Site icon Vistara News

Bengaluru News : ಕಿಡಿಗೇಡಿಗಳ ದ್ವೇಷದ ಕಿಚ್ಚು; ಮನೆ ಮುಂದೆ ನಿಲ್ಲಿಸಿದ್ದ ನಾಲ್ಕು ಬೈಕ್‌ಗಳು ಸುಟ್ಟು ಕರಕಲು

Bengaluru News Fire break out From know persons

ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ತಡರಾತ್ರಿ ನಾಲ್ಕು ಬೈಕ್‌ಗಳಿಗೆ ಬೆಂಕಿ ಇಟ್ಟು ಕಿರಾತಕರು ಪರಾರಿ ಆಗಿದ್ದಾರೆ. ದ್ವೇಷದ ಹಿನ್ನೆಲೆಯಲ್ಲಿ ಈ ರೀತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರಿನ ಚಾಮುಂಡಿನಗರ ಸಮೀಪ ಘಟನೆ (Bengaluru News) ನಡೆದಿದೆ.

ಬೆಂಕಿಯ ಕಿನ್ನಾಲಿಗೆಗೆ ಬೈಕ್‌ಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಬೆಂಕಿಯ ತೀವ್ರತೆಗೆ ಬೈಕ್ ಸೇರಿದಂತೆ ಮನೆಯ ಕಿಟಕಿ ಗೋಡೆಗೂ ಬೆಂಕಿ ತಗುಲಿದೆ. ಅದೃಷ್ಟವಶಾತ್‌ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿ ಉರಿಯುತ್ತಿದ್ದಂತೆ ಮನೆಯಿಂದ ಎಲ್ಲರೂ ಹೊರ ಬಂದು ನಂದಿಸಲು ಮುಂದಾಗಿದ್ದಾರೆ.

ಗಾಡಿಗಳು ನಿಲ್ಲಿಸಿದ್ದ ಪಕ್ಕದಲ್ಲೇ ಇದ್ದ ಗೋಡೆಗೆ ಹೊಂದಿಕೊಂಡ ಮನೆಯ ನಿವಾಸಿ ವಿಜಯ್ ಎಚ್ಚರಗೊಂಡಿದ್ದಾರೆ. ಬೆಂಕಿ ಕಂಡು ಹೊರಗಡೆ ದೌಡಾಯಿಸಿ ಕೂಗಲು ಮುಂದಾಗಿದ್ದಾರೆ. ಅಕ್ಕಪಕ್ಕದ ನಿವಾಸಿಗಳು ಬರುವಷ್ಟರಲ್ಲಿ ಅದಾಗಲೇ ನಾಲ್ಕು ಬೈಕ್‌ಗಳಿಗೆ ಬೆಂಕಿ ಹಬ್ಬಿ, ಇನ್ನು ಉಳಿದಂತೆ ಮೂರು ಬೈಕ್ ಹಾಗೂ ಒಂದು ಕಾರನ್ನು ಬೇರೆಡೆ ನಿಲ್ಲಿಸಿದ್ದಾರೆ. ಇದರಿಂದಾಗಿ ಒಂದಿಷ್ಟು ವಾಹನಗಳು ಹಾನಿಯಿಂದ ಪಾರಾಗಿತ್ತು.

ಉಸಿರುಗಟ್ಟಿ ಮೃತಪಟ್ಟ ಪಕ್ಷಿಗಳು

ಮನೆಯವರಿಗೆಲ್ಲಾ ಅಚ್ಚು ಮೆಚ್ಚಾಗಿದ್ದ ಎರಡು ಪಕ್ಚಿಗಳು ದಟ್ಟ ಹೊಗೆಗೆ ಉಸಿರುಗಟ್ಟಿ ಸಾವನ್ನಪ್ಪಿವೆ. ಇನ್ನು ಘಟನೆಯ ಹಿಂದೆ ಕಿಡಿಗೇಡಿಗಳು ದ್ವೇಷಕ್ಕಾಗಿ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಬೈಕ್‌ಗಳನ್ನು ನಿಲ್ಲಿಸಿದ್ದ ಜಾಗದಲ್ಲಿ ಯಾವುದೇ ಎಲೆಕ್ಟ್ರಿಕ್ ವಾಹನಗಳಿರಲ್ಲ. ಮೇಲಾಗಿ ಶಾರ್ಟ್ ಸರ್ಕ್ಯೂಟ್‌ ಆಗುವ ಸಾಧ್ಯತೆಯೂ ಇರಲಿಲ್ಲ.

