ್‌!

BBMP Office Bengaluru

bbmp election to be held this year

ಬೆಂಗಳೂರು: ಕಳೆದ 3 ವರ್ಷಗಳಿಂದ ನಗರದಲ್ಲಿ ಒಬ್ಪರೂ ಪಾಲಿಕೆಯ ಸದಸ್ಯರೇ ಇಲ್ಲದಂತಾಗಿತ್ತು. ಏನೇ ಸಣ್ಣ ಪುಟ್ಟ ಪ್ರಾಬ್ಲಂ ಆದ್ರೂ ಶಾಸಕರ ಮನೆಯ ಬಾಗಿಲನ್ನೋ ಇಲ್ಲ ಕಚೇರಿಯ ಬಾಗಿಲನ್ನೋ ಕಾಯುವಂತಾಗಿತ್ತು. ಆದರೆ ೀ ಸ್ಥಿತಿ ಮುಂದುವರಿಯುವುದಕ್ಕೆ ಬಿಡೋದಿಲ್ಲ ಅಂತಿದೆ ಕಾಂಗ್ರೆಸ್ ಸರ್ಕಾರ. ಇದೇ ವರ್ಷದೊಳಗೆ ಪಾಲಿಕೆಯ ಚುನಾವಣೆಯನ್ನು ನಡೆಸುವುದಾಗಿ ಕಾಂಗ್ರೆಸ್‌ ಸರ್ಕಾರ ಭರವಸೆ ನೀಡಿದ್ದು, ಈ ಕುರಿತು ಪಕ್ಷದ ಅಧ್ಯಕ್ಷರಿಗೆ ವರದಿಯನ್ನೂ ಸಲ್ಲಿಸಿದೆ.

ನವೆಂಬರ್‌ನಲ್ಲಿ ಚುನಾವಣೆ ಫಿಕ್ಸ್.
2015ರಲ್ಲಿ ಪಾಲಿಕೆಗೆ ಆಯ್ಕೆಯಾಗಿದ್ದ ಸದಸ್ಯರ ಅವಧಿ 2020ಕ್ಕೆ ಅಂತ್ಯವಾಗಿತ್ತು. ಅಂದಿನಿಂದ ಬಿಜೆಪಿ ಸರ್ಕಾರದ ಆಡಳಿತ ಇದ್ದ ಕೊನೆಯ ದಿನದವರೆಗೂ ಪಾಲಿಕೆಯ ಚುನಾವಣೆಯನ್ನು ನಡೆಸುತ್ತೇವೆ ಎಂದು ಬಿಜೆಪಿ ಹೇಳುತ್ತಲೇ ಇತ್ತು. ಆದ್ರೆ ತನ್ನ ಮಾತಿನ ಮೇಲೆ ನಿಲ್ಲೋದನ್ನೇ ಬಿಜೆಪಿ ಮರೆತಂತಿತ್ತು. ಕಾಂಗ್ರೆಸ್ ಸರ್ಕಾರ ರಚನೆಯಾದ ಕೂಡಲೇ ಮೊದಲಿಗೆ ಪಾಲಿಕೆಯ ಚುನಾವಣೆಯನ್ನು ಮಾಡೋದಾಗಿ ಭರವಸೆ ನೀಡಿದ್ದು, ಅದನ್ನು ಈಡೇರಿಸುವತ್ತ ಹೆಜ್ಜೆ ಹಾಕಿದೆ.

