Site icon Vistara News

Bengaluru Murder : ಪ್ರೀತಿಗಾಗಿ ಕೊಲೆಯಾದ ಯುವಕ; ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯನ್ನು ಕೊಚ್ಚಿ ಕೊಂದ ಹಂತಕರು

Bengaluru Murder case

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊಲೆ ಕೇಸ್‌ಗಳು (Murder Case) ಹೆಚ್ಚಾಗುತ್ತಿವೆ. ಸದ್ಯ ಪ್ರತ್ಯೇಕ ಕಡೆಗಳಲ್ಲಿ ಇಬ್ಬರು ಬರ್ಬರವಾಗಿ ಹತ್ಯೆಯಾಗಿದ್ದಾರೆ. ಬೆಂಗಳೂರಿನ (Bengaluru Murder) ಮಲ್ಲೇಶ್ವರದಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಕೊಲೆಯಾಗಿದ್ದಾನೆ. ಪನ್ನಿರ್ ಸೆಲ್ವಂ‌ (37) ಮೃತ ದುರ್ದೈವಿ.

ಪನ್ನೀರ್ ಸೆಲ್ವಂ ಮಲ್ಲೇಶ್ವರಂನ ಎಂಡಿ ಬ್ಲಾಕ್ ನಿವಾಸಿಯಾಗಿದ್ದು, ನಿನ್ನೆ ಭಾನುವಾರ ಸಂಜೆ ಕೆ.ಸಿ ಜನರಲ್ ಆಸ್ಪತ್ರೆ ಪಾರ್ಕ್‌ನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಗಾರೆ ಕೆಲಸ ಮಾಡಿಕೊಂಡಿದ್ದ ಪನ್ನೀರ್‌ ಸೆಲ್ವಂ ಹೆಂಡತಿ, ನಾಲ್ವರು ಮಕ್ಕಳ ಜತೆ ವಾಸವಾಗಿದ್ದ.

ನಿನ್ನೆ ಭಾನುವಾರ ಸಂಜೆ ಪಾರ್ಕ್ ಬಳಿ ಮೂವರು ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗಿದ್ದು, ಇಬ್ಬರು ದುಷ್ಕರ್ಮಿಗಳು ಕಲ್ಲು ಎತ್ತಿಹಾಕಿ ಸೆಲ್ವಂನನ್ನು ಕೊಲೆ‌ ಮಾಡಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

ಇದನ್ನೂ ಓದಿ: Murder case : ಪಕ್ಕದಲ್ಲಿ ನಿಂತು ಮೂತ್ರ ವಿರ್ಸಜನೆ ಮಾಡಿದ್ದಕ್ಕೆ ಸಿಟ್ಟು; ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ

ಪ್ರೀತಿ ವಿಷ್ಯಕ್ಕೆ ಕೊಲೆಯಾದ ಯುವಕ

ಬೆಂಗಳೂರಿನಲ್ಲಿ ಯುವಕನ ಬರ್ಬರ ಕೊಲೆಯಾಗಿದೆ. ಅಬ್ಬಿಗೆರೆ ನಿವಾಸಿ ಮಂಜುನಾಥ್ (17) ಕೊಲೆಯಾದವನು. ಶನಿವಾರ ತಡರಾತ್ರಿ ಮಂಜುನಾಥ್ ತಲೆಗೆ ರಾಡ್‌ನಿಂದ ಹೊಡೆದು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.

ಬಳಿಕ ಅಬ್ಬಿಗೆರೆ ಬಳಿಯ ಖಾಲಿ ಜಾಗದಲ್ಲಿ ಮಂಜುನಾಥ್‌ ಶವ ಪತ್ತೆಯಾಗಿದೆ. ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಪ್ರೀತಿ ವಿಚಾರಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version