Site icon Vistara News

Bengaluru Accidents : ಜಸ್ಟ್‌ 24 ಗಂಟೆಯಲ್ಲಿ ರಾಜಧಾನಿಯಲ್ಲಿ 14 ಭೀಕರ ಅಪಘಾತ, 4 ಸಾವು!

within24 hours 14 Accident in Bengaluru

ಬೆಂಗಳೂರು: ಐಟಿ ಸಿಟಿ ಬೆಂಗಳೂರಿನಲ್ಲಿ ವಾಹನಗಳನ್ನು ರಸ್ತೆಗಿಳಿಸುವ ಮುನ್ನ ಸವಾರರೇ ಎಚ್ಚರವಾಗಿರಿ. ಯಾಕೆಂದರೆ ನಗರದಲ್ಲಿ ಆಗುತ್ತಿರುವ ಅಪಘಾತಗಳನ್ನು (Bengaluru Accidents) ನೋಡಿದರೆ ಬೆಚ್ಚಿ ಬೀಳುಸುತ್ತಿದೆ. ಬೆಂಗಳೂರು ನಗರವೊಂದರಲ್ಲೇ ಕಳೆದ 24 ಗಂಟೆಗಳಲ್ಲಿ (Within 24 Hours) 14 ಭೀಕರ ಅಪಘಾತಗಳು ಸಂಭವಿಸಿವೆ. ಅಪಘಾತಗಳಲ್ಲಿ ನಾಲ್ವರು ದಾರುಣವಾಗಿ ಮೃತಪಟ್ಟಿದ್ದರೆ, 11 ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಬೆಂಗಳೂರಲ್ಲಿ ಹೆಚ್ಚಿದ ರಸ್ತೆ ಅಪಘಾತಗಳು

ಒಂದೇ ದಿನದಲ್ಲಿ ಎಲ್ಲೆಲ್ಲಿ ಅಪಘಾತಗಳು ನಡೆದಿವೆ?

ಘಟನೆ-1
ಸ್ಥಳ: ಹೆಬ್ಬಾಳ –
ಸ್ವಯಂ ಅಪಘಾತದಿಂದಾಗಿ (Self Accident) ಪಶ್ಚಿಮ ಬಂಗಾಳ‌ ಮೂಲದ 32 ವರ್ಷದ ಯುವಕನೊಬ್ಬ ಬಲಿಯಾಗಿದ್ದಾನೆ. ಅತಿ ವೇಗ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಘಟನೆ-2
ಸ್ಥಳ: ರಾಜಾಜಿನಗರ –
2 ಅಪಘಾತಗಳು ಸಂಭವಿಸಿದ್ದು, ಒಂದು ಸಾವಾಗಿದೆ.‌ ರಾಜಾಜಿನಗರದಲ್ಲಿ ಸ್ವಯಂ ಅಪಘಾತದಿಂದಾಗಿ 19 ವರ್ಷದ ರಾಹುಲ್ ಎಂಬಾತ ಪ್ರಾಣ ಕಳೆದುಕೊಂಡಿದ್ದಾನೆ. ಬೈಕ್‌ನಲ್ಲಿ ಅತಿ ವೇಗದಿಂದ ಬಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಭೀರ ಗಾಯವಾಗಿ ಮೃತಪಟ್ಟಿದ್ದಾಗಿ ವರದಿ ಆಗಿದೆ.

ಘಟನೆ-3
ಸ್ಥಳ: ಹೆಣ್ಣೂರು –
2 ಅಪಘಾತಗಳು ನಡೆದಿದ್ದು, ರಸ್ತೆ ದಾಟುತ್ತಿದ್ದ ಪಾದಚಾರಿ ಮೃತ್ಯು. ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ಆರ್‌.ಎಕ್ಸ್ ಬೈಕ್‌ ಡಿಕ್ಕಿಯಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಪೂನಂದಾಸ್ (32) ಮೃತ ದುರ್ದೈವಿ. ಪೂನಂದಾಸ್‌ ರಸ್ತೆ ಬದಿ ಹೋಗುತ್ತಿದ್ದಾಗ ಬೈಕ್‌ ಡಿಕ್ಕಿ ಹೊಡೆದಿತ್ತು. ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸೇರಿಸುವ ಮೊದಲೇ ಜೀವ ಬಿಟ್ಟಿದ್ದಾರೆ.

ಇದನ್ನೂ ಓದಿ: Self Harming : ಹುನಗುಂದ ಸರ್ಕಾರಿ ಕಾಲೇಜು ಪ್ರಿನ್ಸಿಪಾಲ್‌ ಕಾಲೇಜಿನಲ್ಲೇ ನೇಣಿಗೆ ಶರಣು; ನಿನ್ನೆ ರಾತ್ರಿವರೆಗೂ ಬ್ಯುಸಿ ಇದ್ರು

ಘಟನೆ-4
ಸ್ಥಳ: ಬಸವನಗುಡಿ –
2 ಅಪಘಾತಗಳು ಸಂಭವಿಸಿರುವ ವರದಿ ಆಗಿದ್ದು, ಯಾವುದೇ ಸಾವಾಗಿಲ್ಲ, ಬದಲಿಗೆ ಗಂಭೀರ ಗಾಯಗೊಂಡಿದ್ದಾರೆ.

ಘಟನೆ-5
ಸ್ಥಳ: ಕೆ.ಆರ್ ಪುರಂ
– ಒಂದು ಅಪಘಾತ ನಡೆದಿದ್ದು, ಸವಾರರು ಗಾಯಗೊಂಡಿದ್ದಾರೆ.

ಘಟನೆ-6
ಸ್ಥಳ: ವೈಟ್ ಫೀಲ್ಡ್ –
ಎರಡು ಅಪಘಾತಗಳು ಸಂಭವಿಸಿರುವ ವರದಿ ಆಗಿದೆ.

ಘಟನೆ-7
ಸ್ಥಳ: ಹುಳಿಮಾವು –
ಎರಡು ಅಪಘಾತಗಳು ಸಂಭವಿಸಿದೆ.

ಘಟನೆ-8
ಸ್ಥಳ: ಸದಾಶಿವನಗರ
– ರಸ್ತೆ ಅಪಘಾತವಾಗಿರುವ ವರದಿ ಆಗಿದೆ.

ಘಟನೆ-9
ಸ್ಥಳ: ಮೈಕ್ರೋ ಲೇಔಟ್ ಟ್ರಾಫಿಕ್-
ಒಂದು ಅಪಘಾತ ಸಂಭವಿಸಿದೆ.

24 ಗಂಟೆಯಲ್ಲಿ ಒಟ್ಟು 9 ಕಡೆಗಳಲ್ಲಿ ರಸ್ತೆ ಅಪಘಾತಗಳು ನಡೆದಿವೆ. ಅಪಘಾತದಲ್ಲಿ ನಾಲ್ವರು ಜೀವ ಕಳೆದುಕೊಂಡಿದ್ದಾರೆ. ಉಳಿದ ಕಡೆಗಳಲ್ಲಿ ನಡೆದ ಅಪಘಾತಗಳಲ್ಲಿ 14 ಮಂದಿ ಗಾಯಗೊಂಡಿದ್ದಾರೆ. ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಎಲೆಕ್ಟ್ರಾನಿಕ್‌ ಸಿಟಿ ಫ್ಲೈಓವರ್‌ನಲ್ಲಿ ಅಪಘಾತ, ಒಬ್ಬನ ಬಲಿ

ಬೆಂಗಳೂರು: ರಾಜಧಾನಿಯಲ್ಲಿ ಸರಣಿ ಅಪಘಾತ (Road Accident) ಸಂಭವಿಸಿದ್ದು, ಒಬ್ಬರ ಜೀವಹಾನಿಯಾಗಿದೆ. ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಪ್ಲೈ ಓವರ್‌ನಲ್ಲಿ (electronic city fly over) ಕೊನಪ್ಪನ ಅಗ್ರಹಾರದ ಬಳಿ ಘಟನೆ ನಡೆದಿದೆ.

ಬೊಲೇರೊ ಪಿಕ್‌ಅಪ್‌ ವಾಹನಕ್ಕೆ ಕ್ಯಾಂಟರ್ ವೇಗವಾಗಿ ಬಂದು ಹಿಂಬದಿಯಿಂದ ಅಪ್ಪಳಿಸಿದೆ. ಘಟನೆಯಲ್ಲಿ ಪಿಕಪ್‌ನ ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕ್ಯಾಂಟರ್ ಚಾಲಕ‌ ಮನ್ಸೂರು ಹಾಗು ಪಿಕಪ್‌ ಚಾಲಕ ಹರೀಶ್ ಗೆ ಗಂಭೀರ ಗಾಯಗಳಾಗಿವೆ.

ಗಾಯಗೊಂಡವರನ್ನು ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತ ಪರಿಣಾಮ ಫ್ಲೈ ಓವರ್ ಮೇಲ್ಭಾಗ ಬಹಳ ಹೊತ್ತು ಸಂಚಾರಕ್ಕೆ ಅಡಚಣೆಯುಂಟಾಯಿತು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಸಂಚಾರಿ ಪೊಲೀಸರು ಅಫಘಾತಕ್ಕೆ ಒಳಗಾದ ವಾಹನಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version