Site icon Vistara News

ಬೆಲ್ ಬಾಟಂ ಫಿಲ್ಮ್‌ ಸ್ಟೈಲ್‌ನಲ್ಲಿ ಯಾಮಾರಿಸಿ ಮಹಿಳೆಯ ಸರ ಎಗರಿಸಿದ!

ಬೆಲ್ ಬಾಟಂ ಫಿಲ್ಮ್‌ ಸ್ಟೈಲ್‌ ಕಳ್ಳತನ

ಬೆಂಗಳೂರು: ಇಲ್ಲೊಬ್ಬ ಕಿಲಾಡಿ ಬೆಲ್ ಬಾಟಂ ಫಿಲ್ಮ್‌ ಸ್ಟೈಲ್‌ನಲ್ಲಿ ಚಿನ್ನ ಕದ್ದು ಯೋಧನ ಪತ್ನಿಗೆ ಯಾಮಾರಿಸಿದ್ದಾನೆ. ರಾಜಾಜಿನಗರದ ಮಂಜುನಾಥನಗರದಲ್ಲಿ ಈ ಘಟನೆ ನಡೆದಿದೆ. ಅಂಗಡಿಗೆ ಬಂದು ಐಟಂ ಕೇಳುವ ನೆಪದಲ್ಲಿ ಸುನೀತಾ ಎಂಬುವರ ಚಿನ್ನದ ಸರವನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ.

ಇದನ್ನೂ ಓದಿ | ಕಳ್ಳತನ ಮಾಡಲು ಬಂದಿದ್ದವ ಮಹಡಿಯಿಂದ ಬಿದ್ದು ಸಾವು

ಸುನೀತಾ ಡ್ರೈ ಪ್ರೂಟ್ಸ್‌ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ. ಇವರ ಪತಿ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡ್ರೈ ಪ್ರೂಟ್ಸ್‌ ಕೇಳುವ ನೆಪದಲ್ಲಿ ಅಂಗಡಿಗೆ ಬಂದಿದ್ದ ಅಪರಿಚಿತ ಆಸಾಮಿ, ನಿಮ್ಮ ಚೈನ್‌ ಚೆನ್ನಾಗಿದೆ ಎಂದು ಪುಸಲಾಯಿಸಿದ. ನಿಮ್ಮ ಮನೆಯವರು ನನಗೆ ತುಂಬಾ ಆತ್ಮೀಯರು. ಅವರೇ ನನಗೆ ಇಲ್ಲಿಗೆ ಕಳಿಸಿದ್ದು ಎಂದು ನಂಬಿಕೆ ಬರುವಂತೆ ಮಾತನಾಡಿದ.

ಒಮ್ಮೆ ಚೈನ್ ಪೋಟೊ ತೆಗೆದುಕೊಳ್ಳುತ್ತೇನೆ ಎಂದು ಆ ಮಹಿಳೆಗೆ ಹೇಳಿದ. ಆತನ ಮಾತಿಗೆ ಮೋಡಿಗೆ ಒಳಗಾದ ಹಿಳೆ ಚೈನ್ ಬಿಚ್ಚಿ ಆತನ ಕಳ್ಳನ ಕೈಗೆ ಕೊಟ್ಟಳು. ಚೈನ್ ಕೈಗೆ ಬರುತ್ತಿದ್ದಂತೆ, ಖರ್ಜೂರ ಪ್ಯಾಕ್ ಮಾಡಿ ಎಂದ. ಮಹಿಳೆ ಖರ್ಜೂರ ಪ್ಯಾಕ್‌ ಮಾಡಲು ಒಳಗೆ ಬಂದಾಗ, ಸುಮಾರು 50 ಗ್ರಾಂ ತೂಕದ ಮಾಂಗಲ್ಯ ಸರ ತೆಗೆದುಕೊಂಡು ಕ್ಷಣ ಮಾತ್ರದಲ್ಲಿ ಪರಾರಿಯಾದ. ಮಹಿಳೆ ಈಗ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ | ಹೋಟೆಲ್‌ನಲ್ಲಿ ಕಳ್ಳತನಕ್ಕೆ ಬಂದು ಚಿಕನ್ ಹುಡುಕಾಡಿದ, ಅದೂ ಸಿಗದೆ ವಾಪಸಾದ !

Exit mobile version