Site icon Vistara News

Beggary Rescue : ರಂಜಾನ್ ಹಬ್ಬದಂದು 40ಕ್ಕೂ ಹೆಚ್ಚು ಮಕ್ಕಳಿಂದ ಭಿಕ್ಷಾಟನೆ; ಸಿಕ್ಕಿಬಿದ್ದರು ಲೇಡಿ ಗ್ಯಾಂಗ್‌

Beggary Rescue

ಬೆಂಗಳೂರು: ದೇಶಾದಾದ್ಯಂತ ಪವಿತ್ರ ರಂಜಾನ್ ಉಪವಾಸದ (Ramzan Fest) ವ್ರತವನ್ನು ಅಂತ್ಯಗೊಳಿಸಿ ಹಬ್ಬವನ್ನು ನಿನ್ನೆ ಗುರುವಾರ ವಿಶೇಷವಾಗಿ ಆಚರಿಸಿದರು. ರಾಜಧಾನಿ ಬೆಂಗಳೂರಿನಲ್ಲಿ ಒಂದು ಕಡೆ ರಂಜಾನ್‌ ಸಂಭ್ರಮ ಮನೆ ಮಾಡಿದ್ದರೆ, ಮತ್ತೊಂದು ಕಡೆ ನಮಾಜ್ ಮಾಡಲು ಬಂದವರ ಮುಂದೆ ಭಿಕ್ಷೆ (Beggary Rescue) ಬೇಡಲು ಅಪ್ರಾಪ್ತರನ್ನು ಬೀದಿಗೆ ಬಿಟ್ಟಿದ್ದರು.

ಮಕ್ಕಳನ್ನು ಬಿಟ್ಟು ಭಿಕ್ಷಾಟನೆ ಮಾಡಲಾಗುತ್ತಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಪೋಲಿಸರು ಹಾಗೂ ಮಹಿಳಾ ಸಂರಕ್ಷಣಾ ದಳ ಜತೆಗೆ ಮಕ್ಕಳ ಕಲ್ಯಾಣ ಇಲಾಖೆಯವರು ದಾಳಿ ನಡೆಸಿದ್ದರು. ಈ ಅಮಾನವೀಯ ಘಟನೆ ಬೆಂಗಳೂರಿನ ಪುಲಕೇಶಿನಗರದ ಹಜೀ ಸರ್ ಇಸ್ಮಾಯಿಲ್ ಸೈಟ್ ಮಜೀದ್‌ನ ಬಳಿ ನಡೆದಿತ್ತು.

ಇದನ್ನೂ ಓದಿ: Physical Abuse : ಬಹಿರ್ದೆಸೆಗೆ ತೆರಳಿದ ಮಹಿಳೆ ಮೇಲೆ ಎರಗಿ ಬಲತ್ಕಾರ ಮಾಡಿದ ರಾಕ್ಷಸ

ಪವಿತ್ರ ರಂಜಾನ್ ಮಾಸದಲ್ಲಿ ಒಂದು ತಿಂಗಳು ಉಪವಾಸ ವ್ರತ ಆಚರಿಸುವ ಮುಸ್ಲಿಮರು ಕೊನೆ ದಿನದಂದು ದಾನ ಧರ್ಮವನ್ನು ಮಾಡುತ್ತಾರೆ. ಬಡವರು, ಅಂಗವಿಕಲರಿಗೆ ದುಡ್ಡು, ಹೊಸ ಬಟ್ಟೆಯನ್ನು ಕೊಡುತ್ತಾರೆ. ಇದನ್ನೆ ಬಂಡಾವಾಳ ಮಾಡಿಕೊಂಡ ಮಹಿಳಾ ಗ್ಯಾಂಗ್‌ವೊಂದು ಸುಮಾರು 47 ಮಕ್ಕಳನ್ನು ರಂಜಾನ್‌ ಎಂದು ಭಿಕ್ಷಾಟನೆಗೆ ಬೀದಿಗೆ ಬಿಟ್ಟಿದ್ದರು.

ಇದರ ಖಚಿತ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬೆಂಗಳೂರು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಸುಮಾರು 36 ಮಹಿಳೆಯರನ್ನು ವಶಪಡಿಸಿಕೊಂಡಿದ್ದಾರೆ. ಮಕ್ಕಳ ಶೈಕ್ಷಣಿಕ ಜೀವನವನ್ನು ಕಿತ್ತು ಬಿಸಾಕಿಮ, ಭಿಕ್ಷಾಟಣೆಗೆ ಬಿಟ್ಟ ಘಾತುಕರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version