ಬೆಂಗಳೂರು: BBMP ಲಾರಿಗಳಿಂದ ಅಪಘಾತ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿದ್ದು, ಬಿಬಿಎಂಪಿ ಲಾರಿ ಹಾಗೂ ಇತರೆ ಭಾರಿ ವಾಹನಗಗಳಿಗೆ ಇನ್ನೂ ಹೆಚ್ಚಿನ ನಿಯಮಗಳನ್ನು ಜಾರಿ ಗೊಳಿಸುವುದಾಗಿ ಸಂಚಾರಿ ಪೊಲೀಸ್ ಜಂಟಿ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.
ಜಾರಿಗೆ ತರಲಿರುವ ನಿಯಮಗಳು:
- ಲಾರಿಗಳ ವೇಗದ ಮಿತಿ 40 ಕಿ.ಮೀ. ಇರಬೇಕು
- ಮದ್ಯಪಾನ ಸೇವನೆ ಮಾಡಿ ಲಾರಿ ಚಲಾಯಿಸದಂತೆ ಸೂಚನೆ. ಆಲ್ಕೊಮೀಟರ್ ಮೂಲಕ ಚೆಕ್ ಮಾಡುವ ವ್ಯವಸ್ಥೆ
- ಸಂಚಾರ ತರಬೇತಿ ಶಾಲೆಯಲ್ಲಿ ಬಿಬಿಎಂಪಿ ಕಸದ ಲಾರಿ ಚಾಲಕರಿಗೆ ತರಬೇತಿ ನೀಡಲು ತೀರ್ಮಾನ
- ಸಂಚಾರಿ ಪೊಲೀಸರಿಂದ ಸ್ಪೆಷಲ್ ಡ್ರೈವ್
- ಸ್ಕೂಲ್ ಜೋನ್, ಅಕ್ಸಿಡೆಂಟಲ್ ಜೋನ್ ಹೀಗೆ ಎಲ್ಲಿ ಎಲ್ಲಿ ಹೇಗೆ ವಾಹನ ಚಾಲನೆ ಮಾಡಬೇಕು ಎಂದು ಎಂದು ಟ್ರೈನಿಂಗ್ ನೀಡುತ್ತೆವೆ…
- ವಾಹನಗಳ ಚಾಲನೆ ಹಾಗೂ ನಿಲುಗಡೆ ಬಗ್ಗೆ ಸೂಕ್ತ ಸೂಚನೆ ನೀಡುವ ನಿರ್ಧಾರ
- ಸ್ಕೂಲ್ ಜೋನ್, ಅಕ್ಸಿಡೆಂಟಲ್ ಜೋನ್ ಹೀಗೆ ಸೂಕ್ಷ್ಮ ಸ್ಥಳಗಳಲ್ಲಿ ವಾಹನ ಚಾಲನೆಯ ಕ್ರಮದ ಬಗ್ಗೆ ತರಬೇತಿ
ಬಿಬಿಎಂಪಿ ಲಾರಿಗಳಿಂದ ಆಗುತ್ತಿರುವ ಅಪಗಾತವನ್ನು ತಡೆಯಲು ಗಂಭೀರವಾಗಿ ತೀರ್ಮಾನಗಳನ್ನು ಕೈಗೊಳ್ಳುವುದಾಗಿ ಸಂಚಾರಿ ಆಯುಕ್ತ ರವಿಕಾಂತೇ ಗೌಡ ತಿಳಿಸಿದ್ದಾರೆ.
ಇದನ್ನೂ ಓದಿ | ಜ್ವರ ಬಂದರೆ ಸಾಫ್ಟ್‌ವೇರ್ ಇಂಜಿನಿಯರ್ ಬಳಿ ಹೋಗುವ BBMP: ಕಸದ ಲಾರಿ ಕುರಿತ ತಪಾಸಣೆ ನಾಟಕ