ಬೆಂಗಳೂರು: ತನ್ನ ಆಸ್ತಿಗಳಿಂದ ಸೂಕ್ತ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಮಾಡದೆ ಸೊರಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(ಬಿಬಿಎಂಪಿ) ಆದಾಯ ಹೆಚ್ಚಳಕ್ಕೆ ಜಾರಿ ಕೋಶವನ್ನು ರಚಿಸಬೇಕು ಎಂದು ಎರಡನೇ ಆಡಳಿತ ಸುಧಾರಣಾ ಆಯೋಗವು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅಧ್ಯಕ್ಷತೆಯ ಆಯೋಗವು ಬಿಬಿಎಂಪಿ ಸುಧಾರಣೆಯ ಕುರಿತ ವರದಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿ ಸಲ್ಲಿಕೆ ಮಾಡಿರು. ಆಯೋಗದ ವರದಿಯ ಪ್ರಮುಖ ಅಂಶಗಳು ಈ ಕೆಳಕಂಡಂತಿವೆ.
1. ಸಮನ್ವಯ ಮತ್ತು ವಿಕೇಂದ್ರೀಕೃತ ಆಡಳಿತ
ವಿಭಾಗೀಯ ಮಟ್ಟದಲ್ಲಿ ಸ್ಥಳೀಯ ಆಡಳಿತವನ್ನು ಸುಧಾರಿಸಲು ಮತ್ತು ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು30 ಡೆಪ್ಯುಟಿ ಕಮಿಷನರ್ ಹುದ್ದೆಗಳನ್ನು, ಸೃಷ್ಟಿಮಾಡುವುದು
2. ನೇರ ನೇಮಕಾತಿಯಾಗುವ ಸಾಮಾನ್ಯ ವರ್ಗದ ಕೆಎಎಸ್ ಎ- ಗುಂಪಿನ ಕಿರಿಯ ವೇತನ ಶ್ರೇಣಿಯ ಅಧಿಕಾರಿಗಳ ಮಾದರಿಯಲ್ಲಿ, ಬಿಬಿಎಂಪಿಯಲ್ಲಿ ಸಹಾಯಕ ಆಯುಕ್ತರ ಹುದ್ದೆಗಳನ್ನು ಸೃಜಿಸಬಹುದು ಹಾಗೂ
ಮಧ್ಯಮ ಅವಧಿಯ ನೇಮಕಾತಿಯ ಯೋಜನೆಯನ್ನು ಸಹ ತಯಾರಿಸಬೇಕು.
3. ತೆರಿಗೆ ನಿರೀಕ್ಷಕರು (TI) ಮತ್ತು ಕಂದಾಯ ನಿರೀಕ್ಷಕರು (RI – 71 ಹೆಚ್ಚುವರಿ ಕಂದಾಯ ನಿರೀಕ್ಷಕರ ಮತ್ತು 44 ಹೆಚ್ಚುವರಿ ತೆರಿಗೆ ನಿರೀಕ್ಷಕರ ಹುದ್ದೆಗಳನ್ನು ಬಿಬಿಎಂಪಿ ಸೃಜಿಸಬಹುದು ಮತ್ತು ನೇಮಕಾತಿ ಮಾಡಿಕೊಳ್ಳಬಹುದು.
4. ಸಹಾಯಕ ಕಂದಾಯ ಅಧಿಕಾರಿಗಳು (AROS) ಪ್ರತಿ 3 ವಾರ್ಡ್‌ಗಳಿಗೆ 1-ಸಹಾಯಕ ಕಂದಾಯ ಅಧಿಕಾರಿ ಹುದ್ದೆ ಇರಬಹುದು. 17 ಹೊಸ ಸಹಾಯಕ ಕಂದಾಯ ಅಧಿಕಾರಿ ಹುದ್ದೆಗಳನ್ನು ಸೃಜಿಸಬಹುದು ಮತ್ತು ಕೆಲಸದ ಹೊರೆಯ ಆಧಾರದ ಮೇಲೆ ಮರುಹಂಚಿಕೆ ಮಾಡಬಹುದು.
5. ಎಲ್ಲಾ ಕಂದಾಯ ನಿರೀಕ್ಷಕರನ್ನು ಮತ್ತು ತೆರಿಗೆ ನಿರೀಕ್ಷಕರನ್ನು ಕಡ್ಡಾಯವಾಗಿ ಪ್ರತಿ 5 ವರ್ಷಗಳಿಗೊಮ್ಮೆ ಅದೇ ವಲಯದೊಳಗಿನ ಮತ್ತೊಂದು ವಾರ್ಡ್‌ಗೆ ಮತ್ತು ಪ್ರತಿ 10 ವರ್ಷಗಳಿಗೊಮ್ಮೆ ಬೇರೆ ವಲಯಗಳ ಮತ್ತೊಂದು ವಾರ್ಡ್‌ಗೆ ವರ್ಗಾಯಿಸಬಹುದು
6. ಆಸ್ತಿ ತೆರಿಗೆ ಸಂಗ್ರಹಣೆ ಮತ್ತು ತೆರಿಗೆ ಆಕರಣೆಯನ್ನು ಹೆಚ್ಚಿಸಲು ಜಾರಿ ಕೋಶ ಒಂದನ್ನು ರಚಿಸಬಹುದು
7. ಎಲ್ಲ 243 ವಾರ್ಡ್‌ಗಳಿಗೆ ಪ್ರತಿ ವಾರ್ಡ್ ಕಿರಿಯ ಸಹಾಯಕ ಅಭಿಯಂತರರ ಹುದ್ದೆ ಮತ್ತು ಎಲ್ಲಾ 243 ವಾರ್ಡ್‌ಗಳಿಗೆ ಪ್ರತಿ ವಾರ್ಡ್‌ಗೆ 1-ವರ್ಕ್ ಇನ್ಸ್‌ಪೆಕ್ಟರ್ (W) ಹುದ್ದೆ ಇರಬಹುದು, 214 ವರ್ಕ್ ಇನ್ಸ್‌ಪೆಕ್ಟಗಳು ಮತ್ತು 89 ಕಿರಿಯ ಸಹಾಯಕ ಅಭಿಯಂತರರನ್ನು ನೇಮಕಾತಿ ಮಾಡಿಕೊಳ್ಳಬಹುದು.
8. ತುರ್ತು ಕಾಮಗಾರಿಗಳಿಗೆ ಬಳಸಿಕೊಳ್ಳಲು ಪ್ರತಿ ವಾರ್ಡ್ ಎಂಜಿನಿಯರ್‌ಗೆ, ಹೊಸ ಅವಾರ್ಡ್ ಗಳಿಗೆ ವಾರ್ಷಿಕ ಗರಿಷ್ಠ ರೂ.10 ಲಕ್ಷದ ವರೆಗೆ ಮತ್ತು ಕೋರ್ ವಾರ್ಡ್‌ಗಳಿಗೆ ವಾರ್ಷಿಕ ರೂ.5 ಲಕ್ಷದ ವರೆಗೆ ಅವರ್ತ ನಿಧಿಯನ್ನು ಒದಗಿಸಬೇಕು.
9. ಪ್ರತಿ ವಾರ್ಡ್‌ಗೆ ಒಬ್ಬ ಕಿರಿಯ ಆರೋಗ್ಯ ನಿರೀಕ್ಷಕರು (JHI) ಮತ್ತು ಪ್ರತಿ 2 ವಾರ್ಡ್‌ಗಳಿಗೆ ಒಬ್ಬ ಹಿರಿಯ ಆರೋಗ್ಯ ನಿರೀಕ್ಷಕರು (SHI) ಇರಬಹುದು
10. 192 ಹೆಚ್ಚುವರಿ JH ಹುದ್ದೆಗಳನ್ನು ಸೃಜಿಸಬಹುದು ಮತ್ತು ಭರ್ತಿ ಮಾಡಬಹುದು. ವರದಿಯಲ್ಲಿ ತೋರಿಸಿರುವಂತೆ ಹೊಸ ಹುದ್ದೆಗಳನ್ನು ರಚಿಸದೆ 12 SHI ಹುದ್ದೆಗಳನ್ನು ಬೇರೆ ಬೇರೆ ವಲಯಗಳಿಗೆ ಮರುನಿಯೋಜನೆ ಮಾಡಬಹುದು.
11. ಸಹಾಯಕ ಕಾನೂನು ಅಧಿಕಾರಿಗಳು (ALO) ಗಳು, ಉಪ ಕಾನೂನು ಅಧಿಕಾರಿಗಳು(OLO) ಮತ್ತು ಕಾನೂನು ಅಧಿಕಾರಿ (ಕಾನೂನು ಕೋಶದ ಮುಖ್ಯಸ್ಥರು)ಗೆ ಸಹಾಯ ಮಾಡಲು ) ಹೆಚ್ಚುವರಿ ಕಿರಿಯಕಾನೂನು ಅಧಿಕಾರಿ(JLO) ಹುದ್ದೆಗಳನ್ನು ಸೃಜಿಸುವ ಮೂಲಕ ಬಿಬಿಎಂಪಿ ಕೇಂದ್ರ ಕಾನೂನು ಕೋಶವನ್ನು ಬಲಪಡಿಸಬೇಕು.