ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ಹೋಗಿ ಇಬ್ಬರ ಕೊಲೆಯಾಗಿದೆ.
ಕುಡಿದ ಅಮಲಿನಲ್ಲಿ ಇಬ್ಬರ ನಡುವೆ ಗಲಾಟೆಯಾಗಿ, ಮಚ್ಚಿನಿಂದ ಹೊಡೆದು ವ್ಯಕ್ತಿಯ ಕೊಲೆ ಮಾಡಿದ ಘಟನೆ ಅಲಸನಹಳ್ಳಿ ಮುಖ್ಯ ರಸ್ತೆಯ ಎಸ್ಎಸ್ಎಸ್ ಬಾರ್ ಬಳಿ ನಡೆದಿದೆ. ಮುನಿಯಪ್ಪ (45) ಕೊಲೆಯಾದ ವ್ಯಕ್ತಿ. ಶ್ರೀಧರ್ ಎಂಬಾತ ಆರೋಪಿಯಾಗಿದ್ದಾನೆ. ಶ್ರೀಧರ್ ಮತ್ತು ಮೃತ ಮುನಿಯಪ್ಪ ಪರಿಚಿತರಾಗಿದ್ದು, ರಾತ್ರಿ ಕುಡಿದ ನಂತರ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಮುನಿಯಪ್ಪನನ್ನು ಶ್ರೀಧರ ಮಚ್ಚಿನಿಂದ ಹೊಡೆದು ಕೊಂದಿದ್ದಾನೆ, ವರ್ತೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ, ಹಳೇ ದ್ವೇಷದಿಂದ ಚಾಕು ಇರಿದು ಸ್ನೇಹಿತನ ಕೊಲೆ ಮಾಡಿದ ಘಟನೆ ಕೋಣನಕುಂಟೆಯಲ್ಲಿ ನಡೆದಿದೆ. ಶರತ್ ಕುಮಾರ್ (25) ಕೊಲೆಯಾದ ಯುವಕ. ಲೋಕೇಶ್ ಎಂಬಾತ ಕೊಲೆ ಮಾಡಿದ್ದಾನೆ. ಇಬ್ಬರೂ ಸ್ನೇಹಿತರು ಹಣಕಾಸಿನ ವಿಚಾರಕ್ಕೆ ಜಗಳ ಮಾಡಿಕೊಂಡು ಬೇರೆಯಾಗಿದ್ದರು. ಇದೇ ವಿಚಾರ ಸಂಬಂಧ ಇಬ್ಬರ ನಡುವೆ ಜಗಳ ವಿಕೋಪಕ್ಕೆ ಹೋಗಿದ್ದು, ಮೊದಲು ಲೋಕೇಶ್ಗೆ ಚಾಕುವಿನಿಂದ ಇರಿಯಲು ಶರತ್ ಮುಂದಾಗಿದ್ದ. ಈ ಈ ವೇಳೆ ಶರತ್ ಬಳಿಯ ಚಾಕು ಕಸಿದುಕೊಂಡು ಲೋಕೇಶ್ ಅವನಿಗೆ ಇರಿದಿದ್ದಾನೆ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Murder at Bhadravati : ಹಣಕಾಸಿನ ವಿಚಾರದಲ್ಲಿ ಗಲಾಟೆ ; ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