ಬಿಬಿಎಂಪಿ ಚುನಾವಣಾ ಪೂರ್ವ ಸಿದ್ಧತಾ ಸಮಿತಿಯನ್ನು ಪಕ್ಷ ರಚಿಸಿದ್ದು, ಸಮಿತಿಯ ಅಧ್ಯಕ್ಷರನ್ನಾಗಿ ಹಿರಿಯ ಸಚಿವ ರಾಮಲಿಂಗಾರೆಡ್ಡಿಯವರನ್ನು ನೇಮಿಸಿತ್ತು. ಕಾಂಗ್ರೆಸ್‌ನ ಮಾಜಿ ಮೇಯರ್‌ಗಳು, ನಗರ ಭಾಗದ ಶಾಸಕರು ಹಾಗೂ ಪರಿಷತ್ ಸದಸ್ಯರು ಚುನಾವಣೆ ಕುರಿತು ತಮ್ಮ ಅಭಿಪ್ರಾಯಗಳನ್ನು 3ರಿಂದ 4 ನಡೆದ ಸಭೆಗಳಲ್ಲಿ ತಿಳಿಸಿದ್ದು, ಈ ಕುರಿತ ವರದಿಯೊಂದನ್ನು ಸಿದ್ದಪಡಿಸಲಾಗಿತ್ತು. ಆ ವರದಿಯನ್ನು ಸಚಿವ ರಾಮಲಿಂಗಾರೆಡ್ಡಿ ಇಂದು ಡಿಸಿಎಂ, ಬೆಂಗಳೂರು ನಗರ ಅಭಿವೃದ್ದಿ ಹಾಗು ಉಸ್ತುವಾರಿ ಸಚಿವ ಡಿಕೆಶಿರವರಿಗೆ ಸಲ್ಲಿಸಿದ್ದಾರೆ.

ಚುನಾವಣೆಗೆ ಈಗಿನಿಂದಲೇ ಸಕಲ ಸಿದ್ದತೆ
ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಮಾಡಿದ್ದ ಡೀಲಿಮಿಟೇಶನ್‌ನಿಂದ 198 ಇದ್ದ ವಾರ್ಡ್‌ಗಳು 243 ಆಗಿತ್ತು. ಅವರೇ ಮಾಡಿರೋ ವಾರ್ಡ್ ವಿಂಗಡಣೆಯನ್ನೇ ಪರಿಗಣಿಸಿ ನಾವು ಚುನಾವಣೆ ನಡೆಸಬೇಕಿದೆ. ಜನರಿಗಾಗ್ತಿರೋ ಸಮಸ್ಯೆಗಳ ಮುಂದೆ ವಾರ್ಡ್‌ಗಳ ಸಂಖ್ಯೆ ದೊಡ್ಡದಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೇ, ವಾರ್ಡ್ ವಿಂಗಡಣೆ ಅವೈಜ್ಞಾನಿಕವಾಗಿದ್ರೂ ಈಗ ಚುನಾವಣೆಯ ಅವಶ್ಯಕತೆ ಇದೆ. ರಾಜ್ಯದಲ್ಲಿರೋ ಕಾಂಗ್ರೆಸ್ ಅಲೆಯ ಕ್ಷೀಣವಾಗೋದಕ್ಕೆ ಮೊದಲೇ ಬಿಬಿಎಂಪಿ ಎಲೆಕ್ಷನ್ ಮಾಡಬೇಕು. ಎಂಪಿ ಎಲೆಕ್ಷನ್‌ವರೆಗೂ ಕಾಯೋದು ಸೂಕ್ತವಲ್ಲ ಎಂಬ ಅಂಶಗಳೂ ಕೂಡ ಈ ವರದಿಯಲ್ಲಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾರೆಡ್ಡಿ, ಮಳೆಗಾಲ ಮುಗಿದ ಕೂಡಲೇ ಚುನಾವಣೆ ಮಾಡಲಾಗುತ್ತದೆ. ನವೆಂಬರ್ ಅಂತ್ಯದೊಳಗೆ ಎಲೆಕ್ಷನ್ ಮಾಡಲು ನಿರ್ಧರಿಸಲಾಗಿದೆ. 243 ವಾರ್ಡ್‌ಗಳನ್ನು 250 ವಾರ್ಡ್‌ಗಳನ್ನಾಗಿ ಮಾಡೋ ಪ್ರಸ್ತಾವನೆ ಇರೋದು ಸತ್ಯವಾದ್ರೂ ಇದನ್ನು ಮಾಡಲು ಮತ್ತಷ್ಟು ಸಮಯ ಹಿಡಿಯೋದ್ರಿಂದ ಸದ್ಯಕ್ಕೆ ಈ ಯೋಜನೆಗೆ ಮುಂದಾಗುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: BBMP Election: ಫ್ರೀ ಬಸ್‌ ಮೇಲೇರಿ BBMP ಗೆಲ್ಲಲು ಹೊರಟ ಕಾಂಗ್ರೆಸ್‌: ಚುನಾವಣೆಗೆ ಕಾರ್ಯತಂತ್ರ ಜೋರು

Exit mobile version