Site icon Vistara News

BBMP Fire Accident: ಬಿಬಿಎಂಪಿ ಕಚೇರಿ ಬೆಂಕಿ ದುಷ್ಕೃತ್ಯ? ಮೂವರ ವಿಚಾರಣೆ

BBMP office in Bangalore

ಬೆಂಗಳೂರು: ಬಿಬಿಎಂಪಿ ಕಚೇರಿ ಆವರಣದಲ್ಲಿರುವ ಗುಣ ನಿಯಂತ್ರಣ ಕಟ್ಟಡದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಬೆಂಕಿ ಅವಘಡ (BBMP Fire Accident) ದುಷ್ಕೃತ್ಯವಾಗಿರಬಹುದು ಎಂಬ ಶಂಕೆ ತಲೆದೋರಿದ್ದು, ಈ ನಿಟ್ಟಿನಲ್ಲಿ ಮೂವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಈ ಅವಘಡ ಆಕಸ್ಮಿಕವೇ ಅಥವಾ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗಿದೆಯೇ ಅನ್ನುವ ಬಗ್ಗೆ ಸಾಕಷ್ಟು ಶಂಕೆಯಿದೆ. ಅದಕ್ಕೆ ಕಾರಣ ಇಲ್ಲಿ ನಡೆಯುತ್ತಿದ್ದ ಕಾಮಗಾರಿಗಳ ಗುಣ ಮಟ್ಟ ಪರಿಶೀಲನೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಏನೇ ಕಾಮಗಾರಿ ನಡೆದರೂ ಇಲ್ಲಿಯೇ ಅದರ ಗುಣಮಟ್ಟ ಪರಿಶೀಲನೆ ಮಾಡಲಾಗುತ್ತಿತ್ತು. ಬೃಹತ್ ಕಾಮಗಾರಿಗಳ ಸ್ಯಾಂಪಲ್ಸ್ ತಂದು ಇಲ್ಲಿ ಗುಣಮಟ್ಟ ಪರಿಶೀಲನೆ ಮಾಡಲಾಗುತ್ತದೆ. ಪರಿಶೀಲನೆ ಬಳಿಕವಷ್ಟೇ ಕಾಮಗಾರಿಗಳ ಬಾಕಿ ಹಣ ಬಿಡುಗಡೆ ಮಾಡಲಾಗುತ್ತದೆ.

ಹೀಗಾಗಿ ಕೆಲ ಕಾಮಗಾರಿಗಳ ಬಿಲ್ ಕಳಪೆ ಗುಣಮಟ್ಟದ ಕಾರಣ ತಡೆ ಹಿಡಿಯಲಾಗಿತ್ತು ಅನ್ನುವ ಶಂಕೆಯಿದೆ. ಹೀಗಾಗಿ ಕಾಮಗಾರಿ ಗುಣಮಟ್ಟಕ್ಕೆ ಸಂಬಂಧಿಸಿದಂತೆ ವರದಿ ಸಿದ್ಧವಾಗದಂತೆ ಈ ಕೃತ್ಯ ಎಸಗಲಾಗಿದೆ ಎಂಬ ಆರೋಪವಿದೆ. ಸದ್ಯ ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರು ಪ್ರಾಥಮಿಕವಾಗಿ ಸಿಕ್ಕ ಮಾಹಿತಿಗಳನ್ನು ಆಧರಿಸಿ ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಎಇಇಗಳಾದ ಸ್ವಾಮಿ, ಆನಂದ್ ಹಾಗೂ ಇನ್ನೊಬ್ಬ ಗುಮಾಸ್ತ ಪೊಲೀಸರ ವಶದಲ್ಲಿದ್ದಾರೆ. ಹಲಸೂರು ಗೇಟ್ ಪೊಲೀಸರಿಂದ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: Fire Accident: ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ ಆಕಸ್ಮಿಕವಲ್ಲ, ಬಿಜೆಪಿಯ ಷಡ್ಯಂತ್ರ ಎಂದ ಕಾಂಗ್ರೆಸ್‌!

Exit mobile version