Site icon Vistara News

Bengaluru Bandh : ಪೊಲೀಸರಿಗೆ ಕೊಟ್ಟ ಊಟದಲ್ಲಿ ಸಿಕ್ಕಿತು ಫ್ರೈಡ್‌ ಇಲಿ!

Rat found in food served to police

ಬೆಂಗಳೂರು: ಬೆಂಗಳೂರು ಬಂದ್‌ (Bengaluru Bandh) ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿಯಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಹೀಗಾಗಿ ಬೆಳ್ಳಂ ಬೆಳಗ್ಗೆ ಪೊಲೀಸರು ಕೆಲಸಕ್ಕೆ ಹಾಜರಾಗಿದ್ದರು. ಬಂದೋಬಸ್ತ್‌ಗೆ ಬಂದಿದ್ದ ಪೊಲೀಸರಿಗೆ ಪ್ಯಾಕೇಟ್‌ ಮೂಲಕ ತಿಂಡಿಯನ್ನು ವಿತರಿಸಲಾಗಿತ್ತು. ಆದರೆ ಕೊಟ್ಟ ತಿಂಡಿ ಪ್ಯಾಕೆಟ್‌ನಲ್ಲಿ ಇಲಿಯೊಂದು (Rat Food) ಪತ್ತೆಯಾಗಿದೆ.

ಯಶವಂತಪುರ ವ್ಯಾಪ್ತಿಯಲ್ಲಿ ಸಿಬ್ಬಂದಿಗೆ ಕೊಟ್ಟ ತಿಂಡಿಯಲ್ಲಿ ಇಲಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಟ್ರಾಫಿಕ್‌ ಕಮಿಷನರ್‌ ಎಂ.ಎನ್‌ ಅನುಚೇತ್ ಅಸಮಾಧಾನ ಹೊರಹಾಕಿದ್ದಾರೆ. ಜತೆಗೆ ಊಟ ಸಪ್ಲೈ ಮಾಡಿದವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಊಟದಲ್ಲಿ ಇಲಿ ಕೊಟ್ಟ ಹಿನ್ನೆಲೆ ಹೋಟೆಲ್‌ ಮೇಲೆ ಕ್ರಿಮಿನಲ್ ಕೇಸ್ ಹಾಕಲು ಸೂಚಿಸಿದ್ದಾರೆ. ಜತೆಗೆ ಯಶವಂತಪುರ ಸಂಚಾರ ಮತ್ತು ಟ್ರಾಫಿಕ್ ಇನ್‌ಸ್ಪೆಕ್ಟರ್‌ಗಳಿಗೆ ನೋಟಿಸ್‌ ನೀಡಿದ್ದಾರೆ.

ಇದನ್ನೂ ಓದಿ: Assault Case : ಯುವತಿ ಸ್ನಾನ ಮಾಡುವಾಗ ವಿಡಿಯೊ ಮಾಡಿದ ಕಿರಾತಕ!

ಈ ಸಂಬಂಧ ಅನುಚೇತ್‌ ವಿಚಾರಣೆ ನಡೆಸಿದಾಗ, ಯಶವಂತಪುರದಲ್ಲಿರುವ ಅಶೋಕ್ ಟಿಫಿನ್ ಸೆಂಟರ್‌ನಲ್ಲಿ ಒಟ್ಟು 180 ಜನಕ್ಕೆ ತಿಂಡಿಯನ್ನು ಸಿದ್ದಪಡಿಸಿಲಾಗಿತ್ತು. ಬೆಳಗ್ಗೆ 7-30ಕ್ಕೆ ತಿಂಡಿಯನ್ನು ವಿತರಿಸಲಾಗಿದೆ. ಈ ವೇಳೆ ಸಿಬ್ಬಂದಿಯೊಬ್ಬರು ಪ್ಯಾಕೆಟ್‌ ತೆರೆದಾಗ ಇಲಿ ಪತ್ತೆಯಾಗಿದೆ. ಕೂಡಲೇ ತಮ್ಮ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ತಿಂಡಿ ತಿನ್ನದಂತೆ ಇತರೆ ಸಿಬ್ಬಂದಿಗೆ ತಿಳಿಸಿದ್ದಾರೆ. ಹೀಗಾಗಿ ಯಾವ ಸಿಬ್ಬಂದಿ ತಿಂಡಿ ಸೇವಿಸಿಲ್ಲ. ಇದರಿಂದ ಆಗಬಹುದಾದ ಅನುಹಾತವೊಂದು ತಪ್ಪಿದೆ ಎಂದು ಮಾಹಿತಿ ನೀಡಿದ್ದಾರೆ.

ಮೂರು ಹೊತ್ತಿನ ಊಟಕ್ಕೆ ಸರ್ಕಾರ 200 ರೂ. ಕೊಡುತ್ತದೆ. ಗುಣಮಟ್ಟದ ಊಟ ಯಾಕಾಗಿ ಕೊಟ್ಟಿಲ್ಲ ಎಂದು ಅಧಿಕಾರಿಗಳ ಮೇಲೆ ಅನುಚೇತ್ ಗರಂ ಆದರು. ಸದ್ಯ ಕಳಪೆ ತಿಂಡಿ ಕೊಟ್ಟಿರುವ ಹೋಟೆಲ್‌ ವಿರುದ್ಧ ಕ್ರಿಮಿನಲ್‌ ಕೇಸ್‌ ಹಾಕಲು ಆದೇಶಿಸಿದ್ದಾರೆ. ಹಗಲಿರುಳು ಕಷ್ಟಪಡುವ ಸಿಬ್ಬಂದಿಗೆ ಒಂದು ಹೊತ್ತಿಗೆ ಗುಣಮಟ್ಟದ ಆಹಾರ ಕೊಡದೆ ಇರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version