ಜೆ.ಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‌ಘಟನೆ ನಡೆದಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಯಾರು, ಯಾವ ಕಾರಣಕ್ಕಾಗಿ ಈ ರೀತಿಯ ಕೃತ್ಯ ಎಸಗಿದ್ದಾರೆ ಎಂಬುದರ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ. ಸುತ್ತಮುತ್ತಲ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

ಇದನ್ನೂ ಓದಿ: Crime News: ಎಚ್ಚರ! ರಮ್ಜಾನ್‌ ಕಿಟ್ ಹೆಸರಲ್ಲಿ ನಿಮ್ಮನ್ನೂ ದೋಚಬಹುದು; ನಗರದಲ್ಲಿ ನಡೆಯುತ್ತಿದೆ ಹೊಸ ಮಾದರಿಯ ರಾಬರಿ

ರಾಜಧಾನಿಯಲ್ಲಿ ಮತ್ತೊಂದು ರೋಡ್‌ ರೇಜ್‌, ಹಿಂಬಾಲಿಸಿಕೊಂಡು ಬಂದು ಅಟ್ಟಹಾಸ, ಇಲ್ಲಿದೆ ವಿಡಿಯೋ

ಬೆಂಗಳೂರು: ರಾಜಧಾನಿಯ ಬೀದಿಗಳಲ್ಲಿ (Bangalore crime) ಬೆಚ್ಚಿ ಬೀಳಿಸುವಂಥ ರೋಡ್‌ ರೇಜ್‌ (Road Rage) ಪ್ರಕರಣಗಳು ಹೆಚ್ಚುತ್ತಿವೆ. ಒಂಟಿಯಾಗಿ ಅಥವಾ ರಾತ್ರಿ ಡ್ರೈವ್‌ ಮಾಡುವವರನ್ನು ಟಾರ್ಗೆಟ್‌ ಮಾಡಿ ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿ ಹಲ್ಲೆ (Assault) ಮಾಡುವುದು, ವಾಹನಕ್ಕೆ ಹಾನಿ ಮಾಡುವುದು ನಡೆಯುತ್ತಿದೆ. ಒಂದೇ ವಾರದಲ್ಲಿ ಎರಡನೇ ಅಂಥ ಪ್ರಕರಣ ವರದಿಯಾಗಿದೆ.

ಸರ್ಜಾಪುರ ರಸ್ತೆಯಲ್ಲಿ ಮಾರ್ಚ್‌ 29ರ ರಾತ್ರಿ 10:40ರ ಸುಮಾರಿಗೆ ಈ ಘಟನೆ ನಡೆದಿದೆ. ಕಾರಿನಲ್ಲಿ ‌ಪ್ರಯಾಣಿಸುತ್ತಿದ್ದ ದಂಪತಿಗಳನ್ನು ಅಡ್ಡಗಟ್ಟಿ ಬೈಕ್ ಸವಾರನೊಬ್ಬ ಕಿರಿಕ್ ಮಾಡಿದ್ದಾನೆ. ಓವರ್‌ಟೇಕ್ (overtake) ಮಾಡುವ ವಿಚಾರಕ್ಕೆ ಗಲಾಟೆಯಾಗಿ ಕಿರಿಕ್ ಮಾಡಿದ್ದಾನೆ ಎನ್ನಲಾಗಿದೆ.

ಓವರ್‌ಟೇಕ್‌ ವಿಚಾರದಲ್ಲಿ ತಗಾದೆ ಸೃಷ್ಟಿಯಾಗಿದ್ದು, ಯುವಕ ಕಾರಿನ ಹಿಂಬದಿಯಿಂದ ಸುಮಾರು 2 ಕಿಲೋಮೀಟರ್‌ನಷ್ಟು ಅಟ್ಟಿಸಿಕೊಂಡು ಬಂದಿದ್ದಾನೆ. ಸಿಗ್ನಲ್‌ನಲ್ಲಿ ಕಾರು ನಿಲ್ಲಿಸಿದಾಗ ಅದಕ್ಕೆ ಅಡ್ಡ ಬಂದು ನಿಲ್ಲಿಸಿ ಧಮಕಿ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಕಾರಿನಲ್ಲಿ ದಂಪತಿ ಪ್ರಯಾಣಿಸುತ್ತಿದ್ದು, ಮಹಿಳೆ ಭಯದಿಂದ ಚೀರಿಕೊಂಡಿದ್ದಾರೆ. ನಂತರ ದಂಪತಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ದಂಪತಿ ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಇನ್ನೊಂದು ರೇಡ್‌ ರೇಜ್‌

ಇಂಥದೇ ಇನ್ನೊಂದು ಘಟನೆ ಕಳೆದ ವಾರ ವರದಿಯಾಗಿತ್ತು. ರಾತ್ರಿ ಸಮಯದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಯುವತಿಯರನ್ನು ಬೈಕ್‌ನಲ್ಲಿ ಚೇಸ್‌ ಮಾಡಿಕೊಂಡು ಬಂದು ಪುಂಡರು ಕಿರುಕುಳ ನೀಡಿದ್ದರು. ದಾರಿಯುದ್ದಕ್ಕೂ ಚೇಸ್ ಮಾಡಿದ್ದಲ್ಲದೇ ಬೈಕ್‌ ಮೂಲಕ ಕಾರನ್ನು ಸುತ್ತುವರಿದು ಟಾರ್ಚರ್ ನೀಡಿದ್ದರು. ಕಿಡಿಗೇಡಿಗಳು ಮಡಿವಾಳ, ಸೆಂಟ್ ಜಾನ್ಸ್ ಅಲ್ಲಿಂದ ಕೋರಮಂಗಲವರೆಗೂ ಹಿಂಬಾಲಿಸಿಕೊಂಡು ಬಂದಿದ್ದಾರೆ. ಇದರಿಂದ ಆತಂಕಗೊಂಡ ಮಹಿಳೆಯರು ಸಹಾಯಕ್ಕಾಗಿ ಕೂಡಲೇ 112ಗೆ ಸಹಾಯವಾಣಿಗೆ ಕರೆ ಮಾಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಅಲರ್ಟ್‌ ಆದ ಪೊಲೀಸರು ಯುವತಿಯರು ಇದ್ದ ಜಾಗಕ್ಕೆ ಬಂದಿದ್ದಾರೆ. ಪೊಲೀಸರನ್ನು ಕಂಡೊಡನೆ ಪುಂಡರು ಎಸ್ಕೇಪ್ ಆಗಿದ್ದಾರೆ.

ಈ ಘಟನೆ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿತ್ತು. ಇಬ್ಬರು ಯುವತಿಯರು ಕಾರಿನಲ್ಲಿ ಮಡಿವಾಳ ಕಡೆಯಿಂದ ಕೋರಮಂಗಲ ಕಡೆ ಹೊರಟಿದ್ದರು. ಆ ವೇಳೆ ಕಾರಿನಲ್ಲಿದ್ದ ಯುವತಿಯರ ಜತೆ ಜಗನ್ನಾಥ್, ತೇಜಸ್, ಮತ್ತು ಕಣ್ಣನ್ ಎಂಬುವವರು ಕಿರಿಕ್ ಶುರು ಮಾಡಿದ್ದರು. ಈ ಮೂವರು ಬೈಕ್‌ನಲ್ಲಿ ಹೋಗುತ್ತಿದ್ದಾಗ, ಕಾರನ್ನು ಹಿಂಬಾಲಿಸಿ ಕೀಟಲೆ ಮಾಡಿದ್ದಾರೆ. ಸದ್ಯ ಪೊಲೀಸರು ಜಗನ್ನಾಥ್ ಮತ್ತು ತೇಜಸ್ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕಣ್ಣನ್ ಪರಾರಿಯಾಗಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮಡಿವಾಳ ಪೊಲೀಸ್ ಠಾಣೆಯಲ್ಲಿ (Madivala Police station) ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version