Site icon Vistara News

Bengaluru News : ʻ ಹುಡುಗ- ಹುಡುಗಿಯರ ಸರ್ವಿಸ್ ಬೇಕಾʼ ಎಂದವನ ಹೆಡೆಮುರಿ ಕಟ್ಟಿದ ಖಾಕಿ ಪಡೆ

Bengaluru News Physical Abuse

ಬೆಂಗಳೂರು: ಹುಡುಗ ಹಾಗೂ ಹುಡುಗಿಯರ ಸರ್ವಿಸ್ ಬೇಕಾ ಎಂದು ಯುವಕ-ಯುವತಿಯರಿಗೆ ಮಸೇಜ್‌ ಮಾಡುತ್ತಿದ್ದ‌ (Physical Abuse) ಕಿರಾತಕನನ್ನು (Bengaluru News) ಖಾಕಿ ಪಡೆ ಬಂಧಿಸಿದೆ. ಪೂರ್ವ ವಿಭಾಗ ಸೆನ್ ಪೊಲೀಸರು ಆನಂದ್ ಶರ್ಮಾ ಎಂಬಾತನನ್ನು ಬಂಧಿಸಿದ್ದಾರೆ.

ಈ ದುಷ್ಟ ಬೇರೆ ಬೇರೆ ನಂಬರ್‌ಗಳನ್ನು ಬಳಸಿ ಫೋನ್‌ ಮಾಡಿ ಹುಡುಗಿಯರ ಸರ್ವಿಸ್ ಬೇಕಾ ಎಂದು ಕರೆ ಮಾಡುತ್ತಿದ್ದ. ಸುಭಿ ಎಂಬಾಕೆಗೂ ಕರೆ ಮಾಡಿ ಟಾರ್ಚರ್‌ ಕೊಟ್ಟಿದ್ದ. ಹೀಗಾಗಿ ಆಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಮೊಬೈಲ್ ನಂಬರ್ ಆಧರಿಸಿ ಆರೋಪಿ ಆನಂದ್‌ ಶರ್ಮಾನನ್ನು ಪೂರ್ವ ವಿಭಾಗ ಸೆನ್ ಪೊಲೀಸರು ಬಂಧಿಸಿದ್ದಾರೆ. ಶೇಷಾದ್ರಿಪುರಂ ವಿ ಸ್ಟೇಜ್ ಪಿಜಿ ಬಳಿ ಆರೋಪಿಯನ್ನು ಬಂಧಿಸಿ, ಆತ ಬಳಿಯಿದ್ದ ಮೊಬೈಲ್ ಫೋನ್ ವಶಪಡಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ.

ಇದನ್ನೂ ಓದಿ: Self Harming : ನಿದ್ದೆ ಇಲ್ಲದೇ ಒದ್ದಾಟ; ಬೇವಿನ ಮರಕ್ಕೆ ನೇಣು ಬಿಗಿದುಕೊಂಡ ಆಟೋ ಚಾಲಕ

ಮನೆಗೆ ನುಗ್ಗಿ ಯುವಕನಿಂದ ಬಾಲಕಿ ಮೇಲೆ ಅಮಾನುಷ ಹಲ್ಲೆ; ವಿಡಿಯೊ ನೋಡಿ ಜನಾಕ್ರೋಶ

ನವದೆಹಲಿ: ಅಪ್ರಾಪ್ತ ವಯಸ್ಸಿನ ಬಾಲಕಿಗೆ (minor girl) ದುಷ್ಕರ್ಮಿಯೊಬ್ಬ ಅಮಾನುಷವಾಗಿ ಥಳಿಸಿರುವ ಘಟನೆ ನಡೆದಿದ್ದು, ಇದರ ವಿಡಿಯೋ (Viral Video) ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ ಆಗಿ ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿದೆ. ತಮ್ಮ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಯಸುವ ವ್ಯಕ್ತಿಯೊಬ್ಬ ಹುಡುಗಿ ಮೇಲೆ ಹಲ್ಲೆ ಮಾಡಿರುವುದನ್ನು ಈ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ.

ಲಕ್ನೋದ ಬಿ-376 ವಿಶಾಲ್ ಖಂಡ್‌ನ ಗೋಮತಿ ನಗರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈ ವಿಡಿಯೋವನ್ನು ಆದಿತ್ಯ ಕಮಲ್ ಪಾಂಡೆ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಪ್ರಬಲ್ ಪ್ರತಾಪ್ ಸಿಂಗ್ ಎಂಬ ವ್ಯಕ್ತಿ ಅಪ್ರಾಪ್ತ ಬ್ರಾಹ್ಮಣ ಹುಡುಗಿಯ ಮನೆಗೆ ಬಲವಂತವಾಗಿ ಪ್ರವೇಶಿಸಿ, ಅಶ್ಲೀಲವಾಗಿ ನಿಂದಿಸುತ್ತಾನೆ. ಫೋನ್‌ನಲ್ಲಿ ಯಾರೊಂದಿಗಾದರೂ ಮಾತನಾಡುವಂತೆ ಮಾಡುತ್ತಾನೆ. ಈ ಅಪ್ರಾಪ್ತ ಬಾಲಕಿ ಯಾಕೆ ಹಾಗೆ ಹೇಳುತ್ತೀರಿ ಎಂದು ಪ್ರಶ್ನಿಸಿದಾಗ ಆತ ಬಾಲಕಿಗೆ ಕಪಾಳಮೋಕ್ಷ ಮಾಡಿದ್ದಾನೆ. ಬಾಲಕಿಯ ಫೋನ್‌ಗಳನ್ನು ಒಡೆಯಲಾಗಿದೆ, ಬಟ್ಟೆ ಹರಿದು ಹಾಕಲಾಗಿದೆ. ಆಕೆಗೆ ಸಾಕಷ್ಟು ಹಿಂಸೆ ನೀಡಲಾಗಿದೆ. ವ್ಯಕ್ತಿಯು ರಿವಾಲ್ವರ್ ಕೂಡ ಹೊಂದಿದ್ದ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಲಾಗಿದೆ.

ಆರೋಪಿಯನ್ನು ಬಂಧಿಸಿರುವ ಕುರಿತು ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ವಿಡಿಯೋದಲ್ಲಿರುವ ಬಾಲಕಿಯನ್ನು ದೀಪಶಿಖಾ ತಿವಾರಿ ಎಂದು ಗುರುತಿಸಲಾಗಿದ್ದು, ಆ ವ್ಯಕ್ತಿ ಅವರ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಯಸಿದ್ದಾರೆ ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version