ಬೆಂಗಳೂರು: ಇಲ್ಲಿನ ವಿಜಯನಗರ ಸಮೀಪದಲ್ಲಿರುವ ಮಸ್ಜಿದ್ ಎ ಅಲ್ ಖುಬ ಮಸೀದಿ ಡೆಮಾಲಿಷ್‌ಗೆ (Demolish) ಬಿಬಿಎಂಪಿ ನೋಟಿಸ್ ಮಾಡಿದೆ. ಸಾರ್ವಜನಿಕ ಸ್ವತ್ತಿನಲ್ಲಿ ಒತ್ತುವರಿ ಮಾಡಿಕೊಂಡು ಮಸೀದಿ ಕಟ್ಟಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಸಾರ್ವಜನಿಕರ ಓಡಾಟಕ್ಕೆ ಮೀಸಲಿಟ್ಟ ಐದು ಅಡಿ ಪ್ಯಾಸೇಜ್ ಒತ್ತುವರಿಯಾಗಿದ್ದು, ಒತ್ತುವರಿ ಮಾಡಿ ನಿರ್ಮಿಸಿರುವ ಮಸೀದಿಯ ಭಾಗವನ್ನು ಬಿಬಿಎಂಪಿ ವಶಕ್ಕೆ ಪಡೆಯುವಂತೆ ಪ್ರಾದೇಶಿಕ ಆಯುಕ್ತರು ಬಿಬಿಎಂಪಿಗೆ ಆದೇಶಿಸಿದ್ದಾರೆ. ಆದೇಶದ ಅನುಸಾರ ಮಸೀದಿ ಡೆಮಾಲಿಷ್‌ಗೆ ಬಿಬಿಎಂಪಿಯಿಂದ ಆರ್ಡರ್ ಪಾಸ್ ಆಗಿದ್ದು, ಮಸ್ಜಿದ್ ಎ ಅಲ್ ಖುಬ ಮಸೀದಿಯ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಇದನ್ನೂ ಓದಿ | ಜಾಮಿಯಾ ಮಸೀದಿ ವಿವಾದಕ್ಕೆ ಬಿಗ್ ಟ್ವಿಸ್ಟ್, ಆಂಜನೇಯ ದೇಗುಲ ಸತ್ಯಕ್ಕೆ ಸಿಕ್ಕಿತು ಸಾಕ್ಷ್ಯ
ನಿವೇಶನ ಸಂಖ್ಯೆ 13ರ ಮಾಲೀಕರಾಗಿದ್ದ ಪಿ ಬಾಷಾ ಎಂಬುವವರು ಒಂದು ಟ್ರಸ್ಟ್‌ಗೆ ಜಾಗ ಬರೆದುಕೊಟ್ಟಿದ್ದು, ನಂತರ ನಿವೇಶನ ಸಂಖ್ಯೆ 15ರ ಮಾಲೀಕರು ಅಮೀನಾ ಎಂಬುವವರು ಕೂಡಾ ನಿವೇಶನವನ್ನು ಮಸೀದಿಗೆ ನೀಡಿದ್ದಾರೆ. ಈ ಎರಡು ನಿವೇಶನಗಳನ್ನು ಒಂದುಗೂಡಿಸಿ ಮಸೀದಿ ನಿರ್ಮಾಣ ಮಾಡಲಾಗಿದೆ.
ಆದರೆ, ಎರಡು ಸೈಟ್‌ಗಳ ಮಧ್ಯೆ ನಿವೇಶನ ಸಂಖ್ಯೆ 14 ಇದ್ದು, ಅದನ್ನು ಒತ್ತುವರಿ ಮಾಡಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ನಿವೇಶನ ಸಂಖ್ಯೆ 14ರಲ್ಲಿ 5.5 ಅಡಿ ಅಗಲ ಹಾಗೂ 45 ಅಡಿ ಉದ್ದವಿದ್ದು, ಸಾರ್ವಜನಿಕರ ಓಡಾಟಕ್ಕೆ ಪ್ಯಾಸೇಜ್ ರೀತಿಯಲ್ಲಿ ಇತ್ತು. ಆದರೆ ಇಲ್ಲಿ ಮಸೀದಿ ನಿರ್ಮಾಣಕ್ಕೆ ಈ ಹಿಂದೆ ಬಿಬಿಎಂಪಿ ಖಾತಾ ಮಾಡಿಕೊಟ್ಟಿತ್ತು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ವಾದ-ಪ್ರತಿವಾದಗಳು ನಡೆದು ಅಂತಿಮವಾಗಿ ನಿವೇಶನ ಸಂಖ್ಯೆ 14ರ ಐದು ಅಡಿ ಜಾಗ ಪಾಲಿಕೆ ಸ್ವತ್ತೆಂದು ಘೋಷಿಸಿದ್ದು, ತಕ್ಷಣ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲು ಬಿಬಿಎಂಪಿಗೆ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದಾರೆ. ಈ ನಿಟ್ಟಿನಲ್ಲಿ ಬಿಬಿಎಂಪಿಯಿಂದ ಮಸೀದಿ ಡೆಮಾಲಿಷ್ ಮಾಡುವ ಬಗ್ಗೆ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ | ತೆಲಂಗಾಣ ರಾಜ್ಯದ ಯಾವ ಮಸೀದಿಯೂ ಹಿಂದೂ ದೇವಾಲಯ ಉರುಳಿಸಿ ಕಟ್ಟಿದ್ದಲ್ಲ ಎಂದ ಎಎಸ್‌ಐ
ಸಾರ್ವಜನಿಕರ ಓಡಾಟಕ್ಕೆ ಮೀಸಲಿಟ್ಟ ಐದು ಅಡಿ ಪ್ಯಾಸೇಜ್‌ನ ಒತ್ತುವರಿಯಾಗಿದ್ದು, ಒತ್ತುವರಿ ಮಾಡಿ ನಿರ್ಮಿಸಿರುವ ಮಸೀಯ ಭಾಗವನ್ನು ಬಿಬಿಎಂಪಿ ವಶಕ್ಕೆ ಪಡೆಯುವಂತೆ ಪ್ರಾದೇಶಿಕ ಆಯುಕ್ತರು ಬಿಬಿಎಂಪಿಗೆ ಆದೇಶಿಸಿದ್ದಾರೆ. ಆದೇಶದ ಅನುಸಾರ ಮಸೀದಿ ಡೆಮಾಲಿಷ್‌ಗೆ ಬಿಬಿಎಂಪಿಯಿಂದ ಆರ್ಡರ್ ಪಾಸ್ ಆಗಿದ್ದು, ಮಸ್ಜಿದ್ ಎ ಅಲ್ ಖುಬ ಮಸೀದಿಯ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಲಾಗಿದೆ.