Site icon Vistara News

Bengaluru Bandh : ಖಾಸಗಿಯವರು ಹಣ ಕೇಳುತ್ತಿದ್ದಾರೆ, ವಾಸ್ತವಕ್ಕೆ ದೂರವಾದ ಬೇಡಿಕೆ ಈಡೇರಿಸಲು ಸಾಧ್ಯವೇ?; ಸಿದ್ದರಾಮಯ್ಯ ಪ್ರಶ್ನೆ

Siddaramaiah Bandh

ಬೆಂಗಳೂರು: ಖಾಸಗಿ ಪ್ರಯಾಣಿಕ ವಾಹನಗಳ ಒಕ್ಕೂಟ ಕರೆ ನೀಡಿರುವ ಬೆಂಗಳೂರು ಬಂದ್‌ (Bengaluru bandh) ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga reddy) ಅವರು ಪ್ರತಿಕ್ರಿಯೆ ನೀಡಿದ್ದು, ಖಾಸಗಿಯವರ ವಾಸ್ತವಕ್ಕೆ ದೂರವಾದ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವೇ ಎಂದು ಕೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ʻʻಮಹಿಳೆಯರಿಗೆ ಅನುಕೂಲ ಮಾಡಿಕೊಡಲು ಶಕ್ತಿ ಯೋಜನೆ ರೂಪಿಸಿದ್ದೇವೆ. ಖಾಸಗಿ ಬಸ್‌ನವರು ಶಕ್ತಿ ಯೋಜನೆಯಿಂದ (Shakthi Scheme) ನಮಗೆ ನಷ್ಟ ಆಗುತ್ತಿದೆ, ಹಣ ಕೊಡಿ ಅಂತ ಕೇಳುತ್ತಿದ್ದಾರೆ. ಅದೆಲ್ಲ ಸಾಧ್ಯವೇ? ವಾಸ್ತವಕ್ಕೆ ದೂರವಾದ ಬೇಡಿಕೆಗಳನ್ನು ಮುಂದಿಟ್ಟರೆ ಅದನ್ನು ಈಡೇರಿಸುವುದು ಸಾಧ್ಯವೇ ಎಂದು ಕೇಳಿದ್ದಾರೆ.

ʻʻಬಂದ್ ಮಾಡುವುದು, ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದ ಜೀವಾಳ. ಬಂದ್ ಹಕ್ಕಿಕ್ಕಲು ಅವಕಾಶ ಇಲ್ಲ.
ಕಾನೂನಿಗೆ ತೊಂದರೆ ಆಗದ ರೀತಿಯಲ್ಲಿ ಬಂದ್ ಮಾಡಲಿʼʼ ಎಂದು ಹೇಳಿದ ಸಿದ್ದರಾಮಯ್ಯ ಅವರು, ಬೇಡಿಕೆಗಳ ಬಗ್ಗೆ ಸಚಿವ ರಾಮಲಿಂಗಾ ರೆಡ್ಡಿ ಗಮನ ಹರಿಸುತ್ತಾರೆʼʼ ಎಂದರು.

ಅಷ್ಟೆಲ್ಲ ಹಣ ಕೊಡಲು ಸಾಧ್ಯವೇ? ರಾಮಲಿಂಗಾ ರೆಡ್ಡಿ ಪ್ರಶ್ನೆ

ಖಾಸಗಿ ವಾಹನ ಮಾಲೀಕರ ಸಂಘಗಳ ಒಕ್ಕೂಟದ ಬಂದ್‌ ಕರೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೂ ಪ್ರತಿಕ್ರಿಯಿಸಿದ್ದಾರೆ. ಖಾಸಗಿ ಬಸ್‌ ಮಾಲೀಕರ ಸಂಘದ ಬೇಡಿಕೆ ಈಡೇರಿಸಬೇಕಾದರೆ ನಮಗೆ 1000 ಕೋಟಿ ರೂ. ಬೇಕು, ಅದೇ ಹೊತ್ತಿಗೆ ಆಟೋ ಚಾಲಕರು ತಿಂಗಳಿಗೆ 10000 ರೂ. ಕೊಡಬೇಕು ಎನ್ನುತ್ತಿದ್ದಾರೆ. ಹಾಗೆ ಕೊಟ್ಟರೆ 4400 ಕೋಟಿ ರೂ. ಬೇಕು. ಇಷ್ಟೆಲ್ಲ ಕೊಡಲು ಸಾಧ್ಯವೇ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ನಾವು ಅವರ ಹಲವು ಬೇಡಿಕೆಗಳನ್ನು ಈಡೇರಿಸಲು ಸಿದ್ಧರಿದ್ದೇವೆ. ಕೆಲವು ವಿಷಯಗಳು ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ನಲ್ಲಿವೆ ಎಂದು ಅವರು ಹೇಳಿದರು.

ಪ್ರತಿಭಟನೆ ಸರಿಯಲ್ಲ ಎಂದ ಬಸವರಾಜ ರಾಯರೆಡ್ಡಿ

ʻʻಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಸಿಬ್ಬಂದಿಗಳು ಬಂದ್‌ ನಡೆಸುತ್ತಿರುವುದು ಸರಿಯಲ್ಲʼʼ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ : Bengaluru bandh : ಅನಿಲ್‌ ಕುಂಬ್ಳೆಗೂ ತಟ್ಟಿದ ಬಂದ್‌ ಬಿಸಿ; ವಿಮಾನ ನಿಲ್ದಾಣದಿಂದ ಬಸ್ಸಿನಲ್ಲೇ ಮನೆಗೆ ತೆರಳಿದ ಕ್ರಿಕೆಟರ್

ʻʻರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದಿರುವುದು ಮಹಿಳೆಯರಿಗೆ ಬಹಳಷ್ಟು ಅನುಕೂಲಕರವಾಗಿದೆ. ಇದರಿಂದ ಖಾಸಗಿ ವಾಹನ ಸಿಬ್ಬಂದಿಗಳಿಗೆ ತೊಂದರೆ ಆಗ್ತಾ ಇದೆ ಎನ್ನುವುದರಲ್ಲಿ ಅರ್ಥ ಇಲ್ಲ. ಜನಕಲ್ಯಾಣ ಕೆಲಸ ಮಾಡುವಾಗ ಖಾಸಗಿ ವಲಯದವರಿಗೆ ತೊಂದರೆ ಆಗಿರಬಹುದು. ಸಿಎಂ ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುತ್ತಾರೆʼʼ ಎಂದು ಹೇಳಿದರು.

ʻʻಕೆಲವು ಸಮಾಜಘಾತುಕ ರಾಜಕೀಯ ಶಕ್ತಿಗಳು ಇಂಥದ್ದಕ್ಕೆ ಬೆಂಬಲಿಸುತ್ತಿರುವುದು ಸರಿ ಅಲ್ಲ. ಪ್ರತಿಭಟನೆಗಳಿಯುವುದಕ್ಕಿಂತ ಸಿಎಂ ಜೊತೆ ಈ ಬಗ್ಗೆ ಅವರು ಚರ್ಚಿಸುವುದು ಸೂಕ್ತ. ಸಿಎಂ ಜೊತೆ ಚರ್ಚಿಸಿ ಅವರು ಸೂಕ್ತ ಪರಿಹಾರ ಕಂಡುಕೊಳ್ಳುವುದು ಒಳಿತುʼʼ ಎಂದರು ಬಸವರಾಜ ರಾಯರೆಡ್ಡಿ.

Exit mobile